For Quick Alerts
  ALLOW NOTIFICATIONS  
  For Daily Alerts

  'ಮಫ್ತಿ' ನಂತರ ರಾಜ್.ಬಿ.ಶೆಟ್ಟಿ ಚಿತ್ರಕ್ಕೆ ಕ್ಯಾಮರಾ ಹಿಡಿದ ನವೀನ್

  By Naveen
  |

  ಶಿವರಾಜ್ ಕುಮಾರ್ ಅಭಿನಯದ 'ಮಫ್ತಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಗೆಲುವಿಗೆ ಕಾರಣವಾದ ಬಹುಮುಖ್ಯ ಅಂಶಗಳಲ್ಲಿ ಸಿನಿಮಾಟೋಗ್ರಾಫಿ ಕೂಡ ಒಂದಾಗಿತ್ತು. ನವೀನ್ ಕುಮಾರ್ ಮಾಡಿದ ಕೆಲಸವನ್ನು ಸಿನಿಮಾ ನೋಡಿದ ಮಂದಿ ಕೊಂಡಾಡಿದರು. ಈ ಚಿತ್ರದಿಂದ ಅವರಿಗೆ ದೊಡ್ಡ ಹೆಸರು ಬಂತು.

  ಇನ್ನು 'ಮಫ್ತಿ' ನಂತರ ನವೀನ್ ಈಗ ಮತ್ತೊಂದು ವಿಭಿನ್ನ ಸಿನಿಮಾಗೆ ಕ್ಯಾಮರಾ ಹಿಡಿದಿದ್ದಾರೆ. 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ರಾಜ್ ಬಿ. ಶೆಟ್ಟಿ ಈ ಸಿನಿಮಾದ ನಾಯಕನಾಗಿದ್ದಾರೆ. 'ಅಮ್ಮಚ್ಚಿಯೆಂಬ ನೆನಪು' ಎಂಬ ಹೆಸರನ್ನು ಈ ಚಿತ್ರಕ್ಕೆ ಇಡಲಾಗಿದೆ. ಇದೊಂದು ಸದಭಿರುಚಿಯ ಸಿನಿಮಾವಾಗಿದೆಯಂತೆ. ಅಂದಹಾಗೆ, ಸದ್ಯ 'ಅಮ್ಮಚ್ಚಿಯೆಂಬ ನೆನಪು' ಸಿನಿಮಾದ ಒಂದು ಪೋಸ್ಟರ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನವೀನ್ ಕುಮಾರ್ ಮೋಡಿ ಈ ಚಿತ್ರದಲ್ಲಿಯೂ ಮುಂದುವರೆದಿದೆ. ಫಸ್ಟ್ ಲುಕ್ ಪೋಸ್ಟರ್ ತುಂಬ ಫ್ರೆಶ್ ಆದ ಫೀಲ್ ನೀಡುತ್ತಿದೆ.

  ಅಂದಹಾಗೆ, ವೈದೇಹಿ ಅವರ 'ಅಕ್ಕು' ನಾಟಕವನ್ನು ಇಟ್ಟುಕೊಂಡು 'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಮಾಡಲಾಗಿದೆ. ಈ ಸಿನಿಮಾದ ಮೂಲಕ ಚಂಪಾ ಶೆಟ್ಟಿ ನಿರ್ದೇಶಕಿ ಆಗಿದ್ದಾರೆ. ಈ ಹಿಂದೆ ಇವರು ಅನೇಕ ನಾಟಗಳನ್ನು ನಿರ್ದೇಶನ ಮಾಡಿದ್ದರು. ನಾಟಕದ ಅಪಾರ ಅನುಭವದ ನಂತರ ಈಗ ಸಿನಿಮಾವನ್ನು ಮಾಡಲು ಇವರು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

  English summary
  Raj B Shetty's new kannada movie Aammacchiyemba Nenapu first look poster released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X