For Quick Alerts
  ALLOW NOTIFICATIONS  
  For Daily Alerts

  ಬಹುಕಾಲದ ಗೆಳತಿ ಜೊತೆ ಎಂಗೇಜ್ ಆದ ಖಳನಟ ರಾಜ್ ದೀಪಕ್ ಶೆಟ್ಟಿ

  |

  ಸ್ಯಾಂಡಲ್ ವುಡ್ ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಕೊರಾನಾ ವೈರಸ್ ಹಾವಳಿಯ ನಡುವೆಯೂ ಅನೇಕ ನಟ-ನಟಿಯರು, ತಂತ್ರಜ್ಞರು ಹಸೆಮಣೆ ಏರಿದ್ದಾರೆ. ಅದ್ದೂರಿಯಾಗಿ ಸಂಭ್ರಮಕ್ಕೆ ಬ್ರೇಕ್ ಹಾಕಿ ಸರಳವಾಗಿ ಮದುವೆಯಾಗುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ನಟಿ ಮಯೂರಿ ಹಸೆಮಣೆ ಏರಿದ್ದಾರೆ.

  ನಾಚಿಕೆ ಇಲ್ಲದೇ ಬೆಡ್ ರೂಮ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಸಮಂತಾ | Samantha | Filmibeat Kannada

  ಈಗ ಸ್ಯಾಂಡಲ್ ವುಡ್ ಖಳನಟ ರಾಜ್ ದೀಪಿಕ್ ಶೆಟ್ಟಿ ಬಹುಕಾಲದ ಗೆಳತಿ ಸೋನಿಯಾ ರಾಡ್ರಿಗಸ್ ಜೊತೆ ಎಂಗೇಜ್ ಆಗಿದ್ದಾರೆ. ದೀಪಕ್ ಮದುವೆ ಮೇ 17ರಂದು ನಿಶ್ಚಯವಾಗಿತ್ತು. ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಮದುವೆ ಮುಂದೂಡಿದ್ದ ಜೋಡಿ ಈಗ ಜೂನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  ಮಂಗಳೂರಿನಲ್ಲಿ ನಿಶ್ಚಿತಾರ್ಥ ಸಮಾರಂಭ ನೆರವೇರಿದ್ದು, ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿ ಶುಭಹಾರೈಸಿದ್ದಾರೆ. ರಾಜ್ ದೀಪಕ್ ಮತ್ತು ಸೋನಿಯಾ ಇಬ್ಬರು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಪ್ರೀತಿಯ ವಿಚಾರವನ್ನು ಮನೆಯವರ ಬಳಿ ಪ್ರಸ್ತಾಪಿಸಿ ಕುಟುಂಬದ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  ಅಂದ್ಹಾಗೆ ರಾಜ್ ದೀಪಕ್, ಕನ್ನಡದಲ್ಲಿ ಭರ್ಜರಿ, ಭರಾಟೆ, ಪಂಚತಂತ್ರ, ಬಜಾರ್ ಸೇರಿದ್ದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದೀಪಕ್ ಕನ್ನಡದಲ್ಲಿ ಕೋಟಿಗೊಬ್ಬ-3 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಅಲ್ಲು ಅರ್ಜುನ್ ಅಭಿನಯದ ಪುಷ್ಪ, ವಿರಾಟ ಪರ್ವಂ, ಸೇರಿದ್ದಂತೆ ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ ಮದುವೆ ದಿನಾಂಕ ಇನ್ನೂಅಧಿಕೃತವಾಗಿಲ್ಲ.

  English summary
  Sandalwood Actor Raj Deepak Shetty got Engaged with his sweetheart Sonia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X