Exclusive: 'ಕೂಲಿ' ಆರ್ಭಟಕ್ಕೆ 'ಸು ಫ್ರಮ್‌ ಸೋ' ಬಲಿ? ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ

ಪರಭಾಷೆಯ ದೊಡ್ಡ ಸಿನಿಮಾಗಳು ಬಂದಾಗ ಕನ್ನಡ ಸಿನಿಮಾಗಳನ್ನು ಕರ್ನಾಟಕದಲ್ಲಿ ಸಮಸ್ಯೆ ಎದುರಿಸುವಂತಾಗುತ್ತದೆ. ಅದರಲ್ಲೂ ರಜನಿಕಾಂತ್ ಸಿನಿಮಾ ಅಂದ್ರೆ ಕೇಳಬೇಕಾ? ಈ ಬಾರಿ ಸೂಪರ್ ಜೊತೆ ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್, ರಚಿತಾ ರಾಮ್ ಕೂಡ ಇದ್ದಾರೆ. ಬಹಳ ದೊಡ್ಡಮಟ್ಟದಲ್ಲಿ 'ಕೂಲಿ' ಸಿನಿಮಾ ಕರ್ನಾಟಕದಲ್ಲಿ ತೆರೆಗಪ್ಪಳಿಸಿದೆ.

ಸದ್ಯ ಕನ್ನಡದ 'ಸು ಫ್ರಮ್ ಸೋ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜುಲೈ 25ರಂದು ತೆರೆಗೆ ಬಂದಿದ್ದ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾ ದಾಖಲೆಗಳನ್ನು ಈ ಹೊಸಬರ ಸಿನಿಮಾ ಮುರಿದು ಮುನ್ನಗ್ಗುತ್ತಿದೆ. ಈಗಾಗಲೇ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗುತ್ತಿದೆ. ತೆಲುಗಿನ 'ಹರಿಹರ ವೀರಮಲ್ಲು', 'ಕಿಂಗ್‌ಡಮ್', ತಮಿಳಿನ 'ತಲೈವನ್ ತಲೈವಿ' ಚಿತ್ರಗಳಿಗೂ ಈ ಕನ್ನಡದ ಸಿನಿಮಾ ಸೆಡ್ಡು ಹೊಡೆದಿತ್ತು.

Raj B Shetty Reacts to Coolie Clash Su From So Still Strong After 100 Crore Run

ಕನ್ನಡದ 'ಎಕ್ಕ', 'ಬಂದೂಕ್' ಸಿನಿಮಾಗಳ ನಡುವೆಯೂ 'ಸು ಫ್ರಮ್ ಸೋ' ಆರ್ಭಟ ಜೋರಾಗಿತ್ತು. ಕಳೆದ ವಾರ ತಮಿಳಿನ 'ಕೂಲಿ' ಹಾಗೂ ಬಾಲಿವುಡ್ 'ವಾರ್- 2' ಚಿತ್ರಗಳ ಆರ್ಭಟದ ನಡುವೆಯೂ ರಾಜ್‌ ಬಿ ಶೆಟ್ಟಿ ನಿರ್ಮಾಣದ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಕೇವಲ 4 ಕೋಟಿ ರೂ. ಬಜೆಟ್‌ನಲ್ಲಿ ರಾಜ್ ಈ ಚಿತ್ರ ನಿರ್ಮಿಸಿದ್ದರು. ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಬಹುತೇಕ ಹೊಸ ಪ್ರತಿಭೆಗಳೇ 'ಸು ಫ್ರಮ್ ಸೋ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಭಾರೀ ಪ್ರಚಾರ ಇಲ್ಲದೇ, ಸ್ಟಾರ್ ಕಾಸ್ಟ್ ಇಲ್ಲದೇ ಸಿಂಪಲ್ ಆಗಿ ಬಂದಿದ್ದ ಸಿನಿಮಾ ಸತತ ನಾಲ್ಕು ವಾರ ಎಲ್ಲೆಲ್ಲೂ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಚಿತ್ರಮಂದಿರಕ್ಕೆ ಬರಲ್ಲ ಎನ್ನುವವರನ್ನು ಸಿನಿಮಾ ಎಳೆದು ತಂದಿತ್ತು. ಪರಭಾಷಿಕರು ಕೂಡ ರವಿಯಣ್ಣನ ಕಾಮಿಡಿ ಕರಾಮತ್ತಿಗೆ ಮರುಳಾಗಿದ್ದಾರೆ. ಇದೆಲ್ಲದರ ನಡುವೆ ಇದೀಗ 'ಕೂಲಿ' ಸಿನಿಮಾ ಬಂದಿದೆ. ಫಸ್ಟ್ ವೀಕೆಂಡ್ 404 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಮೊದಲಿನಿಂದಲೂ ಕರ್ನಾಟಕದಲ್ಲಿ ರಜನಿಕಾಂತ್ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡುತ್ತವೆ. ಲೋಕೇಶ್ ಕನಕರಾಜ್ ಜೊತೆ ತಲೈವಾ ಕೈ ಜೋಡಿಸಿದ್ದಾರೆ ಎಂದಮೇಲೆ ಕ್ರೇಜ್ ಕೇಳಬೇಕಾ? ಟೀಸರ್, ಟ್ರೈಲರ್, ಸಾಂಗ್ಸ್ ಕೂಡ ಹಿಟ್ ಆಗಿತ್ತು. ಬೆಂಗಳೂರಿನಲ್ಲಿ 'ಕೂಲಿ' ಫೀವರ್ ಹೇಗಿತ್ತು ಅಂದ್ರೆ 2000 ರೂ.ಗೆ ಕೆಲವೆಡೆ ಟಿಕೆಟ್ ಮಾರಾಟವಾಗಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮೊದಲ ದಿನ 500 ರೂ, 600 ರೂ,ಗೆ ಟಿಕೆಟ್ ಬಿಕರಿಯಾಗಿತ್ತು.

ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ 'ಕೂಲಿ' ಸಿನಿಮಾ ಮುಗ್ಗರಿಸಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಪ್ರೇಕ್ಷಕರು ಸಿನಿಮಾ ನೋಡುತ್ತಿದ್ದಾರೆ. 'ಕೂಲಿ' ಹಾಗೂ 'ವಾರ್- 2' ಚಿತ್ರಗಳಿಗೆ ಹೆದರಿ ಬೇರೆ ಯಾವುದೇ ಸಿನಿಮಾ ಬಿಡುಗಡೆಗೆ ಯಾರೂ ಮುಂದಾಗಲಿಲ್ಲ. ಆದರೆ ಎರಡೂ ಚಿತ್ರಗಳು ಮಿಶ್ರಪ್ರತಿಕ್ರಿಯೆ ಪಡೆದುಕೊಂಡು ನಿರಾಸೆ ಮೂಡಿಸಿವೆ. ಆದರೂ 'ಕೂಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ.

ದೊಡ್ಡ ಮಟ್ಟದಲ್ಲಿ ಈ ಎರಡೂ ಸಿನಿಮಾಗಳು ಬಿಡುಗಡೆಯಾಗಿದೆ. ಸಹಜವಾಗಿಯೇ 'ಸು ಫ್ರಮ್ ಸೋ' ಚಿತ್ರದ ಕೆಲ ಸ್ಕ್ರೀನ್‌ಗಳು 'ಕೂಲಿ' ಹಾಗೂ 'ವಾರ್- 2' ಪಾಲಾಗಿದೆ. ಹಾಗಂತ ರಾಜ್ ಬಿ ಶೆಟ್ಟಿಗೆ ನಷ್ಟವಾಯ್ತಾ? 'ಕೂಲಿ' ಆರ್ಭಟಕ್ಕೆ 'ಸು ಫ್ರಮ್ ಸೋ' ಬಲಿ ಆಯ್ತಾ? ಎನ್ನುವ ಪ್ರಶ್ನೆ ಮೂಡುತ್ತದೆ. ಈ ಬಗ್ಗೆ ಸ್ವತಃ ರಾಜ್ ಬಿ. ಶೆಟ್ಟಿ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ. 'ಕೂಲಿ' ಚಿತ್ರದಿಂದ ನಮ್ಮ ಚಿತ್ರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ.

Raj B Shetty Reacts to Coolie Clash Su From So Still Strong After 100 Crore Run

"ಕೂಲಿ' ಹಾಗೂ 'ವಾರ್- 2' ಚಿತ್ರಗಳಿಂದ ನಮ್ಮ ಚಿತ್ರಕ್ಕೆ ಯಾವುದೇ ಸಮಸ್ಯೆ ಆಗಲಿಲ್ಲ. 4 ವಾರ ನಮ್ಮ ಸಿನಿಮಾ ಚಿತ್ರಮಂದಿರಗಳಲ್ಲಿ ಕಚ್ಚಿಕೊಂಡಿತ್ತು. ಅದಕ್ಕಿಂತ ಏನು ಬೇಕು ಹೇಳಿ. ಪ್ರೇಕ್ಷಕರ ಆ ಪ್ರೀತಿ ಸಾಕು ಅಲ್ಲವೇ? ಇನ್ನು ಎರಡೂ ವಾರ ನಮ್ಮ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. 'ಸು ಫ್ರಮ್ ಸೋ' ಚಿತ್ರದಿಂದ ಬಹಳ ಖುಷಿಯಾಗುತ್ತಿದೆ. ಇದಕ್ಕಿಂತ ಇನ್ನೇನು ಬೇಕು. ಇನ್ನೆಷ್ಟು ಬೇಕು" ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.

ಮೂರ್ನಾಲ್ಕು ದಿನಗಳಿಂದ ಸ್ಕ್ರೀನ್‌ಗಳ ಸಂಖ್ಯೆ ಕಮ್ಮಿ ಆಗಿರುವ ಬಗ್ಗೆಯೂ ರಾಜ್‌. ಬಿ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. "ಯಾವುದೇ ಸಿನಿಮಾ ಯಶಸ್ವಿಯಾಗಿ 3ರಿಂದ 4 ವಾರ ಪ್ರದರ್ಶನ ಕಂಡ ಬಳಿಕ ಸ್ಕ್ರೀನ್‌ಗಳ ಸಂಖ್ಯೆ ಕಡಿಮೆ ಆಗುವುದು ಒಳ್ಳೆಯದು. ನಮ್ಮ ಸಿನಿಮಾ ವಿಚಾರದಲ್ಲಿ ಅದೇ ಆಗಿದೆ. ಅದಕ್ಕೆ ಖುಷಿಯಿದೆ. ಕಾರಣ ಹೆಚ್ಚು ಸ್ಕ್ರೀನ್ ಇದ್ದಷ್ಟು ಹೆಚ್ಚು ಬಾಡಿಗೆ ಕಟ್ಟಬೇಕಾಗುತ್ತದೆ. ಅದರಿಂದ ಲಾಭ ಆಗುವುದಿಲ್ಲ. 60% ಆಕ್ಯುಪೆನ್ಸಿ ಇರುವ ಕಡೆ ಶೋ ತೆಗೆದರೆ ಅಲ್ಲಿಂದ ಪಕ್ಕದಲ್ಲೇ ಇರುವ ಮತ್ತೊಂದು ಚಿತ್ರಮಂದಿರಕ್ಕೆ ಜನ ಹೋಗುತ್ತಾರೆ. ಆಗ ಆ ಚಿತ್ರಮಂದಿರ ತುಂಬುತ್ತದೆ. ಇದರಿಂದ ನಷ್ಟ ಹೇಗೆ? ಹೀಗೆಲ್ಲಾ ಲೆಕ್ಕ ಹಾಕುವುದೇ ತಪ್ಪು" ಎಂದು ರಾಜ್. ಬಿ ಶೆಟ್ಟಿ ಹೇಳಿದ್ದಾರೆ.

'ಕೂಲಿ' ಸಿನಿಮಾ ಪೈಪೋಟಿ ಬಗ್ಗೆ ಕೇಳಿದ ಪ್ರಶ್ನೆಗೆ "ನಾವು ಕೂಡ ರಜನಿಕಾಂತ್ ಅಭಿಮಾನಿ. ಸಿನಿಮಾವನ್ನು ಸಿನಿಮಾ ರೀತಿ ನೋಡಬೇಕು. ಇಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಇರುತ್ತದೆ. ನಮ್ಮ ಸಿನಿಮಾ 3 ವಾರ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಈಗ ರಜನಿಕಾಂತ್ ಅವರ ಸಿನಿಮಾ ಬಂದಿದೆ. ನಮ್ಮ ಸಿನಿಮಾ ನೋಡಿದ್ದು ಆಯ್ತು. ಈಗ 'ಕೂಲಿ' ಸಿನಿಮಾ ನೋಡ್ತಿದ್ದಾರೆ. ನಮ್ಮ ಸಿನಿಮಾ ಸಂಪೂರ್ಣವಾಗಿ ಎಲ್ಲಾ ಕಡೆ ತೆಗೆದಿಲ್ಲ, ಶೋ ಇರುವ ಕಡೆಗೆ ಜನ ಹುಡುಕಿಕೊಂಡು ಬರ್ತಿದ್ದಾರೆ ಅಷ್ಟು ಸಾಕಲ್ವಾ?" ಎಂದು ಪ್ರಶ್ನಿಸಿದ್ದಾರೆ.

Take a Poll

ನಮ್ಮ 'ಸು ಫ್ರಮ್ ಸೋ' ಸಿನಿಮಾ ಕೇರಳದಲ್ಲಿ 6 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈಗ ಅಲ್ಲಿನವರು ಬೇರೆ ಭಾಷೆ ನಮಗೆ ಬೇಡ, ಕನ್ನಡ ಸಿನಿಮಾ ಇಲ್ಲಿ ಯಾಕೆ ಹಾಕಬೇಕು ಎಂದಿದ್ದರೆ ನಮ್ಮ ಸಿನಿಮಾ ಅಲ್ಲಿ ಯಶಸ್ವಿಯಾಗಿ ಪ್ರರ್ದಶನ ಕಾಣಲು, ಅಲ್ಲಿನ ಪ್ರೇಕ್ಷಕರ ಪ್ರೀತಿ ಗಳಿಸಲು ಸಾಧ್ಯವಾಗುತ್ತಿತ್ತಾ? ಎಂದು ರಾಜ್ ಬಿ ಶೆಟ್ಟಿ ಕೇಳುತ್ತಾರೆ. ಅದೇ ರೀತಿ ನಮ್ಮ ರಾಜ್ಯದಲ್ಲಿ 'ಕೂಲಿ' ಸಿನಿಮಾವನ್ನು ಪೈಪೋಟಿ ಎಂದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

ಅಂದಹಾಗೆ ಜೆಪಿ ತುಮ್ಮಿನಾಡ್ ನಿರ್ದೇಶನದ 'ಸು ಫ್ರಮ್ ಸೋ' ಸಿನಿಮಾ ಅಂದಾಜು 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನುವ ಲೆಕ್ಕಾಚಾರ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮಂಗಳೂರಿನ ಪ್ರೀಮಿಯರ್ ಶೋಗಳಿಂದಲೇ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಬಳಿಕ ಸಿನಿಮಾ ಅದ್ಭುತವಾಗಿದೆ ಎನ್ನುವ ಮಾತುಗಳು ಕೇಳಿಬರಲು ಆರಂಭವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಕ್ರಿಯೇಟ್ ಆಯಿತು.

ಆರಂಭದಲ್ಲಿ ಕಡಿಮೆ ಶೋಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಬಳಿಕ ನೋಡ ನೋಡುತ್ತಲೇ ಶೋಗಳು, ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಂಡು ಸಾಗಿತ್ತು. ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣಲು ಆರಂಭವಾಯಿತು. ಕ್ರೇಜ್ ಹೇಗಿತ್ತು ಅಂದ್ರೆ ಸಿನಿಮಾ ತೆರೆಕಂಡ 2 ದಿನದ ಬಳಿಕ ಬೆಳಗ್ಗೆ 6 ಗಂಟೆಗೆ ಕೆಲವೆಡೆ ಶೋಗಳು ನಿಗದಿಯಾಗಿತು. ಎಲ್ಲವೂ ಹೌಸ್‌ಫುಲ್ ಆಗಿತ್ತು. ಬುಕ್‌ಮೈ ಶೋನಲ್ಲಿ ಲಕ್ಷ ಲಕ್ಷ ಟಿಕೆಟ್ ಮಾರಾಟವಾಗಿತ್ತು. ದರ್ಶನ್ ನಟನೆಯ 'ಕಾಟೇರ', ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರದ ದಾಖಲೆಗಳನ್ನು ಈ ಕಾಮಿಡಿ ಸಿನಿಮಾ ಮುರಿದಿದೆ.

More from Filmibeat

English summary
Raj b Shetty opens up on Rajinikanth Coolie clash with Su from so
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X