»   » ಮೆಹಂದಿ ಹಾಕಿಕೊಂಡು ಮದುವೆಗೆ ಸಿದ್ದವಾದ ನಟಿ 'ರಾಗಿಣಿ'

ಮೆಹಂದಿ ಹಾಕಿಕೊಂಡು ಮದುವೆಗೆ ಸಿದ್ದವಾದ ನಟಿ 'ರಾಗಿಣಿ'

Posted By:
Subscribe to Filmibeat Kannada

ಭಾರತೀಯ ಚಿತ್ರರಂಗದಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಬಿ ಟೌನ್ ನಲ್ಲಿ ಸಾಲು ಸಾಲು ಮದುವೆಗಳು ನಡೆಯುತ್ತಿದ್ದು ಸ್ಟಾರ್ ನಟ, ನಟಿಯರು ಮದುವೆಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಸ್ಯಾಂಡಲ್ ವುಡ್ ನಲ್ಲಿಯೂ ಐಂದ್ರಿತಾ ರೇ ಹಾಗೂ ದಿಗಂತ್ ಮದುವೆ ತಯಾರಿ ನಡೆಯುತ್ತಿದ್ದು ವರ್ಷದ ಅಂತ್ಯದಲ್ಲಿ ಮದುವೆ ಆಗುವುದಾಗಿ ತಿಳಿಸಿದ್ದಾರೆ.

ಸದ್ಯ ಮದುವೆ ಮನೆಯಲ್ಲಿ ಸಂಭ್ರಮ ಪಡುತ್ತಿರುವುದು ನಟಿ ರಾಗಿಣಿ. ಹೌದು ನಟಿ ರಾಗಿಣಿ ಕೈ ತುಂಬಾ ಮೆಹಂದಿ ಹಾಕಿಕೊಂಡು ಮದುವೆಗಾಗಿ ತಯಾರಿ ಮಾಡಿಕೊಂಡಿದ್ದಾರೆ. ಅರೆ ಇಷ್ಟು ಬೇಗ ತುಪ್ಪದ ಬೆಡಗಿ ಮದುವೆ ಆಗುತ್ತಾರ ಅಂತ ಆಶ್ಚರ್ಯ ಪಡಬೇಡಿ. ಯಾಕಂದ್ರೆ ಮದುವೆ ರಾಗಿಣಿ ಅವರದಲ್ಲಾ.

Ragini has been involved in her friends wedding in Himachal Pradesh

ರಾಗಿಣಿಗೆ ಫೋನ್ ಮಾಡಿ ಬೆಡ್ ರೂಂಗೆ ಕರೆದ ಪೊಲಿಟಿಷಿಯನ್.!

ನಟಿ ರಾಗಿಣಿ ಬ್ಯುಸಿ ಶೆಡ್ಯೂಲ್ ನಲ್ಲಿ ಬಿಡುವು ಮಾಡಿಕೊಂಡು ಸ್ನೇಹಿತನ ಮದುವೆಗಾಗಿ ಹಿಮಾಚಲ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ರಾಗಿಣಿ ಅವರ ಆಪ್ತ ಸ್ನೇಹಿತ ಮೆಹೆಕ್ ಅವರ ಮದುವೆ ಹಿಮಾಚಲ್ ಪ್ರದೇಶದಲ್ಲಿ ನಡೆಯುತ್ತಿದ್ದು ರಾಗಿಣಿ ಸೇರಿದಂತೆ ಇಡೀ ಕುಟುಂಬ ಮದುವೆ ಸಂಭ್ರಮದಲ್ಲಿ ಬ್ಯುಸಿ ಆಗಿದೆ.

Ragini has been involved in her friends wedding in Himachal Pradesh

ಸ್ನೇಹಿತನ ಮದುವೆಗಾಗಿ ವಾರಕ್ಕೂ ಮುಂಚೆಯೇ ಹಿಮಾಚಲ ಸೇರಿರುವ ಚಂದನವನದ ಗಿಣಿ ತನ್ನ ಮದುವೆಯಂತೆ ಸಂಭ್ರದಿಂದ ಭಾಗಿ ಆಗಿದ್ದಾರೆ. ಅಷ್ಟೇ ಅಲ್ಲದೆ ನೀಲಿ ಬಣ್ಣದ ವಸ್ತ್ರವನ್ನ ಧರಿಸಿ ಸುಂದರವಾದ ಸ್ಥಳಗಳಲ್ಲಿ ಪೋಟೋಗಳನ್ನ ತೆಗೆಸಿಕೊಂಡಿದ್ದಾರೆ.

English summary
Kannada actress Ragini has been involved in her friend's wedding in Himachal Pradesh. The whole family is traveling to Himachal Pradesh along with Ragini.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X