For Quick Alerts
  ALLOW NOTIFICATIONS  
  For Daily Alerts

  Metoo ಅಭಿಯಾನದ ಬಗ್ಗೆ ನಟ ರಜನಿಕಾಂತ್ ಪ್ರತಿಕ್ರಿಯೆ

  |

  ದೇಶಾದ್ಯಂತ ಈಗ ಮೀಟೂ ಅಭಿಯಾನದ ಬಿಸಿ ಹೆಚ್ಚಾಗಿದೆ. ಕನ್ನಡದಲ್ಲಿಯೂ ಇಂದಿನಿಂದ ನಟಿ ಶೃತಿ ಹರಿಹರನ್ ಸಮರ ನಡೆಸಲು ಸಜ್ಜಾಗಿದ್ದಾರೆ. ಎಲ್ಲೆಡೆ ಚರ್ಚೆ ಆಗುತ್ತಿರುವ ಮೀ ಟೂ ಬಗ್ಗೆ ನಟ ರಜನಿಕಾಂತ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.

  ಇಂದು ಚೆನ್ನೈನಲ್ಲಿ ಮಾತನಾಡಿರುವ ಅವರು ''ಮೀಟೂ ಉತ್ತಮ ಅಭಿಯಾನ. ಈ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ, ಇದು ದುರುಪಯೋಗವಾಗದೆ ಸರಿಯಾಗಿ ಉಪಯುಕ್ತವಾಗಬೇಕು'' ಎಂದು ಹೇಳಿದ್ದಾರೆ.

  ಕಾಲಿವುಡ್ ನಲ್ಲಿ ಸಹ ಮೀ ಟೂ ಕೂಗು ಜೋರಾಗಿದೆ. ಗಾಯಕಿ ಚಿನ್ಮಯಿ ಚಿತ್ರಸಾಹಿತಿ ವೈರಮುತ್ತು ಅವರ ಮೇಲೆ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಕೂಡ ರಿಯಾಕ್ಟ್ ಮಾಡಿರುವ ರಜನಿ ''ವೈರಮುತ್ತು ಅವರು ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಕಾನೂನು ಮಾರ್ಗದಲ್ಲೆ ಉತ್ತರ ನೀಡಲಿದ್ದಾರೆ'' ಎಂದು ತಿಳಿಸಿದ್ದಾರೆ.

  ಮೀಟೂ ಈಗ ದೊಡ್ಡ ಚರ್ಚೆ ಆಗುತ್ತಿರುವ ವಿಷಯವಾಗಿದೆ. ಕನ್ನಡದಲ್ಲಿ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಹೋರಾಟಕ್ಕೆ ನಿಂತಿದ್ದಾರೆ.

  English summary
  Super star Rajanikanth spoke about Me Too campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X