50 ದಿನ ಪೂರೈಸಿದ 'ಸು ಫ್ರಮ್ ಸೋ'; ತಮಿಳು, ಹಿಂದಿ ರೀಮೆಕ್ ಬಗ್ಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ

ಜೆಪಿ ತಮ್ಮಿನಾಡ್ ನಿರ್ದೇಶಿಸಿ ನಟಿಸಿದ 'ಸು ಫ್ರಮ್ ಸೋ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಇದೀಗ ಓಟಿಟಿಗೆ ಬಂದು ಸಿನಿಮಾ ಸದ್ದು ಮಾಡ್ತಿದೆ. ಮತ್ತೊಂದು ಕಡೆ ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದೆ.

ಹೌದು ಸಿನಿಮಾ ಓಟಿಟಿಗೆ ಬಂದಮೇಲೆ ಕೂಡ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ. ಬೆಂಗಳೂರಿನಲ್ಲೇ 10ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರೆಸಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ 'ಸು ಫ್ರಮ್ ಸೋ' ಪ್ರೇಕ್ಷಕರನ್ನು ರಂಜಿಸಿ ಸಂಚಲನ ಸೃಷ್ಟಿಸಿತ್ತು. 'ಮುಂಗಾರುಮಳೆ' ಬಳಿಕ ಅದೇ ರೀತಿ ಹೊಸಬರ ಸಿನಿಮಾವೊಂದು ಅಚ್ಚರಿಯ ಗೆಲುವು ಕಂಡಿದ್ದು ಸುಳ್ಳಲ್ಲ.

Raj B Shetty Clarifies on Su From So Tamil Remake amp amp Hindi Dubbing Rights Sold

ಸ್ಟಾರ್ ನಟರು ನಟಿಸಿಲ್ಲ, ಬಜೆಟ್ 5 ಕೋಟಿ ದಾಟಲಿಲ್ಲ. ಭಾರೀ ಪ್ರಚಾರ ಮಾಡಲಿಲ್ಲ. ಚಿತ್ರದ ಹಾಡುಗಳು ಹಿಟ್ ಆಗಿರಲಿಲ್ಲ. ಆದರೂ ದೊಡ್ಡ ದೊಡ್ಡ ಸಿನಿಮಾಗಳಿಗೆ ಸೆಡ್ಡು ಹೊಡೆದು 'ಸು ಫ್ರಮ್ ಸೋ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದಲ್ಲಿ ನಟಿಸಿದ್ ಬಹುತೇಕ ಕಲಾವಿದರ ಮುಖ ಪರಿಚಯವೇ ಕನ್ನಡ ಸಿನಿರಸಿಕರಿಗೆ ಇರಲಿಲ್ಲ. ಕನ್ನಡ ಮಾತ್ರವಲ್ಲ ಮಲಯಾಳಂ ಭಾಷೆಗೂ ಸಿನಿಮಾ ಡಬ್ ಆಗಿ ಹಿಟ್ ಆಗಿತ್ತು.

ಸದ್ಯ ಸಿನಿಮಾ ಓಟಿಟಿಗೆ ಬಂದಿದೆ. ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವರು ಈ ಸಿನಿಮಾದಲ್ಲಿ ಅಂಥಾದ್ದೇನಿದೆ ಎಂದು ಕೂಡ ಹೇಳುತ್ತಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸಿದ್ದಾರೆ. ಕನ್ನಡಿಗರು ಮಾತ್ರವಲ್ಲ ಪರಭಾಷಿಕರಿಗೂ ಸಿನಿಮಾ ಇಷ್ಟವಾಗಿದೆ. ವಿದೇಶಗಳಲ್ಲಿ ಕೂಡ 'ಸು ಫ್ರಮ್ ಸೋ' ಹಿಟ್ ಆಗಿದೆ. 50 ದಿನಗಳಲ್ಲಿ ವಿಶ್ವದಾದ್ಯಂತ 122 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್‌ ಪಂಡಿತರು ಅಂದಾಜಿಸುತ್ತಿದ್ದಾರೆ. ಅದರಲ್ಲಿ ಮಲಯಾಳಂ ವರ್ಷನ್ 6 ಕೋಟಿ ರೂ. ಗಳಿಕೆ ತಂದು ಕೊಟ್ಟಿದೆ.

Raj B Shetty Clarifies on Su From So Tamil Remake amp amp Hindi Dubbing Rights Sold

ಪ್ಯಾನ್ ಇಂಡಿಯಾ ಸಿನಿಮಾಗಳು ಅಂದ್ರೆ 5 ಭಾಷೆಯಲ್ಲಿ ಬಿಡುಗಡೆ ಆಗುತ್ತದೆ. ಆದರೆ ಹಿಂದಿ ಹಾಗೂ ತಮಿಳು ಭಾಷೆಗಳಿಗೆ 'ಸು ಫ್ರಮ್ ಸೋ' ಸಿನಿಮಾ ಡಬ್ ಆಗಲೇ ಇಲ್ಲ. ಯಾಕೆ ಎನ್ನುವ ಗೊಂದಲ ಕೆಲವರಲ್ಲಿದೆ. ಹಿಂದಿಯಲ್ಲಿ ಅಜಯ್ ದೇವನ್ ಸಿನಿಮಾ ರೀಮೆಕ್ ಮಾಡ್ತಾರೆ ಎನ್ನುವ ವದಂತಿ ಹರಿದಾಡಿತ್ತು. ಈ ಬಗ್ಗೆ ಸ್ವತಃ ನಿರ್ಮಾಪಕ ರಾಜ್ ಬಿ ಶೆಟ್ಟಿ ಮಾತನಾಡಿದ್ದಾರೆ. ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. "ತಮಿಳು ರೀಮೆಕ್ ರೈಟ್ಸ್ ಮಾರಾಟವಾಗಿದೆ, ಜೊತೆಗೆ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ. ಹಾಗಾಗಿ ಹಿಂದಿಗೆ ರೀಮೆಕ್ ಮಾಡುವ ಮಾತೇ ಬರುವುದಿಲ್ಲ" ಎಂದಿದ್ದಾರೆ.

ಕ್ಲೈಮ್ಯಾಕ್ಸ್‌ನಲ್ಲಿ ಪಾರ್ಟ್‌-2 ಮಾಡುವಂತೆ ಸುಳಿವು ನೀಡಲಾಗಿತ್ತು. ಆದರೆ ಅಂತಹ ಆಲೋಚನೆ ಇಲ್ಲ ಎಂದು ಈಗಾಗಲೇ ಸ್ವತಃ ರಾಜ್‌ ಬಿ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಒಮ್ಮೆ ಹಿಟ್ ಆಗಿರುವ ಕಥೆಯನ್ನು ಮುಂದುವರೆಸುವ ಲೆಕ್ಕಾಚಾರ ನನಗಿಲ್ಲ. ಬೇರೆ ಸಿನಿಮಾಗಳನ್ನು ಮಾಡ್ತೀನಿ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.

ಓಟಿಟಿಯಲ್ಲಿ ತಮಿಳು ವರ್ಷನ್ ಯಾಕೆ ಇಲ್ಲ ಎಂದು ಕೆಲವರು ಕೇಳುತ್ತಿದ್ದಾರೆ. ರೀಮೆಕ್ ಮಾಡಲು ಪ್ಲ್ಯಾನ್ ಮಾಡಿರುವುದರಿಂದ ಸದ್ಯ ಡಬ್ಬಿಂಗ್ ಮಾಡಿಲ್ಲ. ಯಾರು ರೀಮೆಕ್ ಮಾಡುತ್ತಾರೆ ಎನ್ನುವ ಬಗ್ಗೆ ಕಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ಬಾಕ್ಸಾಫೀಸ್ ಗಳಿಕೆ ಮಾತ್ರವಲ್ಲ ಹಿಂದಿ ಡಬ್ಬಿಂಗ್ ರೈಟ್ಸ್, ತಮಿಳು ರೀಮೆಕ್ ರೈಟ್ಸ್ ಕೂಡ ಭರ್ಜರಿ ಬೆಲೆಗೆ ಮಾರಾಟವಾಗಿದೆ. 7 ಕೋಟಿ ರೂ.ಗೆ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಬಿಕರಿಯಾಗಿದೆ. ಈಗಾಗಲೇ ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದ್ದು ಶೀಘ್ರದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೀಮಿಯರ್ ಆಗಲಿದೆ.

More from Filmibeat

English summary
‘Su From So’ Becomes a Blockbuster: ₹122 Crore Worldwide, OTT Release & Remake Buzz
Read more about: raj b shetty sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X