'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಬಿಟ್ಟ ಮುನಿರತ್ನ 'ಕುರುಕ್ಷೇತ್ರ

ಸ್ಯಾಂಡಲ್ ವುಡ್ ಚಿತ್ರಪ್ರಿಯರು ಕಾತುರದಿಂದ ಕಾಯುತ್ತಿರುವ ಪೌರಾಣಿಕ ಸಿನಿಮಾ 'ಕುರುಕ್ಷೇತ್ರ' ರಿಲೀಸ್ ಡೇಟ್ ನ ಗೊಂದಲ ಇನ್ನು ಬಗೆಹರಿದಹಾಗೆ ಕಾಣುತ್ತಿಲ್ಲ. 'ಕುರುಕ್ಷೇತ್ರ' ಇಂದು ರಿಲೀಸ್ ಆಗುತ್ತೆ ನಾಳೆ ರಿಲೀಸ್ ಆಗುತ್ತೆ ಅಂತ ಹೇಳಿ ಚಿತ್ರಾಭಿಮಾನಿಗಳ ತಾಳ್ಮೆ ಪರೀಕ್ಷೆ ಮಾಡುತ್ತಿರುವ ಚಿತ್ರತಂಡ ಈಗ ಮತ್ತೊಂದು ಹೊಸ ರಿಲೀಸ್ ಡೇಟ್ ಅನ್ನು ಬಹಿರಂಗ ಪಡಿಸಿದೆ.

ಈ ಮೊದಲು ಆಗಸ್ಟ್ 9 ವರಮಹಾಲಕ್ಷ್ಮಿಗೆ ತೆರೆಗೆ ಬರುವುದಾಗಿ ಹೇಳಿದ್ದ ಚಿತ್ರತಂಡ ಆ ನಂತರ ಮತ್ತೆ ದಿಢೀರನೆ ರಿಲೀಸ್ ಡೇಟ್ ಅನ್ನು ಒಂದು ವಾರಕ್ಕು ಮುಂಚೆ ಅಂದ್ರೆ ಆಗಸ್ಟ್ 2ಕ್ಕೆ ರಿಲೀಸ್ ಮಾಡುವುದಾಗಿ ಬಹಿರಂಗ ಪಡಿಸಿತ್ತು. ಆದ್ರೀಗ ಮತ್ತೆ ಕುರುಕ್ಷೇತ್ರ ಆಗಸ್ಟ್ 9ಕ್ಕೆ ರಿಲೀಸ್ ಆಗಲಿದೆ ಎಂದು ಹೇಳುತ್ತಿದೆ ಚಿತ್ರತಂಡ.

ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಂಪೇಗೌಡನ ಜೊತೆ ಇನ್ನೊಂದು ನಿರೀಕ್ಷೆಯ ಚಿತ್ರ ಎಂಟ್ರಿ

ದೊಡ್ಡ ಸಿನಿಮಾಗಳ ಕಣ್ಣಾಮುಚ್ಚಾಲೆಯಿಂದ ಸಣ್ಣ ಸಿನಿಮಾಗಳ ಪಾಡು ಹೇಳತೀರದಾಗಿದೆ. ದೊಡ್ಡ ಸಿನಿಮಾಗಳು ರಿಲೀಸ್ ಡೇಟ್ ಫಿಕ್ಸ್ ಮಾಡಿದ ಕಾರಣ ಗ್ಯಾಪಲ್ಲಿ ಸಣ್ಣ ಸಣ್ಣ ಸಿನಿಮಾಗಳು ರಿಲೀಸ್ ಡೇಟ್ ಫಿಕ್ಸ್ ಮಾಡಿಕೊಂಡಿದ್ದವು. ಆದ್ರೀಗ 'ಕುರುಕ್ಷೇತ್ರ' ಮತ್ತೆ ಮುಂದಕ್ಕೆ ಹೋದ ಕಾರಣ ಆಗಸ್ಟ್ 9ಕ್ಕೆ ರಿಲೀಸ್ ಆಗಬೇಕಿದ್ದ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

ಆಗಸ್ಟ್ 15ಕ್ಕೆ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ'

ಆಗಸ್ಟ್ 15ಕ್ಕೆ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ'

ರಾಜ್ ಬಿ ಶೆಟ್ಟಿ ಮತ್ತು ಕವಿತಾ ಗೌಡ ಅಭಿನಯದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಸಿನಿಮಾ ಮುಂದಿನ ತಿಂಗಳು ಆಗಸ್ಟ್ 9ಕ್ಕೆ ರಿಲೀಸ್ ಬರುವುದಾಗಿ ಪ್ಲಾನ್ ಮಾಡಿಕೊಂಡು ರಿಲೀಸ್ ಡೇಟನ್ನು ಅನೌನ್ಸ್ ಮಾಡಿತ್ತು. 'ಕುರುಕ್ಷೇತ್ರ' ಸಿನಿಮಾ ಆಗಸ್ಟ್ 2ಕ್ಕೆ ತೆರೆಗೆ ಬರುವುದಾಗಿ ಹೇಳದ ಕಾರಣ ಗ್ಯಾಪಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿತ್ತು 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ'. ಆದ್ರೀಗ 'ಕುರುಕ್ಷೇತ್ರ' ಆಗಸ್ಟ್ 9ಕ್ಕೆ ಮುಂದಕ್ಕೆ ಹೋದ ಕಾರಣ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಆಗಸ್ಟ್ 15ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.

ಸುಜಯ್ ಶಾಸ್ತ್ರಿ ನಿರ್ದೇಶನದ ಚಿತ್ರ

ಸುಜಯ್ ಶಾಸ್ತ್ರಿ ನಿರ್ದೇಶನದ ಚಿತ್ರ

'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಇದಾಗಿದ್ದು ಚಿತ್ರದಲ್ಲಿ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ನಟ ರಾಜ್ ಬಿ ಶೆಟ್ಟಿ ಮತ್ತು ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ಕವಿತಾ ಗೌಡ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಕುತೂಹಲ ಮೂಡಿಸಿರುವ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' 'ಕುರುಕ್ಷೇತ್ರ' ರಿಲೀಸ್ ಗೊಂದಲದಿಂದ ಅತಂತ್ರವಾಗಿದೆ.

ಆಗಸ್ಟ್ 9ಕ್ಕೆ 'ಕೆಂಪೇಗೌಡ-2'

ಆಗಸ್ಟ್ 9ಕ್ಕೆ 'ಕೆಂಪೇಗೌಡ-2'

ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದ ದಿನ ಕೋಮಲ್ ಅಭಿನಯದ 'ಕೆಂಪೇಗೌಡ-'2 ಸಿನಿಮಾ ರಿಲೀಸ್ ಡೇಟನ್ನು ಅನೌನ್ಸ್ ಮಾಡಿತ್ತು. ಅನೇಕ ವರ್ಷಗಳ ಬಳಿಕ ಕೋಮಲ್ ನಾಯಕನಾಗಿ ತೆರೆ ಬರಲು ಸಿದ್ಧರಾಗಿದ್ದರು. ಆದ್ರೀಗ 'ಕುರುಕ್ಷೇತ್ರ' ಎಂಟ್ರಿ ಇಂದ ಆಗಸ್ಟ್-9 ಕ್ಕೆ 'ಕೆಂಪೇಗೌಡ-2' ರಿಲೀಸ್ ಆಗುತ್ತಾ ಎನ್ನುವ ಅನುಮಾನ ಕಾಡುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಹೇಳಿಕೊಂಡಿಲ್ಲ.

ಪರಭಾಷೆಯಲ್ಲಿ 'ಕುರುಕ್ಷೇತ್ರ' ಪ್ರಚಾರ

ಪರಭಾಷೆಯಲ್ಲಿ 'ಕುರುಕ್ಷೇತ್ರ' ಪ್ರಚಾರ

ಕುರುಕ್ಷೇತ್ರ ಸಿನಿಮಾ ಸದ್ಯ ಪರಭಾಷೆಯಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇತ್ತೀಚಿಗಷ್ಟೆ ತೆಲುಗಿನಲ್ಲಿ ಟ್ರೈಲರ್ ರಿಲೀಸ್ ಮಾಡಿರುವ ಚಿತ್ರತಂಡ ಈಗ ತಮಿಳು, ಮಲಯಾಳಂ ಮತ್ತು ಹಿಂದಿಯ ಟ್ರೈಲರ್ ಅನ್ನು ರಿಲೀಸ್ ಮಾಡಬೇಕಿದೆ. ಇನ್ನು ಪ್ರಮೋಷನ್ ಕಾರ್ಯಗಳು ಬಾಗಿ ಇರುವ ಕಾರಣ ಆಗಸ್ಟ್ 2ರಿಂದ ಆಗಸ್ಟ್ 9ಕ್ಕೆ ರಿಲೀಸ್ ಡೇಟ್ ಮುಂದಕ್ಕೆ ಹಾಕಿದೆ. ಆದ್ರೆ ಆಗಸ್ಟ್ 9ರಿಂದ ಮತ್ತೆ ಆಗಸ್ಟ್ 15ಕ್ಕೆ ಜಂಪ್ ಆಗದಿದ್ರೆ ಸಾಕಪ್ಪ ಎನ್ನುವುದು ಸಣ್ಣ ಸಿನಿಮಾಗಳ ಬೇಡಿಕೆಯಾಗಿದೆ.

More from Filmibeat

English summary
Kannada actor Raj B Shetty starrer Gubbi Mele Brahmastra film release date postponed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X