»   » 'ನಾಟಿ ಕೋಳಿ' ರಾಗಿಣಿ ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್

'ನಾಟಿ ಕೋಳಿ' ರಾಗಿಣಿ ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್

Posted By:
Subscribe to Filmibeat Kannada

'ನಾಟಿ ಕೋಳಿ' ಸಾರಿಗೆ ರಾಗಿಣಿ ತುಪ್ಪ ಸುರಿಯುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. ಈಗ 'ನಾಟಿ ಕೋಳಿ' ಹೇಗೆ ರೆಡಿಯಾಗುತ್ತಿದೆ ಅನ್ನುವುದನ್ನ ನೋಡುವ ಸಮಯ ಬಂದಿದೆ.

'ನಾಟಿ ಕೋಳಿ' ಅಂದ ತಕ್ಷಣ ನಾನ್ ವೆಜ್ ಪ್ರಿಯರ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂಗಾಗುವುದು ಸಹಜ. ಆದ್ರೆ, ನೀವಂದುಕೊಂಡ ಹಾಗೆ, ರಾಗಿಣಿ ಇಲ್ಲಿ 'ನಾಟಿ' ಅಲ್ಲ. ಬದಲಾಗಿ 'ಘಾಟಿ'. ಅದಕ್ಕೆ ಸಾಕ್ಷಿ ಅನ್ನುವಂತಿದೆ ಇದೀಗ ಬಿಡುಗಡೆಯಾಗಿರುವ ಫೋಟೋ. ['ನಾಟಿ ಕೋಳಿ' ಸಾರಿಗೆ 'ರಾಗಿಣಿ'ಯ ಮಿರ್ಚಿ ಮಸಾಲೆ]

Ragini Dwivedi's work out for 'Nati Koli'

ಹೌದು, ''ನಾಟಿ ಕೋಳಿ' ಫಸ್ಟ್ ಲುಕ್, ಕಮ್ಮಿಂಗ್ ಸೂನ್'' ಅಂತ ಕ್ಯಾಪ್ಷನ್ ಕೊಟ್ಟು, ಫೇಸ್ ಬುಕ್ ನಲ್ಲಿ ನಟಿ ರಾಗಿಣಿ ದ್ವಿವೇದಿ ಅಪ್ ಲೋಡ್ ಮಾಡಿರುವ ಫೋಟೋ ಇದು. ಪೋಸ್ಟ್ ಆದ ಒಂದು ಗಂಟೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ ಈ 'ನಾಟಿ ಕೋಳಿ'.

ಜಿಮ್ ನಲ್ಲಿ ರಾಗಿಣಿ ಮಾಡುತ್ತಿರುವ ಈ ವರ್ಕ್ ಔಟ್ ನೋಡಿದ್ರೆ, 'ನಾಟಿ ಕೋಳಿ'ಯಲ್ಲಿ ತುಪ್ಪದ ಬೆಡಗಿ 'ಕಟ್ಟುಮಸ್ತಾಗಿ' ಕಾಣುವುದು ಖಚಿತ. ಮೊದಲೇ 'ರಣಚಂಡಿ' ಅಂತಹ ಸಿನಿಮಾದಲ್ಲಿ ಲೇಡಿ ಬಾಂಡ್ ಆಗಿರುವ ರಾಗಿಣಿ, 'ನಾಟಿ ಕೋಳಿ'ಯಲ್ಲೂ ವೀರ ನಾರಿ ಆದರೆ ಅಚ್ಚರಿ ಇಲ್ಲ. ಎಷ್ಟೇ ಆಗಲಿ, 'ನಾಟಿ ಕೋಳಿ' ಚಿತ್ರವನ್ನ ನಿರ್ದೇಶಿಸುತ್ತಿರುವುದು ಪೂಜಾ ಗಾಂಧಿಯನ್ನ 'ದಂಡುಪಾಳ್ಯ' ಗ್ಯಾಂಗ್ ಲೀಡರ್ ಮಾಡಿದ ಶ್ರೀನಿವಾಸ್ ರಾಜು ಅಲ್ವಾ.

Ragini Dwivedi's work out for 'Nati Koli'

'ಶಿವಂ' ಚಿತ್ರದ ನಂತರ ಶ್ರೀನಿವಾಸ್ ರಾಜು ಮತ್ತು ರಾಗಿಣಿ ದ್ವಿವೇದಿ ಕಾಂಬಿನೇಷನ್ ನಲ್ಲಿ ರೆಡಿಯಾಗುತ್ತಿರುವ ಚಿತ್ರ 'ನಾಟಿ ಕೋಳಿ'. 'ಶಿವಂ'ನಲ್ಲಿ ಪಡ್ಡೆಗಳ ಮೈ ಬೆಚ್ಚಗೆ ಮಾಡಿದ್ದ ರಾಗಿಣಿ 'ನಾಟಿ ಕೋಳಿ'ಯಲ್ಲಿ ಮಿರ್ಚಿ ಮಸಾಲೆ ಅರೆದರೆ ಯುವಕರು ಬೇಡ ಅನ್ನುತ್ತಾರಾ? ಎಲ್ಲವನ್ನೂ ಊಹಿಸಿಕೊಳ್ಳುವುದಕ್ಕೂ ಮುನ್ನ 'ನಾಟಿ ಕೋಳಿ' ಫಸ್ಟ್ ಲುಕ್ ರಿಲೀಸ್ ಆಗುವವರೆಗೂ ಕೊಂಚ ತಾಳ್ಮೆಯಿಂದಿರಿ.

English summary
Actress Ragini Dwivedi is sweating out in gym to get tough for her next flick with Director Srinivas Raju titled 'Nati Koli'. The Actress herself posted the picture on her Facebook Account. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada