twitter
    For Quick Alerts
    ALLOW NOTIFICATIONS  
    For Daily Alerts

    ಉತ್ತರ ಕರ್ನಾಟಕ ಜನರ ಸಹಾಯಕ್ಕೆ ಧಾವಿಸಿದ ಸುದೀಪ್

    |

    Recommended Video

    Flood: ಸಿನೆಮಾ ಕೆಲಸದ ನಡುವೆಯೂ ಸಾಮಾಜಿಕ ಕಳಕಳಿ ಮೆರೆದ ಕಿಚ್ಚ

    ಮಹಾರಾಷ್ಟ್ರದಲ್ಲಿ ಮೇಘಸ್ಫೋಟದ ಪುರಿಣಾಮ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳು ಜಲಪ್ರಳಯದಲ್ಲಿ ಸಿಲುಕಿವೆ. ಐದಾರು ಜಿಲ್ಲೆಗಳ ಪರಿಸ್ಥಿತಿ ನಡುಗಡ್ಡೆಯಂತಾಗಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು ಪರಿಹಾರ ಕಾರ್ಯ ಕೂಡ ಕಷ್ಟವಾಗುತ್ತಿದೆ.

    ನೆರೆಹಾವಳಿಯಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಕಿಚ್ಚ ಸುದೀಪ್ ಧಾವಿಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ತಕ್ಷಣ ಬರುವಂತೆ ಕಿಚ್ಚ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಕೆ ವಿನಂತಿ ಮಾಡಿಕೊಂಡಿದ್ದಾರೆ.

    ಉತ್ತರ ಕರ್ನಾಟಕದ ಜನರ ನೆರವಿಗೆ ಬಂದ ದಾಸಉತ್ತರ ಕರ್ನಾಟಕದ ಜನರ ನೆರವಿಗೆ ಬಂದ ದಾಸ

    ಈ ಬಗ್ಗೆ ಸುದೀಪ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

    Rain Havoc in Karnataka Sudeep Request To His Fans To Come And Help Uttara Karnataka People

    "ನಾನು ಉತ್ತರ ಕರ್ನಾಟಕದ ಪ್ರವಾಹದ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಮಾತ್ರ ನೋಡುತ್ತಿದ್ದೀನೆ. ನಮ್ಮ ಜನ ಹೇಗಿದ್ದಾರೆ, ಅಲ್ಲಿ ಏನು ನಡೀತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಸರ್ಕಾರ ಏನಾದ್ರು ಮಾಡುತ್ತೆ. ಆದ್ರೆ ನನ್ನ ಸ್ನೇಹಿತರ ಬಳಗಕ್ಕೆ ಚಿಕ್ಕ ವಿನಂತಿ. ಅಲ್ಲೆ ಅಕ್ಕ ಪಕ್ಕದಲ್ಲಿ ಇರುವ ಸ್ನೇಹಿತರು ಹೋಗಿ ಅಲ್ಲಿ ಏನು ಸಹಾಯ ಬೇಕು, ಏನು ಅವಶ್ಯಕತೆ ಇದೆ, ತಕ್ಷಣಕ್ಕೆ ಏನು ಮಾಡಹುದು, ನಮ್ಮಕೈಯಲ್ಲಿ ಏನು ಮಾಡಲಿಕ್ಕೆ ಆಗುತ್ತೆ ಎಂದು ನನಗೆ ತಿಳಿಸಿ. ನಾವೆಲ್ಲರು ಸೇರಿ ನಮ್ಮವರಿಗೆ ಸಹಾಯ ಮಾಡೋಣ. ದಯವಿಟ್ಟು ಆದಷ್ಟು ಬೇಗ ಹೋಗಿ ನಮ್ಮರಿಗೆ ಏನು ಬೇಕು ಎನ್ನುವುದನ್ನು ತಿಳಿಸಿ" ಎಂದು ಕೇಳಿಕೊಂಡಿದ್ದಾರೆ.

    ಸುದೀಪ್ ಮಾತಿನಂತೆ ಅಭಿಮಾನಿಗಳು ಉತ್ತರ ಕರ್ನಾಟಕ ನೆರವಿಗೆ ದಾವಿಸುತ್ತಿದ್ದಾರೆ. ಅಲ್ಲದೆ ಸಾಕಷ್ಟು ಜನ ನಿಮ್ಮ ಜೊತೆ ಕೈಜೋಡಿಸುವುದಾಗಿ ಹೇಳಿದ್ದಾರೆ. ಸಂತ್ರಸ್ಥ ಜನರಿಗೆ ತಕ್ಷಣಕ್ಕೆ ಅಗ್ಯವಾಗಿರುವ ವಸ್ತುಗಳು ಬಟ್ಟೆ, ಊಟ, ಸಂರಕ್ಷಿತ ಆಹಾರ, ವಾಟರ್ ಬಾಟೆಲ್, ಜನರಲ್ ಮೆಡಿಸನ್ಸ್, ಸಾಬೂನು, ಟೆಟ್ರಾ ಪ್ಯಾಕ್ ಹಾಲು, ಸೇರಿದಂತೆ ಸಾಕಷ್ಟು ಅಗತ್ಯ ವಸ್ತುಗಳ ಪೂರೈಕೆಗೆ ಅಭಿಮಾನಿಗಲು ಮುಂದಾಗಿದ್ದಾರೆ.

    English summary
    Heavy rain havoc in Karnataka:Karnataka is having a hard time dealing with floods in several districts and heavy rains wreaked havoc. Check out the live updates on kannada oneindia. Kannada actor Sudeep request to his Fans to come and help Uttara Karnataka people.
    Thursday, August 8, 2019, 10:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X