twitter
    For Quick Alerts
    ALLOW NOTIFICATIONS  
    For Daily Alerts

    ಮಳೆಯನ್ನು ಲೆಕ್ಕಿಸದೇ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಕಣ್ತುಂಬಿಕೊಂಡ ಪುನೀತ್ ಅಭಿಮಾನಿಗಳು

    |

    ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಪಡಿಸಿತು. ಸಂಜೆ 5 ಗಂಟೆಗೆ ಶುರುವಾದ ಕಾರ್ಯಕ್ರಮದಲ್ಲಿ ಗಣ್ಯರು ವೇದಿಕೆ ಏರುವ ವೇಳೆಗೆ ಮಳೆ ಆರಂಭವಾಗಿತು. ಕೊಡೆ ಹಿಡಿದು ಪ್ರಶಸ್ತಿ ಪ್ರದಾನ ಮಾಡುವಂತಾಯಿತು.

    ತೆರೆದ ವೇದಿಕೆಯಲ್ಲಿ ಕಾರ್ಯಕ್ರಮ ಅಯೋಜಿಸಲಾಗಿತ್ತು. ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ವೇದಿಕೆ ಸಿದ್ಧವಾಗಿತ್ತು. ಅಭಿಮಾನಿಗಳು ಮಳೆಯನ್ನು ಲೆಕ್ಕಿಸದೇ ಕೊಡೆ ಹಿಡಿದು ಮಳೆಯಲ್ಲಿ ನಿಂತೇ ಕಾರ್ಯಕ್ರಮ ವೀಕ್ಷಿಸಿದರು. ಕೆಲವರು ಮಳೆಯಲ್ಲಿ ನೆನೆಯುತ್ತಲೇ ಅಪ್ಪು ಅಪ್ಪು ಎಂದು ಕೂಗುತ್ತಾ ಸಮಾರಂಭ ಕಣ್ತುಂಬಿಕೊಂಡರು. ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಿ ಅಂದು ಡಾ. ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದಾಗ ಇದೇ ರೀತಿ ಮಳೆ ಬಂದಿತ್ತು ಎಂದು ಕೇಳಿಪಟ್ಟೆ. ಇಂದು ಕೂಡ ಬಂದಿದೆ ಎಂದರು.

    'ಇಂದು ಅಪ್ಪುನೇ ಕಥಾನಾಯಕ.. ಆದರೆ ನಮ್ಮೊಂದಿಗಿಲ್ಲ': ಅಪ್ಪು ಬಗ್ಗೆ ರಜನಿ ಆಡಿದ ಮಾತುಗಳಿವು!'ಇಂದು ಅಪ್ಪುನೇ ಕಥಾನಾಯಕ.. ಆದರೆ ನಮ್ಮೊಂದಿಗಿಲ್ಲ': ಅಪ್ಪು ಬಗ್ಗೆ ರಜನಿ ಆಡಿದ ಮಾತುಗಳಿವು!

    ಸಮಾರಂಭದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಅವ್ರು, ಅಪ್ಪು ನಮ್ಮ ಜೊತೆ ಇದ್ದಾರೆ. ಆಕಾಶದಿಂದ ಮಳೆಯ ರೂಪದಲ್ಲಿ ಬಂದು ಅಪ್ಪು ನಮಗೆ ಶುಭಕೋರಿದ್ದಾರೆ ಎಂದರು. ಇನ್ನು ಕಾರ್ಯಕ್ರಮಕ್ಕೆ ತೆಲುಗು ನಟ ಜ್ಯೂನಿಯರ್ ಎನ್‌ಟಿಆರ್, ಸುಧಾಮೂರ್ತಿ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಚಿವರಾದ ಆರ್. ಅಶೋಕ್ ಮಾತನಾಡಿ ಅಂದು ಡಾ. ರಾಜ್‌ಕುಮಾರ್ ಅವರಿಗೆ ಪ್ರಶಸ್ತಿ ನೀಡಿದಾಗಲೂ ಮಳೆ ಬಂದಿತ್ತು. ಇಂದು ಬಂದಿದೆ. ಇದು ವರುಣ ದೇವನ ಆಶೀರ್ವಾದ ಎಂದರು.

    Rain at Puneeth Rajkumars Karnataka Ratna award ceremony

    ಸಿಎಂ ಬಸವರಾಜ ಬೊಮ್ಮಾಯಿಯವರು ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡಲು ಮುಂದಾಗಿದ್ದಕ್ಕೆ ಅವರಿಗೆ ಧನ್ಯವಾದಗಳು ಎಂದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ ಸರ್ಕಾರ, ಸಿಎಂ ಬೊಮ್ಮಾಯಿ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

    Rain at Puneeth Rajkumars Karnataka Ratna award ceremony

    1992 ನವೆಂಬರ್ 14ರಂದು ಸಂಜೆ 6.30ಕ್ಕೆ ನಿಮಿಷಕ್ಕೆ ಡಾ. ರಾಜ್‌ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಸಾಕಷ್ಟು ಅಭಿಮಾನಿಗಳ ಸಮ್ಮುಖದಲ್ಲಿ ಅಂದಿನ ಕರ್ನಾಟಕದ ರಾಜ್ಯಪಾಲರಾದ ಖುರ್ಷಿದ್ ಆಲಂ ಖಾನ್ ಅವರು ಮುತ್ತುರಾಜನಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದರು. ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಸೇರಿದಂತೆ ಸಾಕಷ್ಟು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರರಂಗಕ್ಕೆ ಅಣ್ಣಾವ್ರ ಸೇವೆಯ ಗುರುತಾಗಿ ಪ್ರಶಸ್ತಿ ನೀಡಲಾಗಿತ್ತು.

    English summary
    Rain at Puneeth Rajkumar's Karnataka Ratna award ceremony. The grand event held on the fore steps of Vidhana Soudha.
    Tuesday, November 1, 2022, 18:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X