ಬಾಯ್ ಫ್ರೆಂಡ್ ಇರೋದನ್ನ ಒಪ್ಪಿಕೊಂಡ ರಾಗಿಣಿ, ಯಾರದು?
Recommended Video

ಸ್ಯಾಂಡಲ್ ವುಡ್ ಮಾಸ್ ಕ್ವೀನ್ ರಾಗಿಣಿ ದ್ವಿವೇದಿ ಇಷ್ಟು ದಿನ ಸಿನಿಮಾ ವಿಚಾರಕ್ಕೆ ಮಾತ್ರ ಸುದ್ದಿಯಾಗಿದ್ದರು. ಇದೀಗ, ತಮ್ಮ ಖಾಸಗಿ ವಿಚಾರದ ಬಗ್ಗೆ ಒಂದು ಗುಟ್ಟನ್ನ ಬಿಟ್ಟುಕೊಡುವ ಮೂಲಕ ಪರ್ಸನಲ್ ಲೈಫ್ ವಿಷ್ಯದಲ್ಲಿ ಸುದ್ದಿಯಾಗಿದ್ದಾರೆ.
ರಾಗಿಣಿ ಅವರ ಮದುವೆ ಯಾವಾಗ? ರಾಗಿಣಿ ಅವರಿಗೆ ಬಾಯ್ ಫ್ರೆಂಡ್ ಇದ್ದಾರ? ಎಂಬ ಹಲವು ಪ್ರಶ್ನೆಗಳು ಅವರ ಅಭಿಮಾನಿಗಳಿನ್ನ ಕಾಡುತ್ತಿತ್ತು. ಇದಕ್ಕೆಲ್ಲ ಈಗ ಉತ್ತರ ಸಿಕ್ಕಿದ್ದು, ಸ್ವತಃ ರಾಗಿಣಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಹೌದು, ತಮಗೆ ಬಾಯ್ ಫ್ರೆಂಡ್ ಇರುವ ಬಗ್ಗೆ ರಾಗಿಣಿ ಒಪ್ಪಿಕೊಂಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಭರ್ಜರಿ ಕಾಮಿಡಿ' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ರಾಗಿಣಿ, ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದರು. ''ನನಗೆ ಸ್ಪೆಷಲ್ ವ್ಯಕ್ತಿ ಇದ್ದಾರೆ, ಈಗ ಅಷ್ಟೇ ಸಾಕು. ಮದುವೆ ಸದ್ಯಕ್ಕಿಲ್ಲ'' ಎಂದು ಹೇಳುವ ಮೂಲಕ ಪಡ್ಡೆ ಹುಡುಗರ ಕನಸಿಗೆ ತಣ್ಣೀರೆರಚಿದ್ದಾರೆ.

ಸದ್ಯಕ್ಕೆ, ರಾಗಿಣಿಗೆ ಸ್ಪೆಷಲ್ ವ್ಯಕ್ತಿಯೊಬ್ರು ಇದ್ದಾರೆ ಎನ್ನುವುದು ಖಚಿತವಾಯ್ತು. ಆದ್ರೆ, ಆ ವ್ಯಕ್ತಿ ಯಾರು ಎಂಬ ಪ್ರಶ್ನೆ ಈಗ ಆರಂಭವಾಯ್ತು. ಸದ್ಯಕ್ಕೆ ಆ ಗುಟ್ಟನ್ನ ರಾಗಿಣಿ ಬಿಟ್ಟುಕೊಟ್ಟಿಲ್ಲ. ನೋಡೋಣ, ಅವರ ಇಷ್ಟದ ವ್ಯಕ್ತಿಯನ್ನ ಅವರೇ ಪರಿಚಯಿಸುವ ಸಮಯ ಯಾವಾಗ ಬರುತ್ತೆ ಅಂತ.


Click it and Unblock the Notifications











