ಉತ್ತರ ಕರ್ನಾಟಕ ಜನರ ನೆರವಿಗೆ ನಿಂತ ಕನ್ನಡ ಚಿತ್ರರಂಗ

ಮಹಾರಾಷ್ಟ್ರದಲ್ಲಿ ಮೇಘಸ್ಫೋಟದ ಪುರಿಣಾಮ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳು ಜಲಪ್ರಳಯದಲ್ಲಿ ಸಿಲುಕಿವೆ. ನಡುಗಡ್ಡೆಯಾಗಿರುವ ಪ್ರದೇಶದಲ್ಲಿ ಜನರು ಸಿಲುಕಿ ನರಳಾಡುತ್ತಿದ್ದಾರೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು ಪರಿಹಾರ ಕಾರ್ಯ ಕೂಡ ಕಷ್ಟವಾಗುತ್ತಿದೆ.

ಸಂಕಷ್ಟದಲ್ಲಿ ಸಿಲುಕಿರುವ ಜನರ ನೆರವಿಗೆ ಕನ್ನಡ ಚಿತ್ರರಂಗ ಧಾವಿಸಿದೆ. ನೆಲ, ಜಲ, ನಾಡು, ನುಡಿ ವಿಚಾರಕ್ಕೆ ಬಂದ್ರೆ ಕನ್ನಡ ಚಿತ್ರರಂಗ ಒಟ್ಟಾಗಿ ಸಹಾಯಕ್ಕೆ ಮುನ್ನುಗ್ಗುತ್ತಾರೆ. ಕಳೆದ ಬಾರಿ ಮಡಿಕೇರಿಯಲ್ಲಿ ಸಂಭವಿಸಿದ ಬೀಕರ ಪ್ರವಾಹದ ಸಮಯದಲ್ಲೂ ನಟ ನಟಿಯರು ಸಹಾಯ ಹಸ್ತ ಚಾಚಿದ್ದರು.

ಈಗ ಉತ್ತರ ಕರ್ನಾಟಕ ಜನರ ನೆರವಿಗೆ ನಿಂತಿದೆ ಚಿತ್ರರಂಗ. ದರ್ಶನ್, ಸುದೀಪ್, ಗಣೇಶ್, ಜಗ್ಗೇಶ್, ದುನಿಯಾ ವಿಜಯ್, ಪವನ್ ಒಡೆಯರ್, ಸೇರಿದಂತೆ ಅನೇಕರು ಅಭಿಮಾನಿಗಳ ಮೂಲಕ ಉತ್ತರ ಕರ್ನಾಟಕ ಜನರಿಗೆ ಸಹಾಯ ಹಸ್ತಚಾಚುತ್ತಿದ್ದಾರೆ.

'ರೆಮೋ' ಚಿತ್ರದಿಂದ ಸಹಾಯ

'ರೆಮೋ' ಚಿತ್ರದಿಂದ ಸಹಾಯ

ಸಂಕಷ್ಟದಲ್ಲಿ ಸಿಲುಕಿರುವ ಉತ್ತರ ಕರ್ನಾಟಕ ಜನರ ಕಷ್ಟಕ್ಕೆ ರೊಮೋ ಚಿತ್ರತಂಡ ನೆರವಾಗಿದೆ. ನಿರ್ದೇಶಕ ಪವನ್ ಒಡೆಯರ್ ಮತ್ತು ನಾಯಕ ಇಶಾನ್ ಸೇರಿದಂತೆ ಇಡೀ ಚಿತ್ರತಂಡ ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕ ಜನರಿಗೆ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅಗತ್ಯ ವಸ್ತುಗಳನ್ನು ಸಾಗಿಸುತ್ತಿರುವ ಫೊಟೋಗಳನ್ನು ಅಪ್ ಲೋಡ್ ಅಭಿಮಾನಿಗಳಿಗು ನೆರವಾಗಿ ಎಂದು ಹೇಳಿಕೊಂಡಿದ್ದಾರೆ.

ನೆರವಿಗೆ ನಿಂತ-ಗಣೇಶ್

ನೆರವಿಗೆ ನಿಂತ-ಗಣೇಶ್

"ನಮ್ಮ ಕರ್ನಾಟಕದ ನೆಲವನ್ನು ಬಹುಪಾಲು ಜಲ‌ ಆವರಿಸಿಕೊಂಡಿದೆ. ಪ್ರವಾಹದ ಅಬ್ಬರಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮಿಂದ ಸಾಧ್ಯವಾದದ್ದನ್ನು ನೆರೆ ಸಂತ್ರಸ್ತರಿಗೆ ತಲುಪಿಸೋಣ. ಇದು ನನ್ನ ಹೃದಯಾಂತರಾಳದ ಕೋರಿಕೆ"

ಕಷ್ಟದಲ್ಲಿ ಆಗುವನೆ ಕನ್ನಡದ ನೆಂಟ-ಜಗ್ಗೇಶ್

ಕಷ್ಟದಲ್ಲಿ ಆಗುವನೆ ಕನ್ನಡದ ನೆಂಟ-ಜಗ್ಗೇಶ್

"ಬನ್ನಿ ಒಬ್ಬರಿಗೊಬ್ಬರು ಕೈ ಜೋಡಿಸಿ ಉತ್ತರ ಕರ್ನಾಟಕದ ಮಳೆ ಸಂತ್ರಸ್ತರಿಗೆ ಸಹಾಯ ಮಾಡುವ. ಸಮಯಕ್ಕೆ ಉಪಯೋಗ ಆಗುವ ವಸ್ತುಗಳ ದಾನ ಮಾಡುವ. ವಿಶ್ವದ ಎಲ್ಲೆಡೆ ಇರುವ ಕನ್ನಡದ ಬಂಧುಗಳೆ ಉತ್ತರ ಕರ್ನಾಟಕ ಬಂಧುಗಳ ರಕ್ಷಣೆಗೆ ವ್ಯಾಪಕ ಪ್ರಚಾರಮಾಡಿ ವಿನಂತಿ. ಕಷ್ಟದಲ್ಲಿ ಮೊದಲು ಆಗುವನೆ ಕನ್ನಡದ ನೆಂಟ ಎಂದು ನಿರೂಪಿಸುವ. ಧನ್ಯವಾದಗಳು

ಕೈಲಾದಷ್ಟು ಸಹಾಯ ಮಾಡೋಣ-ವಿಜಯ್

ಕೈಲಾದಷ್ಟು ಸಹಾಯ ಮಾಡೋಣ-ವಿಜಯ್

"ಉತ್ತರ ಕರ್ನಾಟಕದ ಸೋದರ ಸೋದರಿಯರಿಗೆ ಕೈ ಜೋಡಿಸೋಣ. ನಮ್ಮ ಕೈಲಾದ ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡೋಣ. ಉತ್ತರ ಕರ್ನಾಟಕದ ಅಕ್ಕ ಪಕ್ಕದಲ್ಲಿರೋ ನನ್ನ ಅಭಿಮಾನಿಗಳಲ್ಲಿ ನನ್ನದೊಂದು ಮನವಿ, ದಯವಿಟ್ಟು ನಿಮಗೆ ಹತ್ತಿರದಲ್ಲಿರೋ ನೆರೆ ಸಂತ್ರಸ್ತರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.

ಎಲ್ಲರು ಕೈ ಜೋಡಿಸಿ- ಪ್ರಜ್ವಲ್ ದೇವರಾಜ್

ಎಲ್ಲರು ಕೈ ಜೋಡಿಸಿ- ಪ್ರಜ್ವಲ್ ದೇವರಾಜ್

"ಎಲ್ಲರು ಕೈ ಜೋಡಿಸಿ ಈ ನಿಟ್ಟಿನಲ್ಲಿ ಸಾಗೋಣ" ಎಂದು ಟ್ವೀಟ್ ಮಾಡಿರುವ ಪ್ರಜ್ವಲ್ ದರ್ಶನ್ ಅವರ ಹೇಳಿಕೆಯನ್ನು ಶೇರ್ ಮಾಡಿದ್ದಾರೆ. "ನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹಲವು ಹಳ್ಳಿಗಳು ಪ್ರವಾಹದ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ"

ಸಂಪರ್ಕಖ್ಕೆ ಚಕ್ರವರ್ತಿ 90082 66036 -ಅಕುಲ್ ಬಾಲಾಜಿ

ಸಂಪರ್ಕಖ್ಕೆ ಚಕ್ರವರ್ತಿ 90082 66036 -ಅಕುಲ್ ಬಾಲಾಜಿ

"ದಯವಿಟ್ಟು ಉತ್ತರ ಕರ್ನಾಟಕ ಜನರಿಗೆ ಸಹಾಯ ಹಸ್ತ ಚಾಚಿ

ಬ್ಲಾಂಕೆಟ್ ಗಳು ಪಂಚೆ ಶರಟು ಮಕ್ಕಳ ಬಟ್ಟೆ ಮಹಿಳೆಯರ ಬಟ್ಟೆ ಚಪ್ಪಲಿ ಒಳ ಉಡುಪುಗಳು ಟಾರ್ಪಲ್ ಗಳು ಟವಲ್ ಗಳು ಗ್ಯಾಸ್ ಸ್ಟವ್ ಅಕ್ಕಿ ಗೋಧಿ ಅಡುಗೆ ಗೆ ಬಳಸುವ ಸಾಮಾಗ್ರಿಗಳು ಕುಡಿಯುವ ನೀರು ಕೈಲಾದಷ್ಟು ಸಂಪರ್ಕಖ್ಕೆ ಚಕ್ರವರ್ತಿ 90082 66036"

More from Filmibeat

English summary
Heavy rain havoc in Karnataka : Karnataka is having a hard time dealing with floods in several districts and heavy rains wreaked havoc. Sandalwood stars come to help Uttara karnatka people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X