ಮಾಲಿವುಡ್ ನಂತರ ಬಾಲಿವುಡ್‌ನ ಟಿಕೆಟ್ ಪಡೆದ ರಾಜ್ ಬಿ ಶೆಟ್ಟಿ, ಯಾವುದು ಆ ಚಿತ್ರ, ಯಾರು ಆ ನಿರ್ದೇಶಕ..?

ಒಂದು ಮೊಟ್ಟೆಯ ಕಥೆ ಮೂಲಕ ಸರಳವಾದ ಕಥೆ ಹೇಳಿ ಸ್ಟಾರ್ ಆಗಿ ಹೊರಹೊಮ್ಮಿದವರು ರಾಜ್ ಬಿ ಶೆಟ್ಟಿ. ಅಲ್ಲಿಂದ ಇಲ್ಲಿಯವರೆಗೆ ಆಕ್ಟರ್- ಡೈರೆಕ್ಟರ್- ಡೈಲಾಗ್ ರೈಟರ್ ಆಗಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಸೇವೆ ಸಲ್ಲಿಸುತ್ತಾ ಬಂದ ರಾಜ್ ಬಿ ಶೆಟ್ಟಿ ಸದ್ಯ ಹೆಚ್ಚು ಕಡಿಮೆ ನಟನೆಯತ್ತಲೇ ವಾಲಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸಾಲು ಸಾಲು ಸಿನಿಮಾ ಒಪ್ಪಿಕೊಳ್ಳುತ್ತಿರುವ ರಾಜ್ ಬಿ ಶೆಟ್ಟಿ ಸದ್ಯಕ್ಕೆ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ಟಿಕೆಟ್ ಪಡೆದಿದ್ದಾರೆ. ಹಿಂದಿ ಚಿತ್ರದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ.

ಹೌದು, ಇತ್ತೀಚೆಗಷ್ಟೇ ಮಾಲಿವುಡ್‌ನಲ್ಲಿ ತಮ್ಮ ಅಭಿನಯದ ಮೂಲಕ ಮ್ಯಾಜಿಕ್ ಮಾಡಿ, ಅಲ್ಲಿನ ಚಿತ್ರ ರಸಿಕರ ಹೃದಯ ಗೆದ್ದ ರಾಜ್ ಬಿ ಶೆಟ್ಟಿ ಅವರನ್ನು ಸದ್ಯಕ್ಕೆ ಹಿಂದಿ ಸಿನಿಮಾವೊಂದು ಅರಸಿಕೊಂಡು ಬಂದಿದೆ. ವಿಶೇಷ ಅಂದರೆ ಈ ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ದೇಶನ ಮಾಡಲಿದ್ದಾರೆ.

Raj B Shetty is set to make his Bollywood debut with Anurag Kashyap s film

ಇನ್ನೂ.. ನಿಮಗೆ ನೆನಪಿದ್ದರೆ, ಹಿಂದೆ ಇದೇ ಅನುರಾಗ್ ಕಶ್ಯಪ್, ರಾಜ್ ಬಿ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿದ್ದ 'ಗರುಡ ಗಮನ ವೃಷಭ ವಾಹನ' ಚಿತ್ರವನ್ನು ತೀವೃವಾಗಿ ಮೆಚ್ಚಿಕೊಂಡಿದ್ದರು.ರಾಜ್ ಬಿ ಶೆಟ್ಟಿ ನನ್ನ ನೆಚ್ಚಿನ ನಿರ್ದೇಶಕ ಎಂದಿದ್ದರು. ಇಷ್ಟೇ ಅಲ್ಲ ಅಖಂಡ ಭಾರತದ ಸಮಸ್ತ ಸಿನಿಮಾ ಪ್ರೇಮಿಗಳಲ್ಲಿ ಈ ಚಿತ್ರವನ್ನು ನೋಡುವಂತೆ ಮನವಿಯನ್ನು ಮಾಡಿ, ಚಿತ್ರಕ್ಕೆ ನಾಲ್ಕೂವರೆ ಸ್ಟಾರ್‌ನ್ನೂ ಅನುರಾಗ್ ಕಶ್ಯಪ್ ಕೊಟ್ಟಿದ್ದರು.

ಇಂಥಾ ಅನುರಾಗ್ ಕಶ್ಯಪ್ ಸದ್ಯಕ್ಕೆ ಹೊಸದೊಂದು ಸಿನಿಮಾ ಶುರು ಮಾಡುತ್ತಿದ್ದಾರೆ. ಮಲಯಾಳಂನ ನಟ ಜೋಜು ಜಾರ್ಜ್ ಕೂಡ ಈ ಚಿತ್ರದಲ್ಲಿದ್ದಾರೆ. ಇನ್ನೂ.. ಅನಿಮಲ್ ಚಿತ್ರದ ಮೂಲಕ ಮರು ಹುಟ್ಟು ಪಡೆದ ಬಾಬಿ ಡಿಯೋಲ್ ಕೂಡ ಅನುರಾಗ್ ಕಶ್ಯಪ್ ಅವರ ಈ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇವರ ಜೊತೆ ರಾಜ್ ಬಿ ಶೆಟ್ಟಿ ಕೂಡ ಅಖಾಡಕ್ಕಿಳಿಯುತ್ತಿದ್ದಾರೆ

Raj B Shetty is set to make his Bollywood debut with Anurag Kashyap s film

ಅಂದ್ಹಾಗೇ ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರದ್ದು ಅತಿಥಿ ಪಾತ್ರ. ಹಾಗಂಥ ಹೀಗೆ ಬಂದು ಹಾಗೇ ಹೋಗುವಂತಹ ಪಾತ್ರ ಅಲ್ಲ. ತುಂಬಾನೇ ತೂಕ ಇರುವ ಪಾತ್ರ. ಇನ್ನೂ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿರುವ ರಾಜ್, ಅನುರಾಗ್ ಕಶ್ಯಪ್ ಸಿನಿಮಾ ನೋಡುತ್ತಾ ಬೆಳೆದವನು ನಾನು, ನನಗೆ ಅವರ ಸಿನಿಮಾ ಅಂದರೆ ಇಷ್ಟ ಎಂದಿದ್ದಾರೆ. ಅವರು ನನ್ನ ಆಪ್ತರು ಕೂಡ ಹೌದು ಎಂದಿದ್ದಾರೆ. ಚಿತ್ರದಲ್ಲಿ ಒಂದು ಪಾತ್ರ ಇದೆ ಮಾಡ್ತೀಯಾ ಎಂದು ಕೇಳಿದರು. ನಾನು ಒಪ್ಪಿದೆ ಎಂದಿರುವ ರಾಜ್ ಬಿ ಶೆಟ್ಟಿ ಶೀರ್ಷಿಕೆ ಸಮೇತ ಉಳಿದ ವಿವರವನ್ನೂ ಅವರೇ ಸದ್ಯದಲ್ಲಿಯೇ ಹೇಳುತ್ತಾರೆ ಎಂದಿದ್ದಾರೆ.

ಇನ್ನೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಇದೇ ಆಗಸ್ಟ್ 21ರಿಂದ ಶುರುವಾಗಲಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಉಳಿದಂತೆ ಈ ಚಿತ್ರ ಹೊರತು ಪಡಿಸಿದರೆ ರಾಜ್ ಬಿ ಶೆಟ್ಟಿ, ಡಾ.ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅಭಿನಯದ, ಅರ್ಜುನ್ ಜನ್ಯ ನಿರ್ದೇಶನದ '45' ಚಿತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X