»   » ಪವರ್ ಸ್ಟಾರ್ ಅಭಿನಯದ ಹೊಸ ಚಿತ್ರಕ್ಕೆ 'ಅಣ್ಣಾವ್ರ' ಹೆಸರು

ಪವರ್ ಸ್ಟಾರ್ ಅಭಿನಯದ ಹೊಸ ಚಿತ್ರಕ್ಕೆ 'ಅಣ್ಣಾವ್ರ' ಹೆಸರು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನ ಒಂದು ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಿತ್ತು. ವಿಜಯ್ ಕಿರಗಂದೂರು ನಿರ್ಮಾಣದಲ್ಲಿ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ನಿರ್ದೇಶಕ ಸಂತೋಷ್ ಆನಂದ್ ರಾಮ್ 'ಪ್ರೊಡಕ್ಷನ್ # 3' ಪೋಸ್ಟರ್ ರಿವೀಲ್ ಮಾಡಿದ್ದರು.

ಅಣ್ಣಾವ್ರ ಜೊತೆ ಪುಟಾಣಿ ಅಪ್ಪು ಇರುವ 'ಪ್ರೊಡಕ್ಷನ್ # 3' ಪೋಸ್ಟರ್ ಎಲ್ಲರ ಗಮನ ಸೆಳೆದಿತ್ತು. ಅಸಲಿಗೆ ಸ್ಟಾರ್ ಗಳ ಹುಟ್ಟುಹಬ್ಬದಂದು ಅನೌನ್ಸ್ ಆಗುವ ಸಿನಿಮಾಗಳ ಪೋಸ್ಟರ್ ಗಳಲ್ಲಿ ಸೆಲೆಬ್ರಿಟಿಗಳ ಫೋಟೋ ಮಾತ್ರ ಇರುವುದು ಸಾಮಾನ್ಯ. ಆದ್ರೆ, 'ಪ್ರೊಡಕ್ಷನ್ # 3' ನಲ್ಲಿ ನಿಮಗೆಲ್ಲರಿಗೂ ಕಾಣುವ ವಿಶೇಷಕ್ಕೆ ಇಂದು ಹೊಸ ಅರ್ಥ ಸಿಕ್ಕಿದೆ.

'Rajakumara' titled for Puneeth Rajkumar and Santhosh Ananddram's next

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸುವ ಚಿತ್ರಕ್ಕೆ 'ರಾಜಕುಮಾರ' ಅನ್ನುವ ಟೈಟಲ್ ಫಿಕ್ಸ್ ಆಗಿದೆ. ಇದನ್ನ ಆಗಲೇ ಬಹಿರಂಗಗೊಳಿಸುವುದು ಬೇಡ ಅಂತ ಫೋಟೋದಲ್ಲೇ ಟೈಟಲ್ ಹೇಳಿದ್ದರು ಪ್ರತಿಭಾವಂತ ನಿರ್ದೇಶಕ ಸಂತೋಷ್. [ರಾಮಾಚಾರಿ ಡೈರೆಕ್ಟರ್ ಪುನೀತ್ ಗೆ ಆಕ್ಷನ್ ಕಟ್]

ಅಷ್ಟಕ್ಕೂ, 'ರಾಜಕುಮಾರ' ಟೈಟಲ್ ನಿರ್ಮಾಪಕ ರಾಮು ಬಳಿ ಇತ್ತು. ಹದಿನೈದು ವರ್ಷಗಳಿಂದ 'ರಾಜಕುಮಾರ' ಶೀರ್ಷಿಕೆಯನ್ನ ಉಳಿಸಿಕೊಂಡಿದ್ದ ರಾಮು, ಈಗ ನಿರ್ಮಾಪಕ ವಿಜಯ್ ಕಿರಗಂದೂರುಗಾಗಿ ಬಿಟ್ಟುಕೊಟ್ಟಿದ್ದಾರೆ.

'Rajakumara' titled for Puneeth Rajkumar and Santhosh Ananddram's next

ಅಪ್ಪುಗಾಗಿ 'ರಾಜಕುಮಾರ' ಹೆಸರಲ್ಲಿ ಸಿನಿಮಾ ಮಾಡುವ ಬಯಕೆ ಹೊಂದಿದ್ದ ನಿರ್ಮಾಪಕ ರಾಮು, ಒಳ್ಳೆ ಕಥೆಯ ಹುಡುಕಾಟದಲ್ಲಿದ್ದರು. ಆದ್ರೆ, ಅಷ್ಟರೊಳಗೆ ಸಂತೋಷ್ ಮಾಡಿರುವ ಕಥೆ ಕೇಳಿ 'ರಾಜಕುಮಾರ' ಹೆಸರು ಸೂಕ್ತ ಅಂತ ಅನಿಸಿದ್ದರಿಂದ ಒಂದು ರೂಪಾಯಿ ಕೂಡ ಪಡೆಯದೆ ಅಪ್ಪು ಮೇಲಿನ ಅಭಿಮಾನಕ್ಕೆ ಟೈಟಲ್ ಕೊಟ್ಟಿದ್ದಾರೆ. [ಪವರ್ ಸ್ಟಾರ್ ಪುನೀತ್ ಅಭಿನಯದ 25ನೇ ಚಿತ್ರ ಯಾವುದು?]

ಈ ಹಿಂದೆ ಇದೇ ಟೈಟಲ್ ಗಾಗಿ ಹಲವಾರು ಬಾರಿ ಅನೇಕ ನಿರ್ಮಾಪಕರು ದುಂಬಾಲು ಬಿದ್ದಿದ್ದರೂ, ರಾಮು ಮಾತ್ರ ಬಗ್ಗಿರಲಿಲ್ಲ. 'ಪವರ್ ***' ಸಿನಿಮಾಗೂ 'ರಾಜಕುಮಾರ' ಟೈಟಲ್ ಇಡುವ ಬಗ್ಗೆ ಮಾತುಕತೆ ನಡೆದಿತ್ತು. ಆದ್ರೆ, ಅಂದು ರಾಮು ನಿರಾಕರಿಸಿದ್ದರು.

'Rajakumara' titled for Puneeth Rajkumar and Santhosh Ananddram's next

ಇದೀಗ ಟೈಟಲ್ ಕೊಡುವ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ರಾಮು NOC ಕೂಡ ನೀಡಿ ಬಂದಿದ್ದಾರೆ. ಆದ್ದರಿಂದ ಅಪ್ಪಾಜಿಯ ಹುಟ್ಟುಹಬ್ಬದಂದು 'ರಾಜಕುಮಾರ' ಟೈಟಲ್ ಲಾಂಚ್ ಮಾಡುವ ಪ್ಲಾನ್ ನಲ್ಲಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್. ಅಂತೂ 'ದೊಡ್ಮನೆ ಹುಡುಗ' ಈಗ 'ರಾಜಕುಮಾರ'ನಾಗಲಿದ್ದಾನೆ. (ಫಿಲ್ಮಿಬೀಟ್ ಕನ್ನಡ)

English summary
After the success of MR And Mrs Ramachari, Director Santhosh Ananddram is gearing up for his directorial next with Power Star Puneeth Rajkumar. The movie is titled as 'Rajakumara'. Producer Ramu, who owned the title from past 15 years, has given NOC to Producer Vijay Kiragandur and Director Santhosh Ananddram.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X