ಐಂದ್ರಿತಾ ರೇ-ದಿಗಂತ್ ಜೋಡಿಗೆ ಶುಭ ಹಾರೈಸಿದ 'ತುಪ್ಪದ ಹುಡುಗಿ' ರಾಗಿಣಿ

ಅತ್ತ ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರೆ, ಇತ್ತ ಸ್ಯಾಂಡಲ್ ವುಡ್ ನಲ್ಲಿ ಚಾಕಲೇಟ್ ಹೀರೋ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಸಿಹಿ ಸುದ್ದಿ ಕೊಟ್ಟಿದ್ದಾರೆ.

ವರ್ಷಗಳಿಂದ 'ಮನಸಾರೆ' ಪ್ರೀತಿಸುತ್ತಿರುವ ಈ ಜೋಡಿಯ ಮದುವೆ ನಿಶ್ಚಯವಾಗಿದೆ. ಮೂರು ತಿಂಗಳ ಹಿಂದೆಯೇ ನಿಶ್ಚಿತಾರ್ಥ ಮುಗಿದಿದ್ದು, ಮುಂದಿನ ತಿಂಗಳು ಅಂದ್ರೆ ಡಿಸೆಂಬರ್ 12 ರಂದು ದಾಂಪತ್ಯ ಬದುಕಿಗೆ ಐಂದ್ರಿತಾ ರೇ-ದಿಗಂತ್ ಅಡಿಯಿಡಲಿದ್ದಾರೆ.

ಮದುವೆ ಬಗ್ಗೆ ಸ್ವತಃ ನಟಿ ಐಂದ್ರಿತಾ ರೇ ಘೋಷಿಸಿದ್ದು, ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡ ಐಂದ್ರಿತಾ ರೇ-ದಿಗಂತ್ ಗೆ ಶುಭ ಹಾರೈಸಿದ್ದಾರೆ.

Ragini Dwivedi wishes Aindritha Ray and Diganth

''ನನಗೆ ಎಷ್ಟು ಖುಷಿ ಆಗುತ್ತಿದೆ ಅಂತ ವರ್ಣಿಸಲು ಸಾಧ್ಯ ಆಗುತ್ತಿಲ್ಲ. ನಿಮ್ಮ ಜೀವನದಲ್ಲಿ ಸಂತಸ ತುಂಬಿ ತುಳುಕಲಿ. ಐಂದ್ರಿತಾ ರೇ ಮತ್ತು ದಿಗಂತ್ ಗೆ ನನ್ನ ಕಡೆಯಿಂದ ಶುಭಾಶಯಗಳು'' ಎಂದು ನಟಿ ರಾಗಿಣಿ ದ್ವಿವೇದಿ ಟ್ವೀಟ್ ಮಾಡಿದ್ದಾರೆ.

ಅಂದ್ಹಾಗೆ, ದಿಗಂತ್ ಮತ್ತು ಐಂದ್ರಿತಾ ರೇ 'ಮನಸಾರೆ' ಚಿತ್ರದ ಮೂಲಕ ಪರಿಚಿತರಾದರು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿದ ಮೇಲೆ ಹಸೆಮಣೆ ಏರಲು ಜೋಡಿ ಮುಂದಾಗಿದೆ. 'ಮನಸಾರೆ' ಮತ್ತು 'ಪಾರಿಜಾತ' ಚಿತ್ರಗಳಲ್ಲಿ ಐಂದ್ರಿತಾ-ದಿಗಂತ್ ಒಟ್ಟಿಗೆ ಅಭಿನಯಿಸಿದ್ದರು. ಹೊಸ ಬಾಳಿನ ಹೊಸ್ತಿಲಲ್ಲಿ ಇರುವ ಈ ಜೋಡಿಗೆ ನಮ್ಮ ಕಡೆಯಿಂದಲೂ ಶುಭಾಶಯಗಳು.

More from Filmibeat

English summary
Kannada Actress Ragini Dwivedi has taken her twitter account to wish Aindritha Ray and Diganth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X