'ಅರ್ಜುನ್ ಗೌಡ' ಪ್ರಜ್ವಲ್ ದೇವರಾಜ್ ಎದುರು ಘರ್ಜಿಸಲಿರುವ ಬಾಲಿವುಡ್ ಖಳ ನಟ 'ಇವರೇ'.!
'ಸಿಕ್ಸರ್', 'ಮುರುಳಿ ಮೀಟ್ಸ್ ಮೀರಾ', 'ಗುಲಾಮ' ದಂತಹ ಸಿನಿಮಾಗಳಲ್ಲಿ ನಟಿಸಿರುವ ಪ್ರಜ್ವಲ್ ದೇವರಾಜ್ ಇದೀಗ 'ಅರ್ಜುನ್ ಗೌಡ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಶಂಕರ್ ನಿರ್ದೇಶನ ಮಾಡುತ್ತಿರುವ 'ಅರ್ಜುನ್ ಗೌಡ' ಚಿತ್ರದ ಟಾಕಿ ಪೋರ್ಷನ್ ಬಹುತೇಕ ಮುಕ್ತಾಯಗೊಂಡಿದ್ದು, ಸದ್ಯ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ನಡೆಯುತ್ತಿದೆ. 'ಕೋಟಿ' ರಾಮು ನಿರ್ಮಾಣ ಮಾಡುತ್ತಿರುವ 'ಅರ್ಜುನ್ ಗೌಡ' ಚಿತ್ರದ ಸಾಹಸ ದೃಶ್ಯಗಳಿಗೆ ಅದ್ಧೂರಿ ಸೆಟ್ ಹಾಕಲಾಗಿದೆ.
ಈ ಆಕ್ಷನ್ ಸೀಕ್ವೆನ್ಸ್ ನಲ್ಲಿ ಹೀರೋ ಪ್ರಜ್ವಲ್ ದೇವರಾಜ್ ಎದುರು ಘರ್ಜಿಸುತ್ತಿರುವುದು ಬಾಲಿವುಡ್ ನಟ ರಾಹುಲ್ ದೇವ್. ಸ್ಟಂಟ್ ಮಾಸ್ಟರ್ ಮಾಸ ಮಾದ ಸಂಯೋಜಿಸಿರುವ ಫೈಟ್ ಸೀನ್ ಗಳಲ್ಲಿ ಪ್ರಜ್ವಲ್ ದೇವರಾಜ್ ಮುಂದೆ ರಾಹುಲ್ ದೇವ್ ತೊಡೆ ತಟ್ಟಿದ್ದಾರೆ.

ಈಗಾಗಲೇ 'ಅಭಿಮನ್ಯು', 'ಓಂಕಾರ', 'ಬೊಂಬಾಟ್' ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಕೇಡಿಯಾಗಿ ರಾಹುಲ್ ದೇವ್ ಅಭಿನಯಿಸಿದ್ದಾರೆ. ಇದೀಗ 'ಅರ್ಜುನ್ ಗೌಡ' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
'ಅರ್ಜುನ್ ಗೌಡ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಗೆ ಪ್ರಿಯಾಂಕಾ ತಿಮ್ಮೇಶ್ ನಾಯಕಿ. ಸಾಧು ಕೋಕಿಲ, ರೇಖಾ, ದೀಪಕ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಇನ್ನೂ ಶೂಟಿಂಗ್ ಹಂತದಲ್ಲಿ ಇರುವ 'ಅರ್ಜುನ್ ಗೌಡ' ತೆರೆ ಮೇಲೆ ಬರಲು ಸ್ವಲ್ಪ ಟೈಮ್ ಬೇಕು.


Click it and Unblock the Notifications










