'ಸೆಕ್ಷನ್ 377' ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ರಾಗಿಣಿ
'ಸಲಿಂಗಕಾಮ ಅಪರಾಧವಲ್ಲ' ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಸಲಿಂಗಿಗಳು, ದ್ವಿಲಿಂಗಿಗಳು ಮತ್ತು ಲಿಂಗಪರಿವರ್ತನೆ ಮಾಡಿಕೊಂಡ(ಎಲ್ ಜಿಬಿಟಿಕ್ಯು) ಸಮುದಾಯದ ಸಂಭ್ರಮ ಮುಗಿಲು ಮುಟ್ಟಿದೆ . ಈ ತೀರ್ಪನ್ನ ದೇಶಾದ್ಯಂತ ಜನರು, ಸೆಲೆಬ್ರಿಟಿಗಳು ಕೂಡ ಸ್ವಾಗತಿಸಿದ್ದಾರೆ.
ಅದರಲ್ಲೂ ಚಿತ್ರರಂಗದ ಮಂದಿ ತುಂಬಾ ದೊಡ್ಡ ಮಟ್ಟದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನ ಬರಮಾಡಿಕೊಂಡಿದ್ದರು. ಪಾರೂಲ್ ಯಾದವ್, ಆರ್.ಜೆ ನೇತ್ರಾ, ನಾಗತಿಹಳ್ಳಿ ಚಂದ್ರಶೇಖರ್, 'ಆ ದಿನಗಳು' ಖ್ಯಾತಿಯ ಚೇತನ್, ನಿರ್ದೇಶಕ ಕೆ ಎಂ ಚೈತನ್ಯ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದರು.

ಇದೀಗ, ತುಪ್ಪದ ಹುಡುಗಿ ನಟಿ ರಾಗಿಣಿ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಪ್ರೀತಿಯ ಯಾರ ನಡುವೆಯಾಗಲಿ, ಅದು ನಿಜವಾದ ಪ್ರೀತಿಯಾಗಿದ್ರೆ ಅದನ್ನ ಈ ದೇಶ ನಂಬುತ್ತೆ ಎಂಬುದನ್ನ ಈ ತೀರ್ಪಿನಿಂದ ಸಾಬೀತಾಗಿದೆ. ತೀರ್ಪಿನ ಬಗ್ಗೆ ಹೆಮ್ಮೆ ಇದೆ'' ಎಂದಿದ್ದಾರೆ.
ಇದಕ್ಕೂ ಮುಂಚೆ ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಬಗ್ಗೆ ಟ್ವೀಟ್ ಮಾಡಿ ''ಯಾವ ಜೀವಿಗೂ ಹುಟ್ಟಿಗೆ ಮುಂಚೆ ತನ್ನ ಲಿಂಗ, ಜಾತಿ,ಧರ್ಮ, ದೇಶ,ಭಾಪೆಗಳ ಆಯ್ಕೆಗೆ ಸ್ವಾತಂತ್ಯ್ರವಿಲ್ಲ. ಈ ಸತ್ಯ ಸುಪ್ರೀಂಗೆ ತಡವಾಗಿಯಾದರೂ ತಿಳಿಯಿತಲ್ಲ.. ನಮ್ಮ ನ್ಯಾಯಾಂಗ ವ್ವವಸ್ಥೆಯಲ್ಲಿ ನಂಬಿಕೆ ಬಂತು. ಎಲ್ಲ ಮನುಷ್ಯರನ್ನೂ ಕೇವಲ ಮನುಷ್ಯರಂತೆ ಕಾಣೋಣ'' ಎಂದಿದ್ದರು.
ಇನ್ನು ಸಾಮಾಜಿಕ ಹೋರಾಟಗಾರು ಆ ದಿನಗಳು ಖ್ಯಾತಿಯ ನಟ ಚೇತನ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು,'' ಯಾರನ್ನಾದರೂ ಪ್ರೀತಿಸುವ ಹಕ್ಕನ್ನು ವೈಯಕ್ತಿಕ ಆಯ್ಕೆ ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ ... ವಯಸ್ಕರ ನಡುವೆ ಒಮ್ಮತದ ಲೈಂಗಿಕ ಸಂಬಂಧಗಳು ಅಪರಾಧವಲ್ಲ. ಜಸ್ಟೀಸ್! =) ಅಹಿಂಸಾ.'' ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.


Click it and Unblock the Notifications











