Don't Miss!
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕರ್ನಾಟಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ ತಮಿಳು ನಟ ಸೂರ್ಯ
ಕರ್ನಾಟಕದಲ್ಲಿ ಉಂಟಾದ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ಬೀದಿಗೆ ಬಂದಿದ್ದಾರೆ. ನೆರೆ ಸಂತ್ರಸ್ತರಿಗೆ ನೆರವಿನ ಅವಶ್ಯಕತೆ ಇದೆ. ಇಡೀ ಕರ್ನಾಟಕ ಮಂದಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಸ್ಯಾಂಡಲ್ ವುಡ್ ನ ನಟ-ನಟಿಯರು ಉತ್ತರ ಕರ್ನಾಟಕ ಜನರ ನೆರವಿಗೆ ಧಾವಿಸಿದ್ದಾರೆ.
ಈಗ ತಮಿಳು ನಟ ಸೂರ್ಯ ಮತ್ತು ಸಹೋದರ ಕಾರ್ತಿಕ್ ಇಬ್ಬರು ಕರ್ನಾಟಕ ಜನರ ನೋವಿಗೆ ಸ್ಪಂದಿಸಿದ್ದಾರೆ. ಸ್ಟಾರ್ ಸಹೋದರರಿಬ್ಬರು ಕರ್ನಾಟಕ ಮತ್ತು ಕೇರಳ ನೆರೆ ಸಂತ್ರಸ್ತರಿಗೆ 10ಲಕ್ಷ ಪರಿಹಾರ ನೀಡಿದ್ದಾರೆ. ಈ ಬಗ್ಗೆ ತಮಿಳು ಚಿತ್ರದ ವಿಮರ್ಶಕ ರಮೇಶ್ ಬಾಲ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಉತ್ತರ
ಕರ್ನಾಟಕ
ನೆರೆ
ಸಂತ್ರಸ್ಥರಿಗೆ
2
ಲಕ್ಷ
ನೀಡಿದ
'ಬರ್ನಿಂಗ್
ಸ್ಟಾರ್'
ಕರ್ನಾಟಕ ಜನರ ನೆರವಿಗೆ ಧಾವಿಸಿದ ನಟ ಸೂರ್ಯ ಮತ್ತು ಕಾರ್ತಿಕ್ ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ. ಈ ಹಿಂದೆ ತಮಿಳುನಾಡಿನಲ್ಲದ ಪ್ರವಾಹಪರಿಸ್ಥಿತಿಗೆ ಕರ್ನಾಟಕ ಜನ ನೆರವಿಗೆ ಧಾವಿಸಿದ್ರು. ಆದ್ರೆ ಕರ್ನಾಟಕದ ಜನ ಸಂಕಷ್ಟಕ್ಕೆ ಸಿಲುಕಿದ್ರೆ ಪರಭಾಷೆಯ ಸ್ಟಾರ್ಸ್ ತಲೆಕೆಡಿಸಿಕೊಳ್ಳುವುದಿಲ್ಲ, ನೋಡಿದ್ರು ನೋಡದ ಹಾಗೆ ಮೌನ ವಹಿಸಿರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.
ಆದ್ರೀಗ ಸೂರ್ಯ ಬ್ರದರ್ಸ್ ಸಹಾಯಕ್ಕೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೀಕರ ಮಳೆಯಿಂದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ, ಕೊಡಗು ಸೇರಿದಂತೆ ಅನೇಕ ಕಡೆ ಜಲಪ್ರಳಯ ಉಂಟಾಗಿದ್ದು ಭಾರಿ ಹಾನಿ ಸಂಬವಿಸಿದೆ.