»   » ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಡಲಿದ್ದಾರೆ ಸಂತೋಷ್ ಆನಂದ್ ರಾಮ್

ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಡಲಿದ್ದಾರೆ ಸಂತೋಷ್ ಆನಂದ್ ರಾಮ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಚಾರಿ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ಭರವಸೆಯ ನಿರ್ದೇಶಕ ಸಂತೋಷ್ ಆನಂದ್ ರಾಮ್. ಜನರ ನಡುವೆಯೇ ಇರುವ ಕಥೆಯನ್ನ ವಿಭಿನ್ನವಾಗಿ ಸಿನಿಮಾ ಅಭಿಮಾನಿಗಳಿಗೆ ತಲುಪಿಸೋ ಚಾಣಕ್ಯತೆ ಹೊಂದಿರೋ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಎಂದರೆ ತಪ್ಪಾಗಲ್ಲ.

ಸುಮಾರು ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಾ ಬಂದಿರೋ ಸಂತೋಷ್ ನಿರ್ದೇಶನ ಮಾಡಿದ ಎರಡು ಸಿನಿಮಾಗಳು ಸಿನಿಪ್ರಿಯರ ಮನಸ್ಸು ಮುಟ್ಟಿವೆ.

ಸಂತೋಷ್ - ಸುರಭಿ ಜೋಡಿಗೆ ಶುಭ ಕೋರಿದ ಕಿಚ್ಚ ಸುದೀಪ್

ಸಿಂಪಲ್ ಕತೆಯನ್ನ ಸ್ಪೆಷಲ್ ಆಗಿ ಪ್ರಸೆಂಟ್ ಮಾಡೋ ನಿರ್ದೇಶಕನ ಮುಂದಿನ ಚಿತ್ರ ಯಾವುದು ಅನ್ನೋ ಪ್ರಶ್ನೆ ಹಾಕಲು ಹೊರಟಿದ್ದ ಜನರಿಗೆ ಸಂತೋಷ್ ಸಪ್ರೈಸ್ ಆಗಿ ತಮ್ಮ ಮದುವೆ ಸುದ್ದಿಯನ್ನ ನೀಡಿದ್ದರು. ನಿಶ್ಚಿತಾರ್ಥ ಮುಗಿಸಿ ಮದುವೆ ತಯಾರಿಯಲ್ಲಿರುವ ಸಂತೋಷ್ ಈಗ ತಮ್ಮ ಅಭಿಮಾನಿಗಳಿಗಾಗಿ ಸಿಹಿ ಸುದ್ದಿ ತಂದಿದ್ದಾರೆ. ಹಾಗಾದ್ರೆ 'ರಾಜಕುಮಾರ' ಚಿತ್ರದ ಡೈರೆಕ್ಟರ್ ಕಡೆಯಿಂದ ಸಿಗುತ್ತಿರುವ ಸ್ವೀಟ್ ನ್ಯೂಸ್ ಏನು? ಮುಂದೆ ಓದಿ

ನ್ಯೂ ಇಯರ್ ದಿನ ಹೊಸ ಸಿನಿಮಾ

'ರಾಮಚಾರಿ' ಹಾಗೂ ರಾಜಕುಮಾರ ಚಿತ್ರಗಳ ಸಾರಥಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಸ ವರ್ಷಕ್ಕೆ ತಮ್ಮ ಚಿತ್ರದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ. ಯಾವ ಚಿತ್ರ ಹಾಗೂ ಯಾರು ನಾಯಕ ಅನ್ನೋದನ್ನ ತಿಳಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಮತ್ತೆ ಒಂದಾದ ಜೋಡಿ

'ರಾಜಕುಮಾರ' ಚಿತ್ರವನ್ನ ನಿರ್ಮಾಣ ಮಾಡಿದ್ದ 'ಹೊಂಬಾಳೆ ಸಂಸ್ಥೆ'ಯಲ್ಲಿ ಸಂತೋಷ್ ಮತ್ತೆ ಕೆಲಸ ಮಾಡಲಿದ್ದಾರೆ. ತಮ್ಮ ಮುಂದಿನ ಚಿತ್ರವನ್ನ 'ಹೊಂಬಾಳೆ ಪ್ರೊಡಕ್ಷನ್ಸ್' ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.

2017ರಲ್ಲಿ ಎಂಗೇಜ್ ಆದ ಸ್ಟಾರ್ ಜೋಡಿಗಳು

ಚಿತ್ರದಲ್ಲಿ ಕಾಣಿಸಿಕೊಳ್ಳಲಿರೋ ಜಗ್ಗೇಶ್

ತಮ್ಮ ಮೂರನೇ ಚಿತ್ರದ ಬಗ್ಗೆ ಸಂತೋಷ್ ಆನಂದ್ ರಾಮ್ ಟ್ವಿಟ್ ಮಾಡಿದ್ದಾರೆ. ಇದೇ ಸಮಯದಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಹೆಸರಾಂತ ನಿರ್ಮಾಣದ ಸಂಸ್ಥೆ ಚಿತ್ರದಲ್ಲಿ ಅಭಿನಯಿಸುವುದಾಗಿ ಟ್ವಿಟ್ ಮೂಲಕ ಹೇಳಿಕೊಂಡಿದ್ದಾರೆ. ಹಾಗಾಗಿ ಜಗ್ಗೇಶ್ ಸಂತೋಷ್ ಡೈರೆಕ್ಟ್ ಮಾಡುತ್ತಿರುವ ಸಿನಿಮಾದಲ್ಲಿ ಅಭಿನಯಿಸುತ್ತಾರಾ? ಅನ್ನೋ ಪ್ರಶ್ನೆಗಳು ಕಾಡುತ್ತಿವೆ.

ಸಿನಿಮಾಗಾಗಿ ಕಾದಿರೋ ಅಭಿಮಾನಿಗಳು

ಸಂತೋಷ್ ಆನಂದ್ ರಾಮ್ ಆಡಿಯನ್ಸ್ ಪಲ್ಸ್ ತಿಳಿದುಕೊಂಡಿರೋ ನಿರ್ದೇಶಕ. ಜನರು ನಿರೀಕ್ಷೆ ಮಾಡುವಂತಹ ಸಿನಿಮಾಗಳನ್ನ ನೀಡುತ್ತಾರೆ. ಎರಡು ಹಿಟ್ ಚಿತ್ರಗಳನ್ನ ನೀಡಿರುವುದರಿಂದ ಮೂರನೇ ಸಿನಿಮಾ ಬಗ್ಗೆ ಹೆಚ್ಚು ಕುತೂಹಲ ಹುಟ್ಟುಕೊಂಡಿದೆ.

English summary
Kannada Director of Rajakumara movie fame Santosh Anand Ram informs his next film about the new year .Santosh's third cinema will be produced by Hombale Productions.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X