ಬ್ಲೂ ಫಿಲಂ ಮಾಡ್ತೀಯ ಅಂತ ಕೇಳ್ದ ಎಂಬ ನಟಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಜಾಹುಲಿ ಹರ್ಷ!

Rajahuli fame Harsha reacts to actress Tanisha Kuppandas blue film allegation controversy

ಪೆಂಟಗನ್ ಚಿತ್ರ ಕಳೆದ ಶುಕ್ರವಾರ ತೆರೆಗೆ ಬಂದಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಚಿತ್ರಕ್ಕೆ ಐವರು ನಿರ್ದೇಶಕರಿದ್ದು, ಈ ಐವರೂ ಸಹ ಐದು ವಿಭಿನ್ನ ಕಥೆಗಳನ್ನು ಚಿತ್ರದಲ್ಲಿ ಪ್ರತ್ಯೇಕವಾಗಿ ಹೇಳಿದ್ದಾರೆ. ಇನ್ನು ಈ ಐವರು ನಿರ್ದೇಶಕರಲ್ಲಿ ಓರ್ವರಾದ ರಾಘು ಶಿವಮೊಗ್ಗ ನಿರ್ದೇಶನದ ಕಥೆಯಲ್ಲಿ ನಾಯಕಿಯಾಗಿ ನಟಿಸಿರುವ ತನಿಷಾ ಕುಪ್ಪಂಡ ಹಾಡೊಂದರಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.

ಇನ್ನು ಚಿತ್ರದ ಪ್ರಚಾರಕ್ಕಾಗಿ ಸಂದರ್ಶನಗಳಲ್ಲಿ ಭಾಗವಹಿಸಿದ್ದ ತನಿಷಾಗೆ ಯುಟ್ಯೂಬರ್ ಓರ್ವ ನೀವು ಬ್ಲೂ ಫಿಲ್ಮ್‌ನಲ್ಲಿ ನಟಿಸ್ತೀರ ಎಂದು ಅಸಭ್ಯ ಪ್ರಶ್ನೆ ಕೇಳಿದ್ದ. ಈ ವಿಚಾರ ಸಿಕ್ಕಾಪಟ್ಟೆ ದೊಡ್ಡ ವಿವಾದವಾಗಿತ್ತು. ನಟಿ ತನಿಷಾ ಆತನನ್ನು ಆ ಕ್ಷಣವೇ ತರಾಟೆಗೆ ತೆಗೆದುಕೊಂಡಿದ್ದರು ಹಾಗೂ ತನಿಷಾ ಜತೆ ಸಂದರ್ಶನದಲ್ಲಿ ಭಾಗವಹಿಸಿದ್ದ ಚಿತ್ರದ ಇತರೆ ಸದಸ್ಯರೂ ಸಹ ಆತನಿಗೆ ಚಳಿ ಬಿಡಿಸಿದ್ರು. ಈ ವಿವಾದವಾದ ಬಳಿಕ ತನಿಷಾ ಕುಪ್ಪಂಡ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಇಲ್ಲಿ ಕನ್ನಡ ಚಿತ್ರರಂಗದ ನಟನೋರ್ವ ಸಹ ತನ್ನನ್ನು ನೀಲಿ ಚಿತ್ರದಲ್ಲಿ ನಟಿಸ್ತೀಯಾ ಎಂದು ಕೇಳಿದ್ದ ವಿಚಾರವನ್ನು ತೆರೆದಿಟ್ಟಿದ್ದರು.

ಹೌದು, ಈ ಘಟನೆ ಆದ ಬಳಿಕ ಕೆಲವು ಹಿತೈಶಿಗಳು ಕರೆ ಮಾಡಿ ಏನೂ ಬೇಜಾರು ಮಾಡಿಕೊಳ್ಳಬೇಡಿ ಎಂದು ಹೇಳಿದ್ರು. ಇನ್ನು ಕೆಲವರು ಹೊಡಿಬೇಕಿತ್ತು ಅವನಿಗೆ, ಅದಕ್ಕೇ ಅವನು ಲಾಯಕ್ಕು ಅಂತ ಹೇಳಿದ್ರು. ಇನ್ನೂ ಕೆಲವರು ಇದ್ದಾರೆ ಸರ್, ಹೇಳಿಕೊಳ್ಳುವುದಕ್ಕೆ ಕಲಾವಿದರು. ವಿಚಿತ್ರವಾಗಿ ಮೆಸೇಜ್ ಮಾಡ್ತಾರೆ ಎಂದು ಕಣ್ಣೀರು ಹಾಕುತ್ತಾ ರಾಜಾಹುಲಿ ಖ್ಯಾತಿಯ ಹರ್ಷ ಸಹ ತನ್ನನ್ನು ಯುಟ್ಯೂಬರ್ ಕೇಳಿದ್ದ ರೀತಿಯೇ ಬ್ಲೂ ಫಿಲ್ಮ್‌ನಲ್ಲಿ ನಟಿಸ್ತೀಯಾ ಎಂದು ಮೆಸೇಜ್ ಮೂಲಕ ಕೇಳಿದ್ದ ಎಂದು ಆರೋಪಿಸಿದರು.

ಹೊರಗಿನವರು ಏನೋ ಹೇಳಲಿ ಆದರೆ ಸ್ನೇಹಿತ ಎನಿಸಿಕೊಂಡವನೇ ಈ ರೀತಿ ಪ್ರಶ್ನೆ ಮಾಡಿದ್ರೆ ತುಂಬಾ ಬೇಸರವಾಗುತ್ತೆ ಎಂದು ತನಿಷಾ ಕುಪ್ಪಂಡ ಕಣ್ಣೀರು ಹಾಕಿದ್ದರು. ಹೀಗೆ ತನ್ನ ವಿರುದ್ಧ ಗಂಭೀರ ಆರೋಪ ಕೇಳಿಬಂದದ್ದರ ಕುರಿತು ಕೆಲ ಯುಟ್ಯೂಬ್ ಚಾನೆಲ್‌ಗಳಿಗೆ ಕರೆ ಮೂಲಕ ಪ್ರತಿಕ್ರಿಯಿಸಿರುವ ಹರ್ಷ ಇದರಲ್ಲಿ ತನ್ನದೇನೂ ತಪ್ಪಿಲ್ಲ ಎಂದು ತಿಳಿಸಿದ್ದಾರೆ.

ನಾನು ಹಾಗೂ ತನಿಷಾ ಅಪರಿಚಿತರೇನಲ್ಲ ಇಬ್ಬರೂ ಸಹ ಸ್ನೇಹಿತರೇ, ಚೆನ್ನಾಗಿಯೇ ಪರಿಚಯ ಎಂದು ಮಾತನ್ನು ಆರಂಭಿಸಿದ ಹರ್ಷ ಸಿಕ್ಕಾಗಲೆಲ್ಲಾ ಅವರು ರೇಗಿಸುತ್ತಾ ಇರುತ್ತಾರೆ, ನಾನೂ ಸಹ ರೇಗಿಸುತ್ತಾ ಇರುತ್ತೇನೆ, ಒಂದು ಸ್ನೇಹ ಬಾಂಧವ್ಯದಿಂದ ಇದ್ದೆವು. ಆ ಒಂದು ಸದರದಿಂದ ನಾನು ಆ ವ್ಯಕ್ತಿ ಪ್ರಶ್ನೆ ಮಾಡಿದ್ದನ್ನು ಹಾಕಿ ಈ ತರಹ ಕೇಳಿದ್ದಾನಲ್ಲ, ಒಂದು ಕಾಮನ್‌ಸೆನ್ಸ್ ಬೇಡ್ವಾ ಎಂದು ಒಂದು ವಾಯ್ಸ್ ಮೆಸೇಜ್ ಅನ್ನು ಸಹ ಮಾಡಿದ್ದೆ. ಇದನ್ನು ನಾನು ನಗ್ತಾ ಕೇಳಿದ್ದೆ. ಸಾಮಾನ್ಯವಾಗಿ ಸ್ನೇಹಿತರು ಸೀರಿಯಸ್ ಆಗಿ ಏಕೆ ಮಾತನಾಡ್ತಾರೆ, ತಮಾಷೆಯಾಗಿ ಮಾತಾಡ್ತಾರೆ, ಆ ಒಂದು ಲೆಕ್ಕದಲ್ಲಿಯೇ ನಾನು ಕೇಳಿದ್ದೆ. ಆದರೆ ತನಿಷಾ ಅವರು ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಇದನ್ನು ದೊಡ್ಡದಾಗಿ ಕಾಣುವಂತೆ ಹೇಳಿದ್ದಾರೆ ಅಷ್ಟೇ, ಮನಸ್ಸಲ್ಲಿ ಒಂದು ಇಟ್ಟುಕೊಂಡು ಆಚೆ ಒಂದು ಇಟ್ಟುಕೊಂಡು ಮಾತನಾಡಿಲ್ಲ ಎಂದು ಹರ್ಷ ತಿಳಿಸಿದ್ದಾರೆ. ಹರ್ಷ ನೀಡಿರುವ ಈ ಪ್ರತಿಕ್ರಿಯೆಗೆ ನಟಿ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

More from Filmibeat

English summary
Rajahuli fame Harsha reacts to actress Tanisha Kuppanda's blue film allegation controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X