ನಟಿ ರಾಗಿಣಿ ದ್ವಿವೇದಿ ತೆಲುಗು, ತಮಿಳಿಗೆ ರಫ್ತು

By Rajendra

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬಾಲಿವುಡ್ ನಲ್ಲಿ ಸೊಂಟ ಬಳುಕಿಸಿದ್ದು ಗೊತ್ತೇ ಇದೆ. ಪ್ರಭುದೇವ ಆಕ್ಷನ್ ಕಟ್ ಹೇಳುತ್ತಿರುವ ರ್‍ಯಾಂಬೋ ರಾಜ್ ಕುಮಾರ್ ಚಿತ್ರದಲ್ಲಿ ಐಟಂ ಡಾನ್ಸ್ ಗೆ ಹೆಜ್ಜೆ ಹಾಕಿದ್ದಾರೆ. ಈಗ ಅವರ ತೆಲುಗು, ತಮಿಳಿಗೆ ಜಂಪ್ ಆಗಿದ್ದಾರೆ.

ಕನ್ನಡದಲ್ಲಿ ಯಾರೇ ಕೂಗಾಡಲಿ ಚಿತ್ರವನ್ನು ನಿರ್ದೇಶಿಸಿದ ಸಮುದ್ರ ಕಣಿ ಆಕ್ಷನ್ ಕಟ್ ಹೇಳುತ್ತಿರುವ ದ್ವಿಭಾಷಾ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಚತುರ್ಭಾಷಾ ತಾರೆಯಾಗಿ ರಾಗಿಣಿ ಬದಲಾಗಿದ್ದಾರೆ.

ಸಮುದ್ರ ಕಣಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ ತಮಿಳಿನಲ್ಲಿ ನಿಮಿರುಂದ್ ನಿಲ್ ಎಂದು ತೆಲುಗಿನಲ್ಲಿ ಜಂಡಾ ಪೈ ಕಪಿ ರಾಜು ಎಂದು ಹೆಸರಿಡಲಾಗಿದೆ. ತಮಿಳಿನಲ್ಲಿ ಜಯಂ ರವಿ ಹೀರೋ ಆದರೆ ತೆಲುಗಿನಲ್ಲಿ ಫೇಮ್ ನಾಣಿ ನಾಯಕ ನಟ.

ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ಚೆನ್ನೈನಲ್ಲಿ ಭರದಿಂದ ಸಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಚೆನ್ನೈನಲ್ಲೇ ರಾಗಿಣಿ ಸೆಟ್ಲ್ ಆಗಿದ್ದಾರೆ. ರಾಗಿಣಿ ಭಾರಿ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಇತ್ತ ಕನ್ನಡದಲ್ಲೂ ಹೊಸ ವರಸೆ ತೋರಿಸಲು ಮುಂದಾಗಿದ್ದಾರೆ.

ತಮಿಳಿನಲ್ಲಿ ಯಶಸ್ವಿ ನಿರ್ದೇಶಕ ಎಂದೇ ಖ್ಯಾತರಾಗಿರುವ ಸಮುದ್ರಕಣಿ ಆಕ್ಷನ್ ಕಟ್ ನಲ್ಲಿ ರಾಗಿಣಿ ಅಭಿನಯಿಸುತ್ತಿರುವುದು ಸ್ಯಾಂಡಲ್ ವುಡ್ ನ ಬಹಳಷ್ಟು ತಾರೆಗಳ ಹುಬ್ಬೇರಿಸಿದೆ. ಶೀಘ್ರದಲ್ಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೊಡ್ತೀನಿ ಎಂದಿದ್ದಾರೆ ರಾಗಿಣಿ. (ಏಜೆನ್ಸೀಸ್)

More from Filmibeat

English summary
South lass Ragini Dwivedi, who recently made her Bollywood debut with an item number in Rambo Rajkumar, has signed a bilingual movie, which will be simultaneously made in Tamil and Telugu. The movie will be directed by South famous director Samuthirakani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X