ಕೊರೊನಾ ಕಾರಣಕ್ಕೆ ಮದುವೆ ಮುಂದೂಡಿದ ಖಡಕ್ ಲುಕ್‌ನ ಖಳನಟ
ಕೊರೊನಾ ಲಾಕ್‌ಡೌನ್ ಬೇಗನೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸರ್ಕಾರ, ಇನ್ನೇನು ನಿಯಮ ಸಡಿಲಿಸಬಹುದು ಎಂದು ಕೊಳ್ಳುತ್ತಿದ್ದಂತೆ, ಮತ್ತೇನಾದರೂ ಅವಾಂತರ ಆಗಿ ಲಾಕ್‌ಡೌನ್ ಇನ್ನಷ್ಟು ಕಠಿಣವಾಗುತ್ತಿದೆ.
ಶುಭ ಸಮಾರಂಭವಿರಲಿ, ಮತ್ತೊಂದಿರಲಿ ಸರ್ಕಾರದ ಆದೇಶವನ್ನು ಗೌರವಿಸಲೇ ಬೇಕು, ಕೆಲವರ ಸಂತಸಕ್ಕೆ ಕೊರೊನಾ ಜಾಗೃತಿಯನ್ನು ಕಡೆಗಣಿಸುವುದು ತರವಲ್ಲ. ಇದೇ ಕಾರಣಕ್ಕೆ ಕನ್ನಡದ ಪ್ರತಿಭಾವಂತ ಖಳನಟರಲ್ಲೊಬ್ಬರೆಂದು ಗುರುತಿಸಲಾಗುವ ರಾಜ್ ದೀಪಕ್ ಶೆಟ್ಟಿ ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.
ರಾಜ್ ದೀಪಕ್ ಶೆಟ್ಟಿ ಅವರ ವಿವಾಹವು ಮೇ 17 ಕ್ಕೆ ನಿಗದಿಯಾಗಿತ್ತು, ಆದರೆ ಕೊರೊನಾ ಲಾಕ್‌ಡೌನ್ ಮುಂದುವರೆದ ಕಾರಣದಿಂದಾಗಿ ಶೆಟ್ಟಿ ಅವರು ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.

ಮೇ 17ಕ್ಕೆ ನಿಗದಿಯಾಗಿದ್ದ ಮದುವೆ
ರಾಜ್ ದೀಪಕ್ ಶೆಟ್ಟಿ ದಕ್ಷಿಣ ಭಾರತದ ಹೆಸರಾಂತ ಖಳನಟರಲ್ಲಿ ಒಬ್ಬರು, ಅವರ ವಿವಾಹವು ಸೋನಿಯಾ ರಾಡ್ರಿಗೋಸ್ ಅವರೊಟ್ಟಿಗೆ ಮೇ 17 ಕ್ಕೆ ನಿಗದಿಯಾಗಿತ್ತು, ಆದರೆ ಕೊರೊನಾ ಕಾರಣದಿಂದಾಗಿ ಮದುವೆಯನ್ನು ಮುಂದೂಡಿದ್ದಾರೆ.

ಖ್ಯಾತ ಖಳನಟ ಕೈಹಿಡಿಯುವ ಸುಂದರಿ ಯಾರು?
ರಾಜ್ ದೀಪಕ್ ಶೆಟ್ಟಿ ಅವರು ಕೈಹಿಡಿಯಲಿರುವ ಸೋನಿಯಾ ರಾಡ್ರಿಗಸ್ ಅವರು ಇವೆಂಟ್ ಆರ್ಗನೈಸರ್ ಆಗಿದ್ದು, ಮಂಗಳೂರು ಫ್ಯಾಷನ್ ವೀಕ್‌ನ ಮಾಲಕಿ ಆಗಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ಮದುವೆ
ಅಕ್ಟೋಬರ್ ತಿಂಗಳಲ್ಲಿ ವಿವಾಹ ಸಮಾರಂಭ ಇಟ್ಟುಕೊಳ್ಳುವ ಯೋಚನೆ ಮಾಡಿದ್ದು, ಅಕ್ಟೋಬರ್ 18 ರಂದು ಅವರ ಹುಟ್ಟುಹಬ್ಬದ ದಿನವೇ ಗೃಹಸ್ಥಾಶ್ರಮಕ್ಕೆ ಕಾಲಿಡುವ ಚಿಂತನೆಯಲ್ಲಿದ್ದಾರೆ.

ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದಾರೆ ರಾಜ್ ದೀಪಕ್ ಶೆಟ್ಟಿ
ಸಿನಿಮಾ ಚಿತ್ರೀಕರಣ ಬಂದ್ ಆಗಿರುವ ಕಾರಣ ಮಂಗಳೂರಿನ ಸ್ವಗೃಹದಲ್ಲಿ ಕುಟುಂಬದೊಂದಿಗೆ ಅವರು ಕಾಲಕಳೆಯುತ್ತಿದ್ದಾರೆ. ತಮ್ಮ ಕೈಲಾದ ಮಟ್ಟಿಗೆ ಸ್ಥಳೀಯವಾಗಿ ಸೇವೆ ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದಾಗಿ ಹೇಳಿದ್ದಾರೆ.

ಅಲ್ಲು ಅರ್ಜುನ್ ಸಿನಿಮಾದಲ್ಲಿ ಪ್ರಮುಖ ವಿಲನ್
ಅಲ್ಲು ಅರ್ಜುನ್ ಅಭಿನಯದ 'ಪುಷ್ಪ', ವೆಂಕಟೇಶ್ ನಟನೆಯ ಅಸುರನ್ ರೀಮೇಕ್ 'ನಾರಪ್ಪ', ರಾಣಾ ದಗ್ಗುಬಾಟಿ ಅವರೊಟ್ಟಿಗೆ ನಟಿಸಿರುವ 'ವಿರಾಟಪರ್ವಂ' ಸೇರಿ ಇನ್ನೂ ಕೆಲವು ಸಿನಿಮಾಗಳಲ್ಲಿ ರಾಜ್ ದೀಪಕ್ ಶೆಟ್ಟಿ ನಟಿಸುತ್ತಿದ್ದಾರೆ. ಕನ್ನಡದ ರಣಂ, ಭರಾಟೆ, ಕೋಟಿಗೊಬ್ಬ 3, ರವಿಚಂದ್ರ, ಗಡಿಯಾರ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.


Click it and Unblock the Notifications











