ರಮ್ಯಾ ಬಣ್ಣ ಹಚ್ಚೋಕೆ ಹೇಳಿದ ರಾಹುಲ್ ಗಾಂಧಿ
ಗೋಲ್ಡನ್ ಗರ್ಲ್ ರಮ್ಯಾ ಹಾಗೂ ರಾಹುಲ್ ಗಾಂಧಿ ಫೋಟೋಶೂಟ್ ಮಾಡಿದ್ದಾರೆ. ಫೋಟೋಶೂಟ್ ಅಂದರೆ ಈ ಎಲೆಕ್ಷನ್ ಟೈಮಲ್ಲಿ ಯಾವ ಸಿನಿಮಾ. ಕನ್ನಡಾನಾ, ಬಾಲಿವುಡ್ ಸಿನಿಮಾನಾ? ರಮ್ಯಾ ಇನ್ಫುಯೆನ್ಸ್ ನಿಂದ ರಾಹುಲ್ ಗಾಂಧಿ ಕನ್ನಡಕ್ಕೇನಾದ್ರೂ ಬರ್ತಿದ್ದಾರಾ?
ಇಲ್ಲಾ ರಾಜಕೀಯದ ಜೊತೆ ರಮ್ಯಾ ಬಾಲಿವುಡ್ ಎಂಟ್ರೀನಾ? ನಿಮ್ಮಲ್ಲಿ ಈ ಎಲ್ಲಾ ಪ್ರಶ್ನೆಗಳೇಳೋಕೂ ಮೊದಲೆ ನಿಮ್ಮ ಅನುಮಾನವನ್ನ ಪರಿಹರಿಸೋಣ.
ಇದು ಬರೀ ಫೋಟೋಶೂಟ್ ಅಲ್ಲ. ಇದೊಂದು ಜಾಹೀರಾತಿನ ಚಿತ್ರೀಕರಣ. [ರಮ್ಯಾ 'ನೀರ್ ದೋಸೆ'ಗೆ ರಾಗಿಣಿ ಬಿಸಿಬಿಸಿ ತುಪ್ಪ]
ಶತಾಯಗತಾಯ ಮೋದಿಗೆ ಸೆಡ್ಡು ಹೊಡೆಯೋಕೆ ಪ್ಲಾನ್ ಮಾಡಿರೋ ರಾಹುಲ್ ಗಾಂಧಿ ಕರ್ನಾಟಟಕದಿಂದ ಸಕ್ಕರೆ ನಾಡಿನ ಸುಂದರ ಚೆಲುವೆ ರಮ್ಯಾರಿಗೆ ಮತ್ತೆ ಬಣ್ಣ ಹಚ್ಚೋಕೆ ಹೇಳಿದ್ದಾರೆ. ಆದರೆ ಅದು ಸಿನಿಮಾಗಲ್ಲ ರಾಜಕೀಯಕ್ಕೆ. ಸಿನಿಮಾಗಿಂತ ರಾಜಕೀಯದಲ್ಲಿ ಆಕ್ಟಿಂಗ್ ಹೆಚ್ಚು ವರ್ಕ್ ಔಟ್ ಆಗೋದು. ಕಣ್ಣಿರಿಟ್ಟು ಓಟು ಕೇಳಿದ್ರೆ ಕನ್ನಡಿಗರು ಕರಗೋದು ಹೆಚ್ಚು. ಹೇಳಿ ಕೇಳಿ ಇಂಡಿಯನ್ಸ್ ಸೆಂಟಿಮೆಂಟಲ್ ಫೂಲ್ಸ್ ಅಲ್ವಾ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]


Click it and Unblock the Notifications












