»   » ನಿರೂಪಕಿ ಆಗಿ ಬದಲಾಗಲಿದ್ದಾರೆ ಗ್ಲಾಮರ್ ಕ್ವೀನ್ ರಾಗಿಣಿ ದ್ವಿವೇದಿ

ನಿರೂಪಕಿ ಆಗಿ ಬದಲಾಗಲಿದ್ದಾರೆ ಗ್ಲಾಮರ್ ಕ್ವೀನ್ ರಾಗಿಣಿ ದ್ವಿವೇದಿ

Posted By:
Subscribe to Filmibeat Kannada

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೈನಲ್ಲಿ ಈಗ ಸಿಕ್ಕಾಪಟ್ಟೆ ಸಿನಿಮಾಗಳಿವೆ. ತಮ್ಮ ಬಿಜಿ ಶೆಡ್ಯೂಲ್ ಮಧ್ಯೆ ಕೂಡ ರಾಗಿಣಿ ಈಗ ನಿರೂಪಕಿಯಾಗುತ್ತಿದ್ದಾರೆ. ರಾಗಿಣಿ ಇದೀಗ ಒಂದು ಅವಾರ್ಡ್ ಶೋ ನಲ್ಲಿ ಅಂಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹುಚ್ಚ ವೆಂಕಟ್ ಅಭಿಮಾನಿಯಾಗಿ ರಾಗಿಣಿ ಹಾಕಿದ ಸ್ಟೆಪ್ ನೋಡ್ರಪ್ಪಾ..!

2017ನೇ ಸಾಲಿನ 'ಸೌತ್ ಫಿಲ್ಮ್ ಫೇರ್ ಅವಾರ್ಡ್ಸ್' ಕಾರ್ಯಕ್ರಮ ಇದೇ ಜೂನ್ 17ಕ್ಕೆ ನಡೆಯಲಿದೆ. ಈ ಕಾರ್ಯವನ್ನು ಕನ್ನಡದ ನಟಿ ರಾಗಿಣಿ ಹೋಸ್ಟ್ ಮಾಡುತ್ತಿರುವುದು ವಿಶೇಷವಾಗಿದೆ. ಅಂದಹಾಗೆ, ಈ ಬಾರಿಯ 'ಸೌತ್ ಫಿಲ್ಮ್ ಫೇರ್ ಅವಾರ್ಡ್ಸ್' ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

Ragini Dwivedi will host South Filmfare Awards 2017

ರಾಗಿಣಿ ಇದೇ ಮೊದಲ ಬಾರಿಗೆ ಅಂಕರ್ ಆಗಿ ಒಂದು ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರೂಪಕಿಯಾಗಿ ಮೊದಲ ಅನುಭವದ ಬಗ್ಗೆ ರಾಗಿಣಿ ತುಂಬ ಉತ್ಸುಕರಾಗಿದ್ದಾರೆ. ರಾಗಿಣಿಗೆ ಈ ಕಾರ್ಯಕ್ರಮದಲ್ಲಿ ತೆಲುಗು ನಟ ಅಲ್ಲು ಸಿರೀಶ್ ಸಾಥ್ ನೀಡಲಿದ್ದಾರೆ.

English summary
Kannada Actress Ragini Dwivedi will host South Filmfare Awards 2017 Show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada