ರಾಜಾಹುಲಿ ಹರ್ಷ ನೀಲಿ ಚಿತ್ರ ಮಾಡ್ತೀಯಾ ಎಂದು ಕೇಳಿದ, ಇದನ್ನೇ ಅವನ ಹೆಂಡ್ತಿಗೆ ಕೇಳಿದ್ರೆ?; ತನಿಷಾ ಕಣ್ಣೀರು!

ಸದ್ಯ ಸ್ಯಾಂಡಲ್‌ವುಡ್ ಅಂಗಳದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಟ್ರೆಂಡಿಂಗ್‌ನಲ್ಲಿರುವ ವಿವಾದವೆಂದರೆ ಅದು ನಟಿ ತನಿಷಾ ಕುಪ್ಪಂಡ ಹಾಗೂ ಯುಟ್ಯೂಬರ್ ನಡುವಿನ ಜಗಳ. ಹೌದು, ಇದೇ ಶುಕ್ರವಾರ ( ಏಪ್ರಿಲ್ 7 ) ಕನ್ನಡ ಚಿತ್ರ ಪೆಂಟಗನ್ ಎಂಬ ಚಿತ್ರ ಬಿಡುಗಡೆಯಾಗುತ್ತಿದ್ದು ಈ ಚಿತ್ರದಲ್ಲಿ ನಾಯಕಿಯಾಗಿ ನಟಿ ತನಿಷಾ ಕುಪ್ಪಂಡ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಐದು ನಿರ್ದೇಶಕರು ನಿರ್ದೇಶಿಸಿರುವ ಐದು ಕಥೆಯ ಪೈಕಿ ಒಂದು ಕಥೆಯಲ್ಲಿ ತನಿಷಾ ನಟಿಸಿದ್ದು, ಸಾಮಾನ್ಯವಾಗಿ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿರುವ ಕಾರಣ ನಟಿ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೀಗಾಗಿ ಸದ್ಯ ಚಾಲ್ತಿಯಲ್ಲಿರುವ ಯುಟ್ಯೂಬ್ ಸಂದರ್ಶನದಲ್ಲಿ ನಟಿ ತನಿಷಾ ಕುಪ್ಪಂಡ ಭಾಗವಹಿಸಿದ್ದು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇನ್ನು ಈ ಚಿತ್ರದ ಒಂದು ಹಾಡಿನಲ್ಲಿ ನಟಿ ತನಿಷಾ ಕುಪ್ಪಂಡ ಬ್ಯಾಕ್‌ಲೆಸ್ ಪೋಸ್ ಕೊಟ್ಟು ನಟಿಸಿದ್ದು, ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದಾರೆ. ಚಿತ್ರದ ಕಥೆಗೆ ಅಗತ್ಯವಿದ್ದಾಗ ನಟಿಯರು ಈ ರೀತಿ ಕಾಣಿಸಿಕೊಳ್ಳುವುದು ಸಹಜ. ಆದರೆ ಇದರ ಮೇಲೆ ಯುಟ್ಯೂಬರ್ ಒಬ್ಬ ತನಿಷಾ ಕುಪ್ಪಂಡಗೆ ಅಸಹ್ಯಕರವಾದಂತಹ ಪ್ರಶ್ನೆಯನ್ನು ಕೇಳಿದ್ದ.

Rajahuli fame Harsha asked me about acting in blue films says Tanisha Kuppanda

ಈ ವಿಚಾರ ಸಿಕ್ಕಾಪಟ್ಟೆ ದೊಡ್ಡ ವಿವಾದವಾಗಿತ್ತು. ನಟಿ ತನಿಷಾ ಆತನನ್ನು ಆ ಕ್ಷಣವೇ ತರಾಟೆಗೆ ತೆಗೆದುಕೊಂಡಿದ್ದರು ಹಾಗೂ ತನಿಷಾ ಜತೆ ಸಂದರ್ಶನದಲ್ಲಿ ಭಾಗವಹಿಸಿದ್ದ ಚಿತ್ರದ ಇತರೆ ಸದಸ್ಯರೂ ಸಹ ಆತನಿಗೆ ಚಳಿ ಬಿಡಿಸಿದ್ರು. ಈ ವಿವಾದವಾದ ಬಳಿಕ ಸದ್ಯ ತನಿಷಾ ಕುಪ್ಪಂಡ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದು, ಇಲ್ಲಿ ಕನ್ನಡ ಚಿತ್ರರಂಗದ ನಟ ಸಹ ತನ್ನನ್ನು ನೀಲಿ ಚಿತ್ರದಲ್ಲಿ ನಟಿಸ್ತೀಯಾ ಎಂದು ಕೇಳಿದ್ದ ವಿಚಾರವನ್ನು ತೆರೆದಿಟ್ಟಿದ್ದಾರೆ.

"ಇನ್ನೊಂದು ವಿಷಯ ಹೇಳೋದಿಕ್ಕೆ ಮರೆತೆ. ಹೆಸರು ತಗೊಳ್ಳೊದಿಲ್ಲ. ಈ ಘಟನೆ ಆದ ಬಳಿಕ ಕೆಲವು ಹಿತೈಶಿಗಳು ಕರೆ ಮಾಡಿ ಏನೂ ಬೇಜಾರು ಮಾಡಿಕೊಳ್ಳಬೇಡಿ ಎಂದು ಹೇಳಿದ್ರು. ಇನ್ನು ಕೆಲವರು ಹೊಡಿಬೇಕಿತ್ತು ಅವನಿಗೆ, ಅದಕ್ಕೇ ಅವನು ಲಾಯಕ್ಕು ಅಂತ ಹೇಳಿದ್ರು. ಇನ್ನೂ ಕೆಲವರು ಇದ್ದಾರೆ ಸರ್, ಹೇಳಿಕೊಳ್ಳುವುದಕ್ಕೆ ಕಲಾವಿದರು. ವಿಚಿತ್ರವಾಗಿ ಮೆಸೇಜ್ ಮಾಡ್ತಾರೆ. ಇದು ಯಾವ ರೀತಿ ಲೀಡ್ ಆಗುತ್ತೆ ಅಂದ್ರೆ, ಒಬ್ಬ ರೇಪ್ ಮಾಡಿದವನಿಗೆ ಶಿಕ್ಷೆ ಕೊಡಲಿಲ್ಲ ಅಂದ್ರೆ, ಇನ್ನೊಬ್ಬ ತಯಾರಾಗಿ ನಿಲ್ತಾನೆ ಅನ್ನೊ ರೀತಿ ಇದೊಂದು ಉಹಾರಣೆ ಸರ್. ಆತ ಖ್ಯಾತ ಕಲಾವಿದನೇ. ನಮ್ಮ ಗುರು ದೇಶಪಾಂಡೆ ಸರ್ ಬ್ಯಾನರ್‌ನಲ್ಲಿ ಕೂಡ ಆತ ಕೆಲಸ ಮಾಡಿದ್ದಾನೆ. ಆ ವ್ಯಕ್ತಿ ನಾನು ಹಾಕಿದ್ದ ಸ್ಟೇಟಸ್‌ಗೆ ರಿಪ್ಲೇ ಮಾಡಿದ್ದಾನೆ. ನ್ಯೂಡ್ ಫಿಲ್ಮ್ಸ್ ಮಾಡ್ತೀಯಾ ಅಂತ ಹೇಳಿ ಸ್ಮೈಲ್ ಇಮೋಜಿ ಹಾಕಿದ್ದಾನೆ. ಆತ ನನ್ನ ಫ್ರೆಂಡ್ ಕೂಡ ಹೌದು. ಆದರೀಗ ಆತನನ್ನು ಫ್ರೆಂಡ್ ಅಂತ ಹೇಳಿಕೊಳ್ಳೋಕೆ ಸಹ ಅಸಹ್ಯವಾಗುತ್ತೆ" ಎಂದು ಹೇಳಿದರು.

Rajahuli fame Harsha asked me about acting in blue films says Tanisha Kuppanda

ಮೊದಲಿಗೆ ಹೆಸರು ತೆಗೆದುಕೊಳ್ಳಲು ಇಷ್ಟವಿಲ್ಲ ಎಂದಿದ್ದ ತನಿಷಾಗೆ ಆತ ಮಾಡಿದ ಮೆಸೇಜ್ ತಿಳಿದ ಕೂಡಲೇ ಆತನ ಹೆಸರೇನು ಹೇಳಿ ಎಂಬ ಒತ್ತಡ ಹೆಚ್ಚಾಯಿತು. ಈ ಸಮಯದಲ್ಲಿ ಸ್ನೇಹಿತನಾಗಿದ್ದವನೇ ಈ ರೀತಿ ಮೆಸೇಜ್ ಮಾಡಿದ್ದನ್ನು ನೆನೆದು ಕಣ್ಣೀರಾಕುತ್ತ ತನಿಷಾ ಬಿಚ್ಚಿಟ್ಟರು. "ಸರ್ ನನಗೆ ನಿಜಕ್ಕೂ ತುಂಬಾ ಬೇಸರವಾಯಿತು. ಏಕೆಂದರೆ ಹೊರಗಿನವರು ಮಾತಾಡಿದ್ರೆ ಕಂಟ್ರೋಲ್ ಮಾಡ್ಕೊಬಹುದು. ನಮ್ಮ ಮನೆಯವರು, ಫ್ರೆಂಡ್ಸ್ ಆದವರು ಮಾತನಾಡಿದ್ರೆ ನಿಜವಾಗಲೂ ನೋವಾಗುತ್ತೆ. ಹರ್ಷ ಅಂತ ಸರ್. ಅವನ್ಯಾರೋ ಪ್ರಜ್ಞೆಯಿಲ್ಲದೇ ಮಾತನಾಡಿದ ಅಂದ್ರೆ ಫ್ರೆಂಡ್ಸ್ ಆದ ಇವರು ಈ ರೀತಿ ಮೆಸೇಜ್ ಮಾಡ್ತಾರೆ. ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಾ ಇದೆ ಎಂಬ ಐಡಿಯಾ ಕೂಡ ಇಲ್ಲದೇ ಸ್ಮೈಲಿ ಎಮೋಜಿ ಹಾಕಿ ಮೆಸೇಜ್ ಕಳಿಸ್ತಾರೆ" ಎಂದು ತನಿಷಾ ಕಣ್ಣೀರು ಹಾಕುತ್ತಲೇ ಹೇಳಿದರು.

ಇನ್ನೂ ಮುಂದುವರಿದ ಮಾತನಾಡಿದ ತನಿಷಾ "ಹೊರಗಿನವರಿಗೆ ನಮ್ಮ ಬಗ್ತೆ ಗೊತ್ತಿರಲ್ಲ, ಅವರು ಮಾತನಾಡಿದ್ರೆ ಸಹಿಸ್ಕೊಬಹುದು. ಆದರೆ ಇವರು ಗೊತ್ತಿರುವವರು, ಅವರೂ ಸಹ ಒಬ್ಬ ಕಲಾವಿದನಾಗಿ ಅವರ ಹೆಂಡತಿಗೆ ಇದೇ ರೀತಿ ಯಾರಾದ್ರೂ ಕೇಳಿದ್ರೆ ಇದೇ ರೀತಿ ನಗ್ತಾರಾ ಸರ್. ಅವರ ಅಕ್ಕನ್ನ ಇದೇ ರೀತಿ ಕೇಳಿದ್ರೆ ನಗ್ತಾರಾ. ನಾನು ಅವರಿಗೆ ನಿಮ್ಮ ಕಾಮನ್ ಸೆನ್ಸ್ ಸತ್ತೋಗಿದೆಯಾ ಅಂತ ವಾಪಸ್ ಕೇಳಿದೆ. ಅದಕ್ಕೆ ಅವರು ಇಲ್ಲ ನಾನು ಆ ರೀತಿ ಕೇಳ್ತಿಲ್ಲ, ಆ ರೀತಿ ಪ್ರಶ್ನೆ ಕೇಳಿದ್ನಲ್ಲಾ ಅಂತ ನಗ್ತೀದ್ದೀನಿ ಎಂದರು. ನೀವು ಸೈಕೋನ, ನನಗೆ ಅರ್ಥವಾಗುತ್ತಿಲ್ವ ನಿಜವಾಗಲೂ ಅರ್ಥವಾಗ್ತಿಲ್ಲ" ಎಂದು ಹೇಳಿಕೊಂಡರು.

More from Filmibeat

English summary
Rajahuli fame Harsha asked me about acting in blue films says Tanisha Kuppanda. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X