ಶಿವಮೊಗ್ಗದಲ್ಲಿ ಅಣ್ಣಾವ್ರ ಮೊಮ್ಮಗನ ಮದುವೆ ಸಂಭ್ರಮ
ಚಿತ್ರರಂಗದ ದೊಡ್ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಡಾ ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಹಿರಿಯ ಪುತ್ರಿ ಲಕ್ಷ್ಮೀ ಅವರ ಮಗನ ಮದುವೆಯಲ್ಲಿ ಅಣ್ಣಾವ್ರ ಕುಟುಂಬ ಬ್ಯುಸಿ ಆಗಿದೆ. ಲಕ್ಷ್ಮಿ ಹಾಗೂ ಗೋವಿಂದರಾಜು' ರ ಪುತ್ರ 'ಶಾನ್' ರ ಮದುವೆ ನವೆಂಬರ್ ತಿಂಗಳಲ್ಲಿ ನಿಶ್ಚಯವಾಗಿತ್ತು. ಅದರಂತೆ ಮಾರ್ಚ್ 26 ರಂದು 'ಶಾನ್' (ಷಣ್ಮುಖ) ರ ಮದುವೆ ಶಿವಮೊಗ್ಗದಲ್ಲಿ ನಡೆಯಲಿದೆ.
ಸಾಗರ ನಗರದ ವಕೀಲರಾದ ಬರೂರು ನಾಗರಾಜ್ ರವರ ಮಗಳಾದ 'ಸಿಂಧೂ' ಅವರನ್ನ 'ಶಾನ್' ವಿವಾಹವಾಗುತ್ತಿದ್ದಾರೆ. ಸಿಂಧೂ ಸಾಗರ ಮೂಲದವರು ಆದ್ದರಿಂದ ಮದುವೆ ಸಮಾರಂಭ ಶಿವಮೊಗ್ಗದ ಸರ್ಜಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ.

ಶಾನ್ ಮತ್ತು ಸಿಂಧೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಮದುವೆಗೆ ಬನ್ನಿ ಎಂದು ಎಲ್ಲರನ್ನೂ ಆಹ್ವಾನ ಮಾಡುತ್ತಿದ್ದಾರೆ. ಶಾನ್ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮೀ ಅವರ ಹಿರಿಯ ಪುತ್ರ.

ಅಣ್ಣಾವ್ರ ಇಡೀ ಕುಟುಂಬ ಮದುವೆ ಸಮಾರಂಭದಲ್ಲಿ ಭಾಗಿ ಆಗಲಿದ್ದು. ಈಗಾಗಲೇ ಶಿವರಾಜ್ ಕುಮಾರ್ 'ಕವಚ' ಚಿತ್ರೀಕರಣಕ್ಕಾಗಿ ಶಿವಮೊಗ್ಗದಲ್ಲೇ ಉಳಿದುಕೊಂಡಿದ್ದು ರಾಜ್ ಕುಟುಂಬಸ್ಥರು ಹಾಗೂ ಸ್ನೇಹಿತರು ಮದುವೆ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











