ಮತ್ತೆ 5 ದಿನ ಸಿಸಿಬಿ ಪೊಲೀಸರ ವಶಕ್ಕೆ ನಟಿ ರಾಗಿಣಿ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರಾಗಿಣಿ ಅವರನ್ನು ಮತ್ತೆ 5 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ಪಡೆಯಲು ಕೋರ್ಟ್ ಆದೇಶ ನೀಡಿದೆ.
Recommended Video
25 ಸಲ ಹುಚ್ಚ ಸಿನಿಮಾನ ಥಿಯೇಟರ್ ನಲ್ಲಿ ನೋಡಿದ್ದೀನಿ | Kirik Keerthi | Filmibeat Kannada
1 ನೇ ಎಸಿಎಂಎಂ ನ್ಯಾಯಾಲಯದ ಮುಂದೆ ನಟಿ ರಾಗಿಣಿಯನ್ನು ಇಂದು ಮಧ್ಯಾಹ್ನ ಹಾಜರುಪಡಿಸಲಾಗಿತ್ತು. ಕೇಸ್‌ನ ವಿಚಾರಣೆ ನಡೆಸಿದ ನ್ಯಾಯಾಧೀಶ ಜಗದೀಶ್ ಶುಕ್ರವಾರದವರೆಗೂ ಸಿಸಿಬಿ ಪೊಲೀಸರ ವಶಕ್ಕೆ ತೆಗೆದುಕೊಳ್ಳಲು ಸೂಚಿಸಿದ್ದಾರೆ.
ನಟಿ ರಾಗಿಣಿ ಅವರ ಹೆಚ್ಚಿನ ತನಿಖೆ ಅಗತ್ಯವಿದೆ. ಹೀಗಾಗಿ, ಹತ್ತು ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದರು. ಆದರೆ, ಐದು ದಿನಕ್ಕೆ ಮಾತ್ರ ಜಡ್ಜ್ ಆದೇಶ ನೀಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟಿರುವ ರಾಗಿಣಿ, 'ತನಿಖೆಗೆ ಸಹಕರಿಸುತ್ತಿಲ್ಲ, ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟನೆ ಉತ್ತರ ನೀಡುತ್ತಿಲ್ಲ' ಎಂದು ನ್ಯಾಯಾಧೀಶರ ಮುಂದೆ ವಿವರ ನೀಡಿದ್ದಾರೆ.
More from Filmibeat
English summary
Sandalwood Drugs: Kannada actress Ragini Dwivedi's police custody extended for 5 more days. She was arrested on Friday.


Click it and Unblock the Notifications











