ಮಾಡೆಲ್ ಜೊತೆಗೆ ಮದುವೆಯಾದ 'ರಾಜಾಹುಲಿ' ಹರ್ಷ

Recommended Video

Raja Huli Kannada Movie : ಮಾಡೆಲ್ ಜೊತೆಗೆ ಮದುವೆಯಾದ 'ರಾಜಾಹುಲಿ' ನಟ..! | FILMIBEAT KANNADA

ಬಾಲಿವುಡ್ ನಲ್ಲಿ ನಟಿ ದೀಪಿಕಾ ಪಡುಕೋಣೆ ಮದುವೆಯ ಬಳಿಕ ಪ್ರಿಯಾಂಕಾ ಚೋಪ್ರಾ ವಿವಾಹ ಕಾರ್ಯಕ್ರಮ ನಡೆದಿದೆ. ಬಿ ಟೌನ್ ರೀತಿಯಲ್ಲಿ ಈಗ ಕನ್ನಡದಲ್ಲಿಯೂ ಮದುವೆ ಸಂಭ್ರಮ ಜೋರಾಗಿದೆ.

ನಟ ದಿಗಂತ್ ಹಾಗೂ ಐಂದ್ರಿತಾ ರೇ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಡುತ್ತಿದ್ದಾರೆ. ಅದಕ್ಕೆ ಮೊದಲು ಇದೀಗ ನಟ ಹರ್ಷ ಹೊಸ ಬದುಕಿನ ಅಧ್ಯಾಯ ಶುರು ಮಾಡಿದ್ದಾರೆ. 'ರಾಜಾಹುಲಿ' ಖ್ಯಾತಿಯ ಈ ನಟ ಈಗ ಬ್ಯಾಚುಲರ್ ಬದುಕಿಗೆ ಗುಡ್ ಬಾಯ್ ಹೇಳಿದ್ದಾರೆ.

ಸೋಮವಾರ (ಡಿಸೆಂಬರ್ 3) ನಟ ಹರ್ಷ ವಿವಾಹ ಕಾರ್ಯಕ್ರಮ ನಡೆದಿದ್ದು, ಮಾಡೆಲ್ ಜೊತೆಗೆ ಅವರು ಮದುವೆ ಆಗಿದ್ದಾರೆ. ಮುಂದೆ ಓದಿ...

ತಿರುಪತಿಯಲ್ಲಿ ಮದುವೆ

ತಿರುಪತಿಯಲ್ಲಿ ಮದುವೆ

'ರಾಜಾಹುಲಿ' ಸಿನಿಮಾದಲ್ಲಿ ಯಶ್ ಸ್ನೇಹಿತನಾಗಿ ನಟಿಸಿದ್ದ ಹರ್ಷ ಈಗ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ತಿರುಪತಿಯಲ್ಲಿ ಸೋಮವಾರ (ಡಿಸೆಂಬರ್ 3) ಅವರ ಮದುವೆ ನಡೆದಿದೆ. ಐಶ್ವರ್ಯ ಜೊತೆಗೆ ಹರ್ಷವರ್ಧನ್ (ಹರ್ಷ) ನವ ಜೀವನ ಪ್ರಾರಂಭ ಮಾಡಿದ್ದಾರೆ. ಎರಡು ಕುಟುಂಬದವರು ಮತ್ತು ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಾಡೆಲ್ ಐಶ್ವರ್ಯ

ಮಾಡೆಲ್ ಐಶ್ವರ್ಯ

ಹರ್ಷ ಅವರ ಅರ್ಧಾಂಗಿಯ ಹೆಸರು ಐಶ್ವರ್ಯ. ಮೂಲತಃ ಚಿಕ್ಕಮಂಗಳೂರಿನವರಾದ ಐಶ್ವರ್ಯ ಮಾಡೆಲ್ ಆಗಿದ್ದಾರೆ. ಮಧುಮಗಳಾಗಿ ಐಶ್ವರ್ಯ, ಮದುಮಗನಾಗಿ ಹರ್ಷ ಮಿಂಚಿದ್ದಾರೆ. ಇಬ್ಬರ ಜೋಡಿ ಮುದ್ದಾಗಿ ಕಾಣುತ್ತಿದೆ. ಹರ್ಷ ಮದುವೆಯ ಫೋಟೋಗಳು ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿವೆ.

ಡಿಸೆಂಬರ್ 8ಕ್ಕೆ ಆರತಕ್ಷತೆ

ಡಿಸೆಂಬರ್ 8ಕ್ಕೆ ಆರತಕ್ಷತೆ

ತಿರುಪತಿಯಲ್ಲಿ ಮದುವೆ ಇದ್ದ ಕಾರಣ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳ 8ಕ್ಕೆ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಂದಹಾಗೆ, ಹರ್ಷ ನಿಶ್ಚಿತಾರ್ಥ ಮೇ 28 ರಂದು ಜರುಗಿತ್ತು.

ಹರ್ಷ ಸಿನಿಮಾಗಳು

ಹರ್ಷ ಸಿನಿಮಾಗಳು

ಅಂದಹಾಗೆ, ಹರ್ಷ 'ಮೊಗ್ಗಿನ ಮನಸ್ಸು' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 'ಪವರ್ ಸ್ಟಾರ್' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಹರ್ಷ ನಟಿಸಿದ್ದಾರೆ. ನಾಯಕ ನಟನಾಗಿ 'ವರ್ಧನ', 'ರಘುವೀರ್', 'ಗಜಪಡೆ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Rajahuli movie fame actor harsha got married with aishwarya last Monday (December 3rd) in Tirupathi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X