'ಟೋಬಿ' Vs 'ಸಪ್ತಸಾಗರದಾಚೆ..' "ಘಾಸಿ ಮಾಡೋದು ಉದ್ದೇಶ ಅಲ್ಲ": ರಾಜ್ ಬಿ. ಶೆಟ್ಟಿ
ಫಸ್ಟ್ ಲುಕ್ ಪೋಸ್ಟರ್‌ನಿಂದಲೇ ರಾಜ್ ಬಿ. ಶೆಟ್ಟಿ ನಟನೆಯ 'ಟೋಬಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ನೈಝ ಕಥೆ ಆಧರಿಸಿದ ಈ ಚಿತ್ರದ ಖಡಕ್ ರೋಲ್‌ನಲ್ಲಿ ರಾಜ್ ಅಬ್ಬರಿಸಿದ್ದಾರೆ. ಟಗರು ಜೊತೆ ಕಾಳಗಕ್ಕೆ ಇಳಿಯುತ್ತಿದ್ದಾರೆ. ಆಗಸ್ಟ್ ಕೊನೆ ವಾರದಲ್ಲಿ 'ಟೋಬಿ' ಸಿನಿಮಾ ತೆರೆಗೆ ಬರ್ತಿದೆ. ಸೆಪ್ಟೆಂಬರ್ 1ಕ್ಕೆ 'ಸಪ್ತಸಾಗರದಾಚೆ ಎಲ್ಲೋ' ರಿಲೀಸ್ ಆಗ್ತಿದೆ.
ವರ್ಷದ ಎರಡು ಬಹುನಿರೀಕ್ಷಿತ ಸಿನಿಮಾಗಳು ಒಂದು ವಾರದ ಅಂತರದಲ್ಲಿ ಬರ್ತಿವೆ. ಹಾಗಾಗಿ ಸಹಜವಾಗಿಯೇ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಸಾಧ್ಯತೆಯಿದೆ. ಹೇಮಂತ್ ರಾವ್ ನಿರ್ದೇಶನದ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. 2 ಭಾಗಗಳಾಗಿ ಕಥೆ ಪ್ರೇಕ್ಷಕರ ಮುಂದೆ ಬರ್ತಿದೆ. ಈಗಾಗಲೇ ಪೋಸ್ಟರ್‌ಗಳು ಹಾಗೂ ಟೀಸರ್ ಸೂಪರ್ ಹಿಟ್ ಆಗಿದೆ. 'ಟೋಬಿ'ಯಷ್ಟೆ ಕಂಟೆಂಟ್ ಇರುವ ಸಬ್ಜೆಕ್ಟ್ ಇದು ಎನ್ನಲಾಗ್ತಿದೆ.

ಈ ಹಿಂದೆ ಕೂಡ ಸಾಕಷ್ಟು ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ಥಿಯೇಟರ್‌ಗೆ ಬಂದು ಬಾಕ್ಸಾಫೀಶ್ ಕ್ಲ್ಯಾಶ್ ಆಗಿದೆ. ಒಂದು ವಾರದ ಅಂತರದಲ್ಲಿ ದೊಡ್ಡ ಸಿನಿಮಾಗಳು ಬಂದ ಉದಾಹರಣೆಯಿದೆ. ಒಟ್ಟಿಗೆ ಸಿನಿಮಾಗಳು ರಿಲೀಸ್ ಆಗುವುದರಿಂದ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಇದನ್ನು ಒಪ್ಪುವುದಿಲ್ಲ.
ರಾಜ್ ಬಿ. ಶೆಟ್ಟಿ ಹೇಳಿದ್ದೇನು?
'ಟೋಬಿ' Vs 'ಸಪ್ತಸಾಗರದಾಚೆ ಎಲ್ಲೋ' ಎನ್ನುವ ಪ್ರಶ್ನೆಗೆ ಕನ್ನಡ ಪಿಕ್ಚರ್ ಯೂಟ್ಯೂಬ್ ಸಂದರ್ಶನದಲ್ಲಿ ಸ್ವತಃ ರಾಜ್ ಬಿ. ಶೆಟ್ಟಿ ಉತ್ತರಿಸಿದ್ದಾರೆ. "ರಕ್ಷಿತ್ ಶೆಟ್ಟಿ ಜೊತೆ ಪೈಪೋಟಿ ಯಾವತ್ತು ಇಲ್ಲ. ಅಂತಹ ದಿನ ಯಾವತ್ತು ಬರಬಾರದು. ಅಷ್ಟು ಒಳ್ಳೆ ಫ್ರೆಂಡ್ ಜೊತೆ ಪೈಪೋಟಿ ಸಾಧ್ಯಾನೇ ಇಲ್ಲ. ನಾನು ಎಲ್ಲೇ ಇದ್ದರೂ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಪ್ರಚಾರ ಮಾಡುತ್ತೇನೆ. ಹೇಮಂತ್ ರಾವ್, ರಕ್ಷಿತ್ ಇಬ್ಬರು ಇಷ್ಟ. ಹಾಗಾಗಿ ನಮ್ಮ ಸಿನಿಮಾಗೂ ಹಣ ಬರಬೇಕು, ಅವರ ಚಿತ್ರಕ್ಕೂ ಬರಬೇಕು"
ನಮಗೆ ಘಾಸಿ ಮಾಡುವ ಉದ್ದೇಶ ಇರಲಿಲ್ಲ
"ನಾನು ರಕ್ಷಿತ್ ಬಳಿ ಮೊದಲೇ ಹೇಳಿದ್ದೆ ಆಗಸ್ಟ್ ಕೊನೆವಾರ ನಮ್ಮ 'ಟೋಬಿ' ರಿಲೀಸ್ ಅಂತ. ಅವರು ಬೇರೆ ಪ್ಲ್ಯಾನ್ ಅಲ್ಲಿ ಇದ್ದರು. ಆದರೆ ಯಾವುದೋ ಕಾರಣದಿಂದ ಅವರು ಸೆಪ್ಟೆಂಬರ್ ಒಂದಕ್ಕೆ ರಿಲೀಸ್ ಮಾಡುವಂತಾಯಿತು. ಅವರು ನಮಗೆ ಘಾಸಿ ಮಾಡುವುದಕ್ಕಂತೂ ಮಾಡಿಲ್ಲ. ಅದರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಅವರ ನಿರ್ಧಾರಕ್ಕೆ ಏನೋ ಬಲವಾದ ಕಾರಣ ಇರಬೇಕು. ಸಿನಿಮಾ ಚೆನ್ನಾಗಿದ್ದರೆ 2 ಗೆಲ್ಲುತ್ತದೆ ಎನ್ನುವ ನಂಬಿಕೆ ಹೇಮಂತ್ ಅವರಿಗಿದೆ. ಅದೇ ನಂಬಿಕೆ ನನಗೂ ಇದೆ." ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.

ರಿಯಲ್ ಲೈಫ್ ವ್ಯಕ್ತಿಯ ಕಥೆ 'ಟೋಬಿ'
ಕಾರವಾರದ ವ್ಯಕ್ತಿಯೊಬ್ಬರ ಕಥೆಯಿಂದ ಪ್ರೇರಣೆಗೊಂಡು 'ಟೋಬಿ' ಸಿನಿಮಾ ನಿರ್ಮಾಣಗೊಂಡಿದೆ. ಟಿಕೆ ದಯಾನಂದ್ ಕತೆ ಬರೆದಿದ್ದು ಸ್ವತಃ ರಾಜ್ ಬಿ. ಶೆಟ್ಟಿ ಚಿತ್ರಕತೆ ಬರೆದಿದ್ದಾರೆ. ಬಾಸಿಲ್ ಆಕ್ಷನ್ ಕಟ್ ಹೇಳಿದ್ದಾರೆ. ಟಗರಿನಿಂದ ಪ್ರೇರಣೆಗೊಂಡು ಈ ಕಥೆ ಮಾಡಲಾಗಿದೆ. ಟಗರು ಸುಮ್ಮನೆ ಗುದ್ದುವುದಿಲ್ಲ. ಕೆಣಕಿದರೆ ಮಾತ್ರ ಗುದ್ದುತ್ತದೆ. ಇದೇ ರೀತಿಯಲ್ಲಿ 'ಟೋಬಿ' ಪಾತ್ರ ಕೂಡ ಇರುತ್ತದೆ.
ರಾಜ್ ಬಿ. ಶೆಟ್ಟಿ ದುಬಾರಿ ಸಿನಿಮಾ
ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮಿಥುನ್ ಮುಕುಂದನ್ ಸಂಗೀತ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ - ಸಂಕಲನ ಹಾಗೂ ಅರ್ಜುನ್ ರಾಜ್ - ರಾಜಶೇಖರ್ ಸಾಹಸ ಚಿತ್ರಕ್ಕಿದೆ. ಸಂಯುಕ್ತ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. 'ಗರುಡುಗಮನ ವೃಷಭವಾಹನ' ನಂತರ ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮತ್ತೆ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ.


Click it and Unblock the Notifications











