ಉತ್ತರ ಕರ್ನಾಟಕಕ್ಕೆ ಸಹಾಯಹಸ್ತ ಚಾಚಿದ 'ಭರಾಟೆ' ಚಿತ್ರತಂಡ
ಉತ್ತರ ಕರ್ನಾಕಟದ ಭೀಕರ ಪ್ರವಾಹ ಪರಿಸ್ಥಿತಿ ಇನ್ನು ಕಮ್ಮಿ ಆಗಿಲ್ಲ. ಸಾವಿರಾರು ಜನ ಮನೆಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇನ್ನು ಅನೇಕ ಜನ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಪರಿಹಾರ ಕಾರ್ಯ ನಡೆಯುತ್ತಿದ್ದು ಈಗಾಗಲೆ ಅನೇಕರನ್ನು ರಕ್ಷಿಸಿ ಗಂಜಿ ಕೇಂದ್ರದಲ್ಲಿ ರಕ್ಷಣೆ ನೀಡಲಾಗುತ್ತಿದೆ.
ಉತ್ತರ ಕರ್ನಾಟಕ ಜನರ ಸ್ಥಿತಿ ನೋಡಿ ಕನ್ನಡ ಚಿತ್ರರಂಗದವರ ಮನ ಮಿಡಿದಿದೆ. ಕರ್ನಾಟಕದ ಯಾವುದೆ ಮೂಲೆಯಲ್ಲೂ ಏನೆ ಸಮಸ್ಯೆ ಆದ್ರು ಸ್ಯಾಂಡಲ್ ವುಡ್ ಮಂದಿ ಸಹಾಯಕ್ಕೆ ಧಾವಿಸುತ್ತಾರೆ. ಈ ಬಾರಿ ಕೂಡ ಚಿತ್ರರಂಗ ನೆರವಿಗೆ ನಿಂತಿದೆ. ಈಗ ಉತ್ತರ ಕರ್ನಾಟಕ ಮಂದಿಯ ಸಹಾಯಕ್ಕೆ ಶ್ರೀ ಮುರಳಿ ಅಭಿನಯದ 'ಭರಾಟೆ' ಚಿತ್ರತಂಡ ಮುಂದಾಗಿದೆ.
ಅಂದ್ಹಾಗೆ 'ಭರಾಟೆ' ಚಿತ್ರದ ಮೊದಲ ಹಾಡು ಇಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತೆರೆಗೆ ಬರುತ್ತಿದೆ. ಈ ಹಾಡಿನಿಂದ ಬರುವ ಪೂರ್ತಿ ಹಣವನ್ನು ಉತ್ತರ ಕರ್ನಾಟಕ ಪರಿಹಾರ ನಿಧಿಗೆ ನೀಡುವ ನಿರ್ಧಾರ ಮಾಡಿದೆ ಚಿತ್ರತಂಡ. ಈ ಬಗ್ಗೆ ನಟ ಶ್ರೀಮುರಳಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

"ಉತ್ತರ ಕರ್ನಾಕಟದಲ್ಲಿ ಸಂಭವಿಸಿದ ಪ್ರವಾಹದಿಂದ ನಮಗೆ ತುಂಬ ದುಃಖ ಆಗಿದೆ. ಕರ್ನಾಟಕದಲ್ಲಿ ಎಲ್ಲೆ ಯಾರಿಗೆ ನೋವಾದ್ರು ದುಃಖ ಆಗುತ್ತೆ. ನಮ್ಮ ಕೈಯಲ್ಲಿ ಆಗಿದ್ದನ್ನು ಸಹಾಯ ಮಾಡೋಣ. ಎಲ್ಲಾ ತರಹದ ಸೌಲಭ್ಯ ಆಗುತ್ತಿದೆ ಎಂದು ಭಾವಿಸಿದ್ದೀನಿ. ಭರಾಟೆ ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಬಂದಿದ್ದೀವಿ. ದಯವಿಟ್ಟು ಕ್ಷಮಿಸಿ ಕರ್ನಾಟಕದಲ್ಲಿ ಇಲ್ಲ. ಆದ್ರು ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದೀವಿ. ನಮ್ಮ ಕೈಯಲಾದ ಸಹಾಯ ಮಾಡುತ್ತಿದ್ದೀವಿ. ಭರಾಟೆ ಸಾಂಗ್ ರಿಲೀಸ್ ಆಗುತ್ತಿದೆ ಅದರಿಂದ ಬರುವ ಅಷ್ಟು ಲಾಭವನ್ನು ಉತ್ತರ ಕರ್ನಾಟಕ ಪರಿಹಾರ ನಿಧಿಗೆ ನೀಡುತ್ತಿದ್ದೀವಿ" ಎಂದು ಹೇಳಿದ್ದಾರೆ.
ಅಂದ್ಹಾಗೆ ಭರಾಟೆ ಚಿತ್ರತಂಡ ಎರಡು ಹಾಡಿನ ಚಿತ್ರೀಕರಣಕ್ಕೆಂದು ಸ್ವಿಡ್ಜಲ್ಯಾಂಡ್ ಗೆ ಪ್ರಯಾಣ ಬೆಳೆಸಿದೆ. ಅಲ್ಲಿಂದನೆ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡುತ್ತಿದೆ ಚಿತ್ರತಂಡ. ಅಲ್ಲದೆ ನಟ ಶ್ರೀಮುರಳಿ ಕೂಡ ಉತ್ತರ ಕರ್ನಾಟಕ ಜನರ ನೆರವಿಗೆ ಧಾವಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.


Click it and Unblock the Notifications











