»   » 'ಮೊಟ್ಟೆ' ಖ್ಯಾತಿಯ ರಾಜ್ ಬಿ ಶೆಟ್ಟಿ ಎರಡನೇ ಸಿನಿಮಾ ಶುರುವಾಯ್ತು

'ಮೊಟ್ಟೆ' ಖ್ಯಾತಿಯ ರಾಜ್ ಬಿ ಶೆಟ್ಟಿ ಎರಡನೇ ಸಿನಿಮಾ ಶುರುವಾಯ್ತು

Posted By:
Subscribe to Filmibeat Kannada

'ಒಂದು ಮೊಟ್ಟೆಯ ಕಥೆ' ಸಿನಿಮಾ ನೋಡಿ ಎಲ್ಲರೂ 'ಏನ್ ಸಿನಿಮಾ ಮಾರಾಯಾ ಇದು ನಿಜಕ್ಕೂ ಸೂಪರ್..' ಎಂದು ಹಾಡಿ ಹೊಗಳಿದ್ದರು. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೊಸ ರುಚಿ ಮಾಡಿ ಬಡಿಸಿದ್ದ ರಾಜ್ ಬಿ ಶೆಟ್ಟಿ ಇದೀಗ ಎರಡನೇ ಸಿನಿಮಾಗೆ ಕೈ ಹಾಕಿದ್ದಾರೆ.

ವಿಭಿನ್ನ ಸಿನಿಮಾವನ್ನು ಮಾಡುವ ಪ್ರಯತ್ನದಲ್ಲಿರುವ ರಾಜ್ ಬಿ ಶೆಟ್ಟಿ ತಮ್ಮ ಮುಂದಿನ ಸಿನಿಮಾದಲ್ಲಿಯೂ ಒಂದು ವಿಭಿನ್ನ ಪಾತ್ರವನ್ನು ಮಾಡುತ್ತಿದ್ದಾರೆ. ಮೊದಲ ಸಿನಿಮಾದ ದೊಡ್ಡ ಯಶಸ್ಸಿನ ನಂತರ ಈಗ ಎರಡನೇ ಚಿತ್ರಕ್ಕೆ ಚಾಲನೆ ನೀಡುವುದಕ್ಕೆ ಅವರು ಸಜ್ಜಾಗಿದ್ದಾರೆ. ಮುಂದೆ ಓದಿ...

ಕ್ಯಾಬ್ ಡ್ರೈವರ್

ಮೊದಲ ಸಿನಿಮಾದಲ್ಲಿ ಬೋಳು ತಲೆಯ ವ್ಯಕ್ತಿಯಾಗಿ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಚಿಂದಿ ಉಡಾಯಿಸಿದ್ದ ರಾಜ್ ಬಿ.ಶೆಟ್ಟಿ ತಮ್ಮ ಎರಡನೇ ಚಿತ್ರದಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಟನೆ ಅಷ್ಟೆ

'ಒಂದು ಮೊಟ್ಟೆಯ ಕಥೆ' ಚಿತ್ರದಲ್ಲಿ ನಟನೆ ಮತ್ತು ನಿರ್ದೇಶನ ಎರಡನ್ನು ಮಾಡಿದ್ದ ರಾಜ್ ಇಲ್ಲಿ ಬರಿ ನಟನಾಗಿದ್ದಾರೆ. ಹೇಮಂತ್ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಹಾಫ್ ಸೆಂಚುರಿ ಬಾರಿಸಿದ 'ಒಂದು ಮೊಟ್ಟೆಯ ಕಥೆ' ಸಿನಿಮಾ

ಇನ್ನು ಟೈಟಲ್ ಇಟ್ಟಿಲ್ಲ

ರಾಜ್ ಬಿ.ಶೆಟ್ಟಿ ಅವರ ಎರಡನೇ ಸಿನಿಮಾ ಇಂದು ಸೆಟ್ಟೇರಲಿದ್ದು, ಚಿತ್ರದ ಟೈಟಲ್ ಇನ್ನು ಫೈನಲ್ ಆಗಿಲ್ಲ.

ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ 'ಒಂದು ಮೊಟ್ಟೆಯ ಕಥೆ' ಚಿತ್ರ

ವಿಭಿನ್ನ ಪಾತ್ರಗಳು

ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರವನ್ನು ಮಾಡುವ ನಿರ್ಧಾರ ಮಾಡಿರುವ ರಾಜ್ ಬಿ ಶೆಟ್ಟಿ ''ನಾನೊಬ್ಬ ಸ್ಟಾರ್ ನಟನಾಗಲು ಇಲ್ಲಿಗೆ ಬಂದಿಲ್ಲ. ಹಾಗಾಗಿ ನನ್ನನ್ನು ಆಕರ್ಷಿಸುವ ಪಾತ್ರಗಳನ್ನು ತೆಗೆದುಕೊಳ್ಳಲು ನಾನು ಸ್ವತಂತ್ರನಾಗಿದ್ದೇನೆ'' ಎಂದು ಹೇಳಿಕೊಂಡಿದ್ದಾರೆ.

English summary
'Ondu motteya kathe' fame actor and director Raj B Shetty will play cab driver role in his second movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada