'ಮಹಾಭಾರತ'ದ ಆಸೆ ಬೇಡ: ಕೊನೆ ಸಿನಿಮಾದ ಬಗ್ಗೆ ರಾಜಮೌಳಿ ಅಚ್ಚರಿ.!
Recommended Video

ಬಾಹುಬಲಿ ಚಿತ್ರದ ನಂತರ ಎಸ್ ಎಸ್ ರಾಜಮೌಳಿ ಮುಂದಿನ ಸಿನಿಮಾ ಮಹಾಭಾರತ ಎಂದೇ ಹೇಳಲಾಗ್ತಿತ್ತು. ಬಾಹುಬಲಿ ತಂದುಕೊಟ್ಟ ಯಶಸ್ಸನ್ನ ಮುಂದುವರಿಸುವ ಪ್ರಯತ್ನಕ್ಕೆ ಕೈ ಹಾಕಿರುವ ರಾಜಮೌಳಿ ಅದನ್ನ ಮೀರಿಸುವಂತಹ ಪ್ರಾಜೆಕ್ಟ್ ಗೆ ಚಾಲನೆ ಕೊಡ್ತಿದ್ದಾರೆ ಎಂಬ ಸುದ್ದಿ ಇಡೀ ದೇಶದಲ್ಲೇ ಸಂಚಲನ ಸೃಷ್ಟಿ ಮಾಡಿತು.
ಅತಿ ದೊಡ್ಡ ತಾರಬಳಗ. ಸೌತ್ ಇಂಡಸ್ಟ್ರಿ ಹಾಗೂ ಬಾಲಿವುಡ್ ನ ಖ್ಯಾತ ನಟರ ಜೊತೆ ಸೇರಿ ಮಹಾಭಾರತ ಚಿತ್ರ ಮಾಡಲು ರಾಜಮೌಳಿ ಸಜ್ಜಾಗುತ್ತಿದ್ದಾರೆ ಎಂಬ ಗುಸುಗುಸು ಕೇಳಿಬಂತು. ಇದು ನಿಜ ಇರಬಹುದು ಎಂದು ನಂಬುವರಷ್ಟರಲ್ಲಿ 'ಆರ್ ಆರ್ ಆರ್' ಚಿತ್ರ ತನ್ನ ಮುಂದಿನ ಸಿನಿಮಾ ಎಂದು ಘೋಷಿಸಿಬಿಟ್ಟರು.
ಹಾಗಂದ ಮಾತ್ರಕ್ಕೆ ಮಹಾಭಾರತದ ಆಸೆಯನ್ನ ಅಭಿಮಾನಿಗಳು ಬಿಟ್ಟಿರಲಿಲ್ಲ. ಆದ್ರೀಗ, ರಾಜಮೌಳಿ ತನ್ನ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ್ದು, ಸಿನಿಮಾಪ್ರೇಕ್ಷಕರಿಗೆ ಅಚ್ಚರಿ ನೀಡಿದ್ದಾರೆ. ಇದೇ ವೇಳೆ ತನ್ನ ಕೊನೆಯ ಚಿತ್ರದ ಬಗ್ಗೆಯೂ ಸೂಚನೆ ಕೊಟ್ಟಿದ್ದಾರೆ. ಏನಿದು ರಾಜಮೌಳಿಯ ಹೇಳಿಕೆ? ಮುಂದೆ ಓದಿ.....

ನಾನು ಮಹಾಭಾರತ ಆರಂಭಿಸಲೇ ಇಲ್ಲ
''ಬಾಹುಬಲಿ ನಂತರ ಮಹಾಭಾರತ ಪ್ರಾಜೆಕ್ಟ್ ಆರಂಭವಾಗುತ್ತೆ ಅಂತ ನಾನು ಎಲ್ಲಿಯೂ ಹೇಳಿಲ್ಲ. ಅದು ನನ್ನ ಡ್ರೀಮ್ ಪ್ರಾಜೆಕ್ಟ್ ಎಂದು ಮಾತ್ರ ಹೇಳಿದ್ದೆ'' ಎಂದು ಹೇಳುವ ಮೂಲಕ ಮಹಾಭಾರತದ ಬಗ್ಗೆ ಅಭಿಮಾನಿಗಳು ಇಟ್ಟಿದ್ದ ಆಸೆಯನ್ನ ರಾಜಮೌಳಿ ನಿರಾಸೆ ಮಾಡಿದ್ರು.

ಅದು ನನ್ನ ಕೊನೆಯ ಸಿನಿಮಾ
''ಅಭಿಮಾನಿಗಳು ಫಿಕ್ಸ್ ಆಗಿದ್ದಾರೆ. ಆದ್ರೆ, ನಾನು ಅದರ ಬಗ್ಗೆ ಯೋಚನೆ ಮಾಡಿಲ್ಲ. ಒಂದು ವೇಳೆ ಮಹಾಭಾರತ ಮಾಡಿದ್ರೆ ಅದು ನನ್ನ ಕೊನೆಯ ಚಿತ್ರವಾಗಬಹುದು. ನನ್ನ ಸಿನಿ ಜೀವನದ ಕೊನೆಯ ಪ್ರಾಜೆಕ್ಟ್ ಆಗಬಹುದು'' ಎಂದು ರಾಜಮೌಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆ ಕಡೆ ಆಮೀರ್ ಖಾನ್ ಬೇರೆ ಇದ್ದಾರೆ
ಈ ಕಡೆ ರಾಜಮೌಳಿ ಮಹಾಭಾರತ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ಬಾಲಿವುಡ್ ನಲ್ಲಿ ಅಮೀರ್ ಖಾನ್ ಕೂಡ ಮಹಾಭಾರತ ಕುರಿತು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಐದು ಭಾಗದಲ್ಲಿ ಈ ಸಿನಿಮಾ ಮಾಡ್ಬೇಕು ಎಂಬ ಆಸೆಯನ್ನ ವ್ಯಕ್ತಪಡಿಸಿದ್ದರು. ಆದ್ರೆ, ಇಲ್ಲಿಯವರೆಗೂ ಆ ಚಿತ್ರ ಆರಂಭವಾಗುವ ಲಕ್ಷಣ ಕಾಣ್ತಿಲ್ಲ.

ರಾಜಮೌಳಿ ಮುಂದಿನ ಚಿತ್ರ?
ಸದ್ಯಕ್ಕೆ ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ಜೊತೆ ಆರ್ ಆರ್ ಆರ್ ಸಿನಿಮಾ ಮಾಡ್ತಿರುವ ರಾಜಮೌಳಿ, ಬಹುಶಃ ಮುಂದಿನ ಚಿತ್ರವನ್ನ ಮಹೇಶ್ ಬಾಬು ಜೊತೆ ಮಾಡಬಹುದು. ಬಟ್, ಅಧಿಕೃತವಾಗಿ ಈ ಸುದ್ದಿ ಖಚಿತವಾಗಿಲ್ಲ ಅಂದ್ರೂ ಪ್ರಿನ್ಸ್ ಜೊತೆ ಬಾಹುಬಲಿ ಡೈರೆಕ್ಟರ್ ಕೆಲಸ ಮಾಡುವ ಸಾಧ್ಯತೆ ಇದೆ ಅಂತೆ.


Click it and Unblock the Notifications











