ಒಂದು ಮೊಟ್ಟೆಯ ಕಥೆ ಸಿನಿಮಾ ನಾಯಕ ಹೊಸ ಪ್ರಯತ್ನ

By Pavithra

ಒಂದು ಮೊಟ್ಟೆ ಕಥೆ ಎನ್ನುವ ಸಿನಿಮಾ ಮಾಡಿ ಸ್ಯಾಂಡಲ್ ವುಡ್ ಸಿನಿಮಾ ಮಂದಿಗಳ ಮಧ್ಯೆ ಈ ರೀತಿಯಲ್ಲೂ ಚಿತ್ರ ಮಾಡಬಹುದು ಎಂದು ತೋರಿಸಿಕೊಟ್ಟ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ. ಕೇವಲ ಕನ್ನಡಿಗರು ಮಾತ್ರವಲ್ಲದೆ ಹೊರ ದೇಶದಲ್ಲಿಯೂ ಒಂದು ಮೊಟ್ಟೆಯ ಕಥೆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.

ಸಿನಿಮಾ ಮಾಡಲು ಉತ್ತಮ ಕಥೆ ಇದ್ದರೆ ಸಾಕು ಎನ್ನುವ ನಿರ್ಧಾರ ಮಾಡಿರುವ ರಾಜ್ ಬಿ ಶೆಟ್ಟಿ ಸದ್ಯ ವಿಭಿನ್ನ ಪಾತ್ರಗಳನ್ನ ಮುಖ ಮಾಡಿದ್ದಾರೆ. ನಿರ್ದೇಶಿಸಿ ಅಭಿನಯಿಸಿದ ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನಸ್ಸನ್ನ ಗೆದ್ದಿರುವ ರಾಜ್ ಹೊಸದೊಂದು ಪ್ರಯತ್ನ ಮಾಡಿದ್ದಾರೆ.

ನಗಿಸುವ ನಾಯಕನಾಗಿ ತೆರೆ ಮೇಲೆ ಬಂದಿದ್ದ ರಾಜ್ ಬಿ ಶೆಟ್ಟಿ ಈಗ ಖಳನಾಯಕ ಆಗಿದ್ದಾರೆ. ಅದರ ಜೊತೆಯಲ್ಲಿ ರಾಜ್ ಬಿ ಶೆಟ್ಟಿ ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಮಧ್ಯ ನಿರ್ದೇಶನದ ಕಡೆ ಗಮನ ಹರಿಸುತ್ತಿದ್ದಾರೆ . ಹಾಗಾದರೆ ರಾಜ್ ಖಳನಾಯಕನ ಲುಕ್ ಹೇಗಿದೆ? ಒಂದು ಮೊಟ್ಟೆಯ ಕಥೆ ನಾಯಕ ಅಭಿನಯಿಸುತ್ತಿರುವ ಮುಂದಿನ ಚಿತ್ರಗಳು ಯಾವುವು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ

ರಾಜ್ ಬಿ ಶೆಟ್ಟಿ ಈಗ ಖಳನಾಯಕ

ರಾಜ್ ಬಿ ಶೆಟ್ಟಿ ಈಗ ಖಳನಾಯಕ

ಒಂದು ಮೊಟ್ಟೆಯ ಕಥೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹತ್ತಿರವಾದ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಸದ್ದಲ್ಲದೆ ಚಿತ್ರೀಕರಣ ಮುಗಿಸಿರುವ ಅಮ್ಮಚ್ಚಿ ಎಂಬ ನೆನಪು ಸಿನಿಮಾದಲ್ಲಿ ರಾಜ್ ಖಳನಾಯಕನಾಗಿ ಅಭಿನಯಿಸಿದ್ದಾರೆ.

ಅಮ್ಮಚ್ಚಿ ಎಂಬ ನೆನಪು

ಅಮ್ಮಚ್ಚಿ ಎಂಬ ನೆನಪು

ಚಂಪ ಶೆಟ್ಟಿ ನಿರ್ದೇಶನ ಪ್ರಕಾಶ್ ಶೆಟ್ಟಿ ನಿರ್ಮಾಣ ಮಾಡಿರುವ ಅಮ್ಮಚ್ಚಿ ಎಂಬ ನೆನಪು ಸಿನಿಮಾಗೆ ವೈದೇಹಿ ಅವರ ಮೂರು ಕಥೆಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಚಿತ್ರದಲ್ಲಿ ಕುಂದಾಪುರ ಕನ್ನಡವನ್ನ ಬಳಸಿಕೊಂಡಿದ್ದಾರೆ.

ಮಾಯಾ ಬಜಾರ್ ನಲ್ಲಿ ರಾಜ್

ಮಾಯಾ ಬಜಾರ್ ನಲ್ಲಿ ರಾಜ್

ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿರುವ ಎರಡನೇ ಚಿತ್ರ ಮಾಯಾಬಜಾರ್ ನಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ಮಲೆಯಾಳಂ ಚಿತ್ರದಲ್ಲಿ ರಾಜ್ ಅಭಿನಯ

ಮಲೆಯಾಳಂ ಚಿತ್ರದಲ್ಲಿ ರಾಜ್ ಅಭಿನಯ

ಕನ್ನಡದ ಎರಡು ಸಿನಿಮಾದಲ್ಲಿ ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡಿರುವ ರಾಜ್ ಬಿ ಶೆಟ್ಟಿ ಮಣಿಪಾಲ್ ನ ವಿದ್ಯಾರ್ಥಿಗಳು ಸೇರಿ ನಿರ್ದೇಶನ ಮಾಡುತ್ತಿರುವ ಫಿಕ್ಷನ್ ಎನ್ನುವ ಮಲೆಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಅಮ್ಮಚ್ಚಿ ಎಂಬ ನೆನಪು ಚಿತ್ರದಲ್ಲಿನ ರಾಜ್ ಬಿ ಶೆಟ್ಟಿ ಲುಕ್ ಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

More from Filmibeat

English summary
Kannada actor Raj B Shetty starrer Ammachi Emba Nenapu movie first look was released. Raj B Shetty plays the villain character in the movie. Champa Shetty directed the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X