twitter
    For Quick Alerts
    ALLOW NOTIFICATIONS  
    For Daily Alerts

    ಡ್ರಗ್ಸ್ ಪ್ರಕರಣ: ಮಾಧ್ಯಮಗಳ ಮೇಲೆ ರಾಗಿಣಿ ಮುನಿಸು

    |

    ಚಂದನವನಕ್ಕೆ ಡ್ರಗ್ಸ್ ನಂಟಿನ ಪ್ರಕರಣ ದೊಡ್ಡ ತಿರುವು ಪಡೆವ ಸರ್ವ ಸಾಧ್ಯತೆಯೂ ಕಾಣುತ್ತಿದೆ. ಚಂದನವನದ ಕೆಲವು ನಟ, ನಟಿಯರಿಗೆ ಮಾದಕ ವ್ಯಸನ ಇರುವುದು ದಿಟ ಹೆಸರು ಸಹ ಬಹಿರಂಗಗೊಳಿಸುತ್ತೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿರುವುದು ಪ್ರಕರಣವನ್ನು ಕುತೂಹಲಭರಿತವಾಗಿಸಿದೆ.

    Recommended Video

    ಡ್ರಗ್ಸ್ ಬಗ್ಗೆ ಕೇಳಿದ್ದಕ್ಕೆ ರಚಿತಾ ರಾಮ್ ಫುಲ್ ಗರಂ | Filmibeat Kannada

    ಟಿವಿ ಮಾಧ್ಯಮಗಳು ಸಹ ಈ ಪ್ರಮಖ ವಿಷಯವನ್ನು ಆದ್ಯತೆಯ ಸುದ್ದಿಯಾಗಿ ಪ್ರಕಟಿಸುತ್ತಿದೆ. ಕೆಲವು ಟಿವಿ ಮಾಧ್ಯಗಳು ಮಾಮೂಲಿನಂತೆ ತುಸು ಉತ್ಪ್ರೇಕ್ಷೆ ಮಾಡಿಯೂ ವರದಿ ಮಂಡಿಸಿವೆ.

    ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು: ಯುವ ನಟನ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು: ಯುವ ನಟನ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್

    ಕನ್ನಡದ ಪ್ರಮುಖ ಮಾಧ್ಯಮವೊಂದು, 'ಕನ್ನಡದ ನಟಿಯರು ಸಣ್ಣ ವಯಸ್ಸಿನವರಂತೆ ಕಾಣಲು ಹಲವು ನಟಿಯರು ಮಾದಕ ದ್ರವ್ಯವನ್ನು ಬಳಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ' ಎಂದು ವರದಿ ಮಾಡಿದೆ. ಇದು ಕನ್ನಡದ ನಟಿ ರಾಗಿಣಿ ಅವರನ್ನು ಕೆರಳಿಸಿದೆ.

    ನಟಿಯರ ಬಗ್ಗೆ ಹೇಳಿಕೆ: ರಾಗಿಣಿ ಆಕ್ರೋಶ

    ನಟಿಯರ ಬಗ್ಗೆ ಹೇಳಿಕೆ: ರಾಗಿಣಿ ಆಕ್ರೋಶ

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಗಿಣಿ, 'ಮಾದಕ ವಸ್ತು ಎಂಬುದು ಪ್ರಸ್ತುತ ಮುಖ್ಯ ವಿಷಯ ಅದರ ಸುತ್ತ ಚರ್ಚೆ ಆಗಬೇಕು. ಮಾದಕ ವಸ್ತು ಮಾರಾಟ ಚಂದನವನದಲ್ಲಿ ಆಗಿದ್ದಾದಲ್ಲಿ ಅದರ ಮೂಲದ ತನಿಖೆ ಆಗಬೇಕು. ಇಲ್ಲ ಸಲ್ಲದ ವಿಷಯಗಳ ಚರ್ಚೆ ಬೇಡ, ಸೂಕ್ತ ಮಾಹಿತಿಯೊಂದಿಗೆ ಸುದ್ದಿ ಪ್ರಸಾರ ಮಾಡಿ' ಎಂದು ಕನ್ನಡದ ಮಾಧ್ಯಮವೊಂದನ್ನು ಆಗ್ರಹಿಸಿದ್ದಾರೆ ರಾಗಿಣಿ.

    'ಚಿತ್ರರಂಗದ ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವುದು ಸರಿಯೇ?'

    'ಚಿತ್ರರಂಗದ ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವುದು ಸರಿಯೇ?'

    'ನಿಮ್ಮದೆ ಚಿತ್ರರಂಗದ ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವುದು ನಿಮಗೆ ಸರಿ ಕಾಣುತ್ತದೆಯೇ? ಮಾದಕ ವಸ್ತುವಿನ ವಿಷಯ ನಮ್ಮ ಮುಂದಿದೆ. ಅದರ ಬಗ್ಗೆ ಚರ್ಚೆಯಾಗಲಿ, ಯಾರು ಮಾರಾಟ ಮಾಡಿದ್ದಾರೆ ತನಿಖೆ ಆಗಲಿ. ಅದನ್ನು ಬಿಟ್ಟು ಸುಳ್ಳು, ಅರ್ಧ ಸತ್ಯಗಳ ಪ್ರಸಾರ ಬೇಡ ಎಂದಿದ್ದಾರೆ ರಾಗಿಣಿ.

    ನೂತನ ತಳಿಯ ನೂತನ ತಳಿಯ "ಹಿಪ್ಪಿ"ಗಳನ್ನು ಸೃಷ್ಟಿಸುತ್ತಿದೆಯೇ ಕೋವಿಡ್-19 ಕಾಲಘಟ್ಟ?

    ನನ್ನ ಕರೆಯನ್ನು ಕಟ್ ಮಾಡಲಾಯಿತು: ರಾಗಿಣಿ

    ನನ್ನ ಕರೆಯನ್ನು ಕಟ್ ಮಾಡಲಾಯಿತು: ರಾಗಿಣಿ

    ಚಾನೆಲ್ ಒಂದರಲ್ಲಿ ಕೂತಿದ್ದ ವ್ಯಕ್ತಿ, 'ನಟಿಯರು ಸಣ್ಣ ವಯಸ್ಸಿನವರಂತೆ ಕಾಣಲು ಡ್ರಗ್ಸ್ ಬಳಸುತ್ತಾರೆ' ಎಂದಿದ್ದಾರೆ. ಇದರ ಬಗ್ಗೆ ಸ್ಪಷ್ಟೀಕರಣ ಕೇಳಲೆಂದು ಕರೆ ಮಾಡಿದರೆ ಅರ್ಧದಲ್ಲಿಯೇ ನನ್ನ ಕರೆಯನ್ನು ಕಟ್ ಮಾಡಲಾಯಿತು ಎಂದು ರಾಗಿಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಡ್ರಗ್ಸ್, ಚಿತ್ರರಂಗ ಮತ್ತು ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯ ವಿಶ್ಲೇಷಣೆಡ್ರಗ್ಸ್, ಚಿತ್ರರಂಗ ಮತ್ತು ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯ ವಿಶ್ಲೇಷಣೆ

    ವಿಷಯ ಜ್ಞಾನ ರಹಿತ ನಿರೂಪಕರನ್ನು ಹೊರಗಟ್ಟಿ: ರಾಗಿಣಿ

    ವಿಷಯ ಜ್ಞಾನ ರಹಿತ ನಿರೂಪಕರನ್ನು ಹೊರಗಟ್ಟಿ: ರಾಗಿಣಿ

    ಕನ್ನಡ ಮಾಧ್ಯಮವು, ವಿಷಯ ಜ್ಞಾನರಹಿತ ಸುದ್ದಿ ನಿರೂಪಕರನ್ನು, ಸುದ್ದಿ ವಿಶ್ಲೇಷಕರನ್ನು ಸುದ್ದಿಮನೆಗಳಿಂದ ಹೊರಗಟ್ಟಬೇಕು ಎಂದು ರಾಗಿಣಿ ಒತ್ತಾಯಿಸಿದ್ದಾರೆ. ಈ ಕಾರ್ಯವನ್ನು ಸಿನಿಮಾ ಉದ್ಯಮದ ಮಹಿಳೆಯರ ಗೌರವ ಕಾಪಾಡಲು ನೀವು ಮಾಡಲೇ ಬೇಕು ಎಂದು ಮನವಿ ಮಾಡಿದ್ದಾರೆ.

    English summary
    Actress Ragini lambasted on TV Chanel for spreading wrong information about Sandalwood heroines.
    Saturday, August 29, 2020, 17:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X