For Quick Alerts
  ALLOW NOTIFICATIONS  
  For Daily Alerts

  ವಿದೇಶಿ ನೆಲದಲ್ಲಿ ನಡೆಯಲಿದೆ ರಾಜ್ ಕಪ್; ಯಾರು ಯಾರು ಆಡಲಿದ್ದಾರೆ, ಟೂರ್ನಿ ಯಾವಾಗ? ಇಲ್ಲಿದೆ ಮಾಹಿತಿ

  |

  ಐದನೇ ಆವೃತ್ತಿಯ ರಾಜ್ ಕಪ್ ಟೂರ್ನಿ ಇದೇ ತಿಂಗಳ 24ರಂದು ಯುಎಇಯ ಶಾರ್ಜಾದಲ್ಲಿರುವ ಶಾರ್ಜಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ವರ್ಷ ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಈ ಬಾರಿಯ ಟೂರ್ನಿಯನ್ನು ಆಯೋಜನೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ರಾಜ್ ಕಪ್ ವಿದೇಶಿ ನೆಲದಲ್ಲಿ ಆಯೋಜನೆಯಾಗಿದೆ.

  ಕರ್ನಾಟಕ ಚಲನಚಿತ್ರ ನೃತ್ಯಗಾರರ ಹಾಗೂ ನೃತ್ಯ ಸಂಯೋಜಕರ ಸಂಘ ಈ ಟೂರ್ನಿಯನ್ನು ಆಯೋಜಿಸುತ್ತಿದ್ದು, ಕರ್ನಾಟಕ ರಾಜ್ಯ ಪ್ರವಾಸ ಇಲಾಖೆ ಹಾಗೂ ಸಮೃದ್ಧಿ ಗ್ರೂಪ್ಸ್ ಈ ಟೂರ್ನಿಯನ್ನು ಸಮರ್ಪಿಸುತ್ತಿವೆ. ಟೂರ್ನಿಯಲ್ಲಿ ಎಂಟು ತಂಡಗಳು ಇರಲಿದ್ದು, ನಟರುಗಳಾದ ಎಕ್ಸ್ ಕ್ಯೂಸ್ ಮಿ ಸುನಿಲ್, ಸತೀಶ್ ನೀನಾಸಂ, ಡಾಲಿ ಧನಂಜಯ್, ಶರಣ್, ದಿಗಂತ್, ಡಾರ್ಲಿಂಗ್ ಕೃಷ್ಣ ಹಾಗೂ ಸೌರವ್ ಲೋಕಿ ತಂಡಗಳ ನಾಯಕತ್ವವನ್ನು ನಿರ್ವಹಿಸಲಿದ್ದಾರೆ.

  ಇವರುಗಳ ಜತೆಗೆ ನಟಿ ರಾಗಿಣಿ ದ್ವಿವೇದಿ, ನಟ ಮಂಜು ಪಾವಗಡ, ಗಾಯಕ ನವೀನ್ ಸಜ್ಜು, ನಿರ್ದೇಶಕರಾದ ತರುಣ್ ಸುಧೀರ್, ನಂದ ಕಿಶೋರ್, ನಟ ನಾಗೇಂದ್ರ ಅರಸ್, ನಿರ್ದೇಶಕ ಚೇತನ್ ಕುಮಾರ್ ಹಾಗೂ ನಟ ರವಿಶಂಕರ್ ಗೌಡ ಕೂಡ ಟೂರ್ನಿಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.

  ಇನ್ನು ಈ ಪಂದ್ಯಗಳ ಟಿಕೆಟ್ ಮುಂಗಡ ಬುಕಿಂಗ್ ಅನ್ನು 'ಪ್ಲಾಟಿನಮ್ ಲಿಸ್ಟ್' ವೆಬ್ ಸೈಟ್ ನಲ್ಲಿ ಮಾಡಬಹುದಾಗಿದ್ದು, ಈಗಾಗಲೇ ಮುಂಗಡ ಬುಕಿಂಗ್ ತೆರೆದಿದೆ. ಇನ್ನು ಟಿಕೆಟ್ ದರಗಳು 7.02 ಅಮೆರಿಕನ್ ಡಾಲರ್‌ನಿಂದ ಆರಂಭಗೊಳ್ಳಲಿದೆ.

  English summary
  Raj Cup season 5 in the memory of Puneeth Rajkumar to starts from September 24 in Sharjah international cricket stadium. Read on
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X