twitter
    For Quick Alerts
    ALLOW NOTIFICATIONS  
    For Daily Alerts

    ಬಿಜೆಪಿಗೆ ಜೈ ಎಂದ ಸ್ಯಾಂಡಲ್ ವುಡ್ ನಟಿ ರಾಗಿಣಿ.!

    |

    ಸ್ಯಾಂಡಲ್ ವುಡ್ ನಟ ರಾಗಿಣಿ ದ್ವಿವೇದಿ ಸಿನಿಮಾದಿಂದ ರಾಜಕೀಯಕ್ಕೆ ಜಿಗಿಯುವ ಸೂಚನೆ ನೀಡಿದ್ದಾರೆ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ತಾರಾ ಪ್ರಚಾರಕರು ಎಲ್ಲಾ ಕಡೆಯೂ ಮತಯಾಚನೆ ಮಾಡ್ತಿದ್ದಾರೆ.

    ಇಂತಹ ಸಮಯದಲ್ಲಿ ರಾಗಿಣಿ ಕೂಡ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದು, ಅವಕಾಶ ಸಿಕ್ಕರೇ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ.

    ಫಿಲ್ಮಿಬೀಟ್ ಸಂದರ್ಶನದಲ್ಲಿ ಮಾತನಾಡಿದ ರಾಗಿಣಿ, ''ನನಗೆ ರಾಜಕೀಯದಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಪ್ರವೇಶ ಮಾಡಿದರೆ ತಪ್ಪೇನು? ನನ್ನಲ್ಲಿ ಇಷ್ಟೆಲ್ಲ ಅಭಿಮಾನ ಇರಿಸಿದವರಿಗಾಗಿ ನಾನು ಕೂಡ ಏನಾದರೂ ಸೇವೆ ಮಾಡಬೇಕು ಎನ್ನುವುದು ನನ್ನ ಸಹಜ ಅಭಿಲಾಷೆ. ವೈಯಕ್ತಿಕವಾಗಿ ನಾನು ಬಿಜೆಪಿ.‌ ಆದರೆ ಈ ಬಾರಿ ಅದೇ ಪಕ್ಷವೇ ಅಧಿಕಾರಕ್ಕೆ ಬರಬೇಕು ಎಂಬ ಹಠ ನನಗಿಲ್ಲ. ಅಧಿಕಾರಕ್ಕೆ ಬರುವ ಪಕ್ಷ ಯಾವುದೇ ಆದರೂ ಜನತೆಗೆ ಉತ್ತಮ ಸೇವೆ ನೀಡಬೇಕು ಎನ್ನುವುದಷ್ಟೇ ಆಗ್ರಹ'' ಎಂದಿದ್ದಾರೆ.

    Ragini dwivedi supports bjp party

    ಸಂದರ್ಶನ: ನಾನು ರಾಗಿಣಿ: ಅವಕಾಶ ಸಿಕ್ಕರೆ ರಾಜಕಾರಣಿ.!ಸಂದರ್ಶನ: ನಾನು ರಾಗಿಣಿ: ಅವಕಾಶ ಸಿಕ್ಕರೆ ರಾಜಕಾರಣಿ.!

    ಅಲ್ಲಿಗೆ ಭಾರತೀಯ ಜನತಾ ಪಾರ್ಟಿಗೆ ರಾಗಿಣಿಯ ಪರೋಕ್ಷ ಬೆಂಬಲ ಘೋಷಿಸಿಕೊಂಡಿದ್ದಾರೆ ಎನ್ನುವುದು ವಾಸ್ತವ. ಬಹುಶಃ ರಾಗಿಣಿ ಅವರ ಯೋಚನೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರೆ, ಮುಂದಿನ ದಿನದಲ್ಲಿ ಅಧಿಕೃತವಾಗಿ ರಾಜಕೀಯ ಪಕ್ಷಕ್ಕೆ ಸೇರಿ ಜನಸೇವೆ ಮಾಡಬಹುದು.

    ಸದ್ಯಕ್ಕೆ ರಾಗಿಣಿ ಶರಣ್ ಜೊತೆಗೆ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾ ಮಾಡುತ್ತಿದ್ದಾರೆ. ಪ್ರೇಮ್ ಜೊತೆಗೆ 'ಗಾಂಧಿಗಿರಿ' ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಎರಡು ಬಾಲಿವುಡ್ ಸಿನಿಮಾಗಳ ಪ್ಲ್ಯಾನಿಂಗ್ ನಡೆಯುತ್ತಿದೆ. ವರ್ಷದ ಸೆಕೆಂಡ್ ಹಾಫ್ ನಲ್ಲಿ ನಾಯಕಿ ಪ್ರಾಧಾನ್ಯತೆಯ ಚಿತ್ರಗಲ್ಲಿಯೂ ನಟಿಸುವ ಸಾಧ್ಯತೆ ಇದೆಯಂತೆ.

    English summary
    Kannada actress ragini dwivedi showing interest to join political party. personally she is supporting bjp.
    Friday, April 5, 2019, 18:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X