ಕಿಚ್ಚನ ರಾಜಕೀಯ ಭವಿಷ್ಯ ಹೇಳಿದ ರಾಜಗುರು
Recommended Video

ರಾಜ್ಯದ ಚುನಾವಣೆ ಸಮೀಪಿಸುತ್ತಿದೆ. ಸಿನಿಮಾರಂಗದಿಂದ ಯಾರೆಲ್ಲಾ ರಾಜಕೀಯ ಅಖಾಡಕ್ಕೆ ಇಳಿಯುತ್ತಾರೆ ಎನ್ನುವ ಪ್ರಶ್ನೆಗಳು ಶುರುವಾಗುತ್ತಿದೆ. ಸ್ಯಾಂಡಲ್ ವುಡ್ ನಿಂದ ಸಾಕಷ್ಟು ಸ್ಟಾರ್ ಗಳು ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಗಳು ಹೆಚ್ಚಾಗುತ್ತಿವೆ.
ಕಳೆದ ಭಾರಿ ಚುನಾವಣೆಯಲ್ಲಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಶಿವರಾಜ್ ಕುಮಾರ್ ಹೀಗೆ ಸಾಕಷ್ಟು ಕಲಾವಿದರು ಅನೇಕ ಪಕ್ಷಗಳ ಪರವಾಗಿ ಪ್ರಚಾರ ಮಾಡಿದ್ದರು. ಒಬ್ಬರೇ ಎರಡು ಮೂರು ಪಕ್ಷಗಳಿಗೂ ಪ್ರಚಾರ ಮಾಡಿದುಂಟು.
ಈ ಬಾರಿ ಯಾವ ಸ್ಟಾರ್ ಯಾವ ಪಕ್ಷಕ್ಕೆ ಸೇರುತ್ತಾರೆ? ಸ್ಟಾರ್ ನಟರು ರಾಜಕೀಯ ಸೇರಿದರೆ ಅವರಿಂದ ಆಗುವ ಲಾಭವೇನು? ಇಂತಹ ಪ್ರಶ್ನೆಗಳ ಮಧ್ಯೆ ಕಿಚ್ಚ ಸುದೀಪ್ ಮಾತ್ರ ರಾಜಕೀಯಕ್ಕೆ ಲಕ್ಕಿ ಅನ್ನೋದು ಖಚಿತವಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ಭವಿಷ್ಯ ನುಡಿದಿದ್ದಾರೆ. ಸುದೀಪ್ ರಾಜಕೀಯ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಕಿಚ್ಚ ರಾಜಕೀಯಕ್ಕೆ ಬಂದರೆ ಅದೃಷ್ಠ
ಕನ್ನಡ ಸಿನಿಮಾರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಜಕೀಯ ಅಂಗಳಕ್ಕೆ ಬಂದರೆ ಅದೃಷ್ಠ ಅಂತೆ. ಇದು ಸಾಮಾನ್ಯ ಜನರ ಮಾತಲ್ಲ. ರಾಜಕೀಯ ಗಣ್ಯರ ಬಗ್ಗೆ ಭವಿಷ್ಯ ಹೇಳುವ ರಾಜಗುರು ದ್ವಾರಕನಾಥ್ ಈ ಮಾತನ್ನ ಹೇಳಿದ್ದಾರೆ.

ದುಪ್ಪಟ್ಟಾಗುತ್ತೆ ಪಕ್ಷದ ಗೆಲುವು
ಖಾಸಗಿ ಸುದ್ದಿ ವಾಹಿನಿಯಲ್ಲಿ ರಾಜಕೀಯ ಪಕ್ಷಕ್ಕೆ ಸಿನಿಮಾ ಕಲಾವಿದರು ಪ್ರವೇಶ ಮಾಡಿದರೆ ಅವರ ಭವಿಷ್ಯ ಹೇಗಿರುತ್ತೆ ಅನ್ನುವುದ ಬಗ್ಗೆ ರಾಜಗುರು ಮಾತನಾಡಿದ್ದಾರೆ. ಸುದೀಪ್ ಯಾವುದೇ ಪಕ್ಷಕ್ಕೆ ಬಂದರೆ ಅಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.

ಕಿಚ್ಚನಿಂದ ಸಿಗಲಿದೆ ಯಶಸ್ಸು
ಸದ್ಯ ಸುದೀಪ್ ಅವರನ್ನ ಕುಮಾರಸ್ವಾಮಿ ಭೇಟಿ ಮಾಡಿದ್ದು ಈ ಬಾರಿ 'ಜೆ ಡಿ ಎಸ್' ಪಕ್ಷದ ಪರವಾಗಿ ಸುದೀಪ್ ಪ್ರಚಾರ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ. ಕಿಚ್ಚ 'ಜೆಡಿಎಸ್' ಪಕ್ಷಕ್ಕೆ ಸಾಥ್ ನೀಡಿದರೆ ಯಶಸ್ಸು ದುಪ್ಪಟ್ಟು ಆಗಲಿದೆ ಅಂತೆ.

ಕಿಚ್ಚ ರಾಜಕೀಯಕ್ಕೆ ಬರುವುದು ಬೇಡ
ಸುದೀಪ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಇದನ್ನ ವಿರೋಧಿಸಿದ್ದರು. ಕಿಚ್ಚ ಯಾವುದೇ ಪಕ್ಷ ಸೇರಬಾರದು ಎಂದು ಮನವಿಯನ್ನು ಮಾಡಿದ್ದರು.


Click it and Unblock the Notifications











