For Quick Alerts
  ALLOW NOTIFICATIONS  
  For Daily Alerts

  ಶಾನುಭೋಗರ ಮಗಳಾದ ಪ್ರಜ್ವಲ್ ದೇವರಾಜ್ ಪತ್ನಿ: ಟಿಪ್ಪು ಕುರಿತ ಕತೆ

  |

  ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಸ್ವತಃ ಒಳ್ಳೆಯ ನೃತ್ಯಗಾರ್ತಿ. ಈಗಾಗಲೇ ಒಂದು ಸಿನಿಮಾದಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ. ಇದೀಗ ರಾಗಿಣಿ ನಟನೆಯ ಹೊಸ ಸಿನಿಮಾ ಸೆಟ್ಟೇರಲು ಹೊರಟಿದೆ.

  'ರಿಷಭಪ್ರಿಯ' ಹೆಸರಿನ ಕಿರು ಸಿನಿಮಾದಲ್ಲಿ ನಟಿಸಿದ್ದ ರಾಗಿಣಿ ಬಳಿಕ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ನಿರ್ಮಾಣವಾದ 'ಲಾ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಬಳಿಕ ಪತಿ ಪ್ರಜ್ವಲ್ ದೇವರಾಜ್ ನಟನೆಯ 'ಇನ್‌ಸ್ಪೆಕ್ಟರ್ ವಿಕ್ರಂ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದೀಗ ಹೊಸ ಸಿನಿಮಾದಲ್ಲಿ ನಟಿಸಲು ಅಣಿಯಾಗಿದ್ದಾರೆ.

  ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶಿಸಲಿರುವ 'ಶಾನುಭೋಗರ ಮಗಳು' ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ನಟಿಸಲಿದ್ದಾರೆ. ಈ ಸಿನಿಮಾ ಕಾದಂಬರಿ ಆಧರಿತ ಕತೆ ಹೊಂದಿರುವುದು ವಿಶೇಷ.

  ಭಾಗ್ಯ ಕೃಷ್ಣಮೂರ್ತಿಯವರ ಕಾದಂಬರಿ ಆಧರಿಸಿ 'ಶಾನುಭೋಗರ ಮಗಳು' ಸಿನಿಮಾ ತಯಾರಾಗುತ್ತಿದೆ. ಸಿನಿಮಾದಲ್ಲಿ ಶಾನುಭೋಗರ ಮಗಳಾಗಿ ರಾಗಿಣಿ ನಟಿಸುತ್ತಿದ್ದಾರೆ. ಈ ಹಿಂದೆ ಹಲವು ಕಾದಂಬರಿ ಆಧರಿತ ಸಿನಿಮಾಗಳನ್ನು ಕೂಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ. ಈಗ ಮತ್ತೊಂದು ಕಾದಂಬರಿ ಆಧರಿತ ಸಿನಿಮಾಕ್ಕೆ ಕೈ ಹಾಕಿದ್ದಾರೆ.

  'ಶಾನುಭೋಗರ ಮಗಳು' ಸಿನಿಮಾಕ್ಕೆ ಚಿತ್ರಕತೆ ಹಾಗೂ ಸಂಭಾಷಣೆಯನ್ನು ಬಿಎ ಮಧು ಬರೆದಿದ್ದಾರೆ. ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಜೈ ಆನಂದ್ ಛಾಯಾಗ್ರಹಣ ಇರಲಿದೆ. ಕಲಾ ನಿರ್ದೇಶನ ವಸಂತ ಕುಲಕರ್ಣಿ ಅವರದ್ದು. ಭುವನ್ ಫಿಲಮ್ಸ್‌ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

  ಈ ಸಿನಿಮಾ ಸ್ವಾತಂತ್ರ್ಯ ಪೂರ್ವದ ಕತೆಯನ್ನು ಹೊಂದಿರಲಿದ್ದು, ಸಿನಿಮಾದಲ್ಲಿ ಟಿಪ್ಪು ಸುಲ್ತಾನನ ಪಾತ್ರವೂ ಇದೆ. ಟಿಪ್ಪು ಸುಲ್ತಾನನ ಪಾತ್ರ ಕತೆಯಲ್ಲಿ ಮುಖ್ಯವಾಗಿರುವ ಕಾರಣ ಟಿಪ್ಪು ಪಾತ್ರಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದೆ ಚಿತ್ರತಂಡ.

  ಇನ್ನು ರಾಗಿಣಿ ಪ್ರಜ್ವಲ್ ಹೊರತುಪಡಿಸಿ ಸಿನಿಮಾದಲ್ಲಿ ಮೇಘಶ್ರೀ, ನಿರಂಜನ್ ಕುಮಾರ್, ಟೆನ್ನಿಸ್ ಕೃಷ್ಣ, ರಮೇಶ್ ಭಟ್, ಶಂಕರ್ ಅಶ್ವತ್ಥ್, ನೀನಾಸಂ ಅಶ್ವತ್ಥ್ ಇನ್ನೂ ಕೆಲವರು ನಟಿಸುತ್ತಿದ್ದಾರೆ. ಕೂಡ್ಲು ರಾಮಕೃಷ್ಣ ನಿರ್ದೇಶನದ 'ಮಿಸ್ಟರ್ ಡೂಪ್ಲಿಕೇಟ್' ಹೆಸರಿನ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದರು, ಇದೀಗ ಅವರದ್ದೇ ನಿರ್ದೇಶನದ ಸಿನಿಮಾದಲ್ಲಿ ಪ್ರಜ್ವಲ್‌ರ ಪತ್ನಿ ರಾಗಿಣಿ ನಟಿಸುತ್ತಿರುವುದು ವಿಶೇಷ. ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

  English summary
  Prajwal Devaraj's wife Ragini Prajwal acting in new Kannada movie Shanubhogara Magalu. Movie is based on Kannada novel, directing by Kodlu Ramakrishna.
  Wednesday, September 7, 2022, 13:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X