ರಮ್ಯಾ ಬರ್ತಡೇಗೆ ವಿಶ್ ಮಾಡಿದ ರಾಗಿಣಿ ಇಟ್ಟ ಬೇಡಿಕೆ ಏನು.?
Recommended Video

ಸ್ಯಾಂಡಲ್ ವುಡ್ ಮೋಹಕತಾರೆ ಹಾಗೂ ರಾಜಕಾರಣಿ ನಟಿ ರಮ್ಯಾ ಅವರಿಗಿಂದು ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲು ರಮ್ಯಾ ಬೆಂಗಳೂರಿನಲ್ಲಿ ಇಲ್ಲವಾದರೂ, ಅವರ ಅಭಿಮಾನಿಗಳು, ಸ್ನೇಹಿತರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ.
ರಮ್ಯಾ ಬರ್ತಡೇಗೆ ಕನ್ನಡದ ನಟಿ ರಾಗಿಣಿ ದ್ವಿವೇದಿ ಮಾಡಿದ್ದು, ವಿಶೇಷವಾದ ಬೇಡಿಕೆಯೊಂದನ್ನ ಮುಂದಿಟ್ಟಿದ್ದಾರೆ. ಆದ್ರೆ, ಈ ಬೇಡಿಕೆಗೆ ಪದ್ಮಾವತಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ಕೊಟ್ಟಿಲ್ಲ.

ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದ ರಾಗಿಣಿಗೆ ನಟಿ ರಮ್ಯಾ ಥ್ಯಾಂಕ್ಸ್ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಮತ್ತೆ ಟ್ವೀಟ್ ಮಾಡಿದ ರಾಗಿಣಿ ''ಬೆಂಗಳೂರಿಗೆ ಬಂದು ಡಿನ್ನರ್ ಪಾರ್ಟಿ ಕೊಡಿಸಿ'' ಎಂದು ಡಿಮ್ಯಾಂಡ್ ಮಾಡಿದ್ದಾರೆ.
ಸದ್ಯ, ದೆಹಲಿಯಲ್ಲಿ ನೆಲೆಸಿರುವ ರಮ್ಯಾ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯಕ್ರಿಯೆಯಲ್ಲೂ ಭಾಗವಹಿಸಿಲ್ಲ. ಅದಕ್ಕೆ ಕಾರಣ ಕೊಟ್ಟಿದ್ದ ರಮ್ಯಾ, ಕಾಲಿಗೆ ಗಾಯವಾಗಿದೆ ಎಂದು ಫೋಟೋ ಅಪ್ ಲೌಡ್ ಮಾಡಿದ್ದರು.
ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಕಂಡಿದ್ದ ರಮ್ಯಾ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ನಂತರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸಂಸದರಾಗಿ ಆಯ್ಕೆಯಾಗಿದ್ದರು. ಮತ್ತೆ ಚುನಾವಣೆಯಲ್ಲಿ ಸೋತು ಸಕ್ರೀಯ ರಾಜಕೀಯದಿಂದ ದೂರು ಉಳಿದಿರುವ ರೀತಿ ಜೀವಿಸುತ್ತಿದ್ದಾರೆ.
ಇದೆಲ್ಲ ಏನೇ ಇದ್ದರೂ, ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅವರ ಅಭಿಮಾನಿಗಳ ಆಸೆ. ಈ ಆಸೆ ಅಭಿಮಾನಿಗಳಿಗೆ ಇದೆಯೋ ಇಲ್ವೋ ರಮ್ಯಾಗಂತೂ ಇಲ್ಲದಂತಾಗಿದೆ.


Click it and Unblock the Notifications











