'ರಾಜಣ್ಣನ ಮಗ'ನ ಅಬ್ಬರ, ಆರ್ಭಟ ಜೋರು.!

ಪೋಸ್ಟರ್ ಮತ್ತು ಫಸ್ಟ್ ಲುಕ್ ಮೂಲಕ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡಿದ್ದ 'ರಾಜಣ್ಣನ ಮಗ' ಈಗ ರಿಲೀಸ್ ಗೆ ರೆಡಿಯಾಗಿದ್ದಾನೆ. ಡಾ ರಾಜ್ ಅವರ ಹೆಸರಿನ್ನಿಟ್ಟು ಭಾರಿ ಕುತೂಹಲ ಮೂಡಿಸಿರುವ ಈ ಸಿನಿಮಾ, ಅವರ ಹೆಸರಿಗೆ ಹಾಗೂ ಅವರ ಗೌರವಕ್ಕೆ ಯಾವುದೇ ರೀತಿಯ ಧಕ್ಕೆ ತರದೇ ಮುಗಿಸಿದ್ದಾರಂತೆ.

ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ರಾಜಣ್ಣನ ಮಗನಾಗಿ ಹರೀಶ್‌ ಟಿ ಜಲಗೆರೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ಜಸ್ಟ್ ಮದ್ವೇಲಿ' ಎಂಬ ಸಿನಿಮಾ ಮಾಡಿ ಗಮನ ಸೆಳೆದಿದ್ದ ಕೋಲಾರ್ ಸೀನು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲಿಗೆ ಹರೀಶ್ ಮತ್ತು ಕೋಲಾರ್ ಸೀನು ಕಾಂಬಿನೇಷನ್ ಅವರ ಎರಡನೇ ಸಿನಿಮಾ.

ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಈಗ ಪ್ರಚಾರ ಕೆಲಸಕ್ಕೆ ಚಾಲನೆ ನೀಡಿದ್ದು, ಪ್ರಮೋಷನಲ್ ಹಾಡನ್ನ ರಿಲೀಸ್ ರಿಲೀಸ್ ಮಾಡಿ ಪ್ರೇಕ್ಷಕರನ್ನ ಥಿಯೇಟರ್ ನತ್ತ ಸೆಳೆಯುತ್ತಿದ್ದಾರೆ.

Rajannana maga songs released

ಇನ್ನು ಚಿತ್ರದ ಆಡಿಯೋ ಕೂಡ ಬಿಡುಗಡೆಯಾಗಿದ್ದು, ರವಿಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಇನ್ನುಳಿದಂತೆ ಯೂನಿರ್ವಸಲ್ ಹ್ಯಾಟ್ರಿಕ್ ಕಂಬೈನ್ಸ್‌ ಬ್ಯಾನರ್‌ ನಡಿಯಲ್ಲಿ, ಹರೀಶ್‌, ಟಿ, ಜಲಗೆರೆ ಪ್ರೈವೆಟ್ ಲಿಮಿಟೆಡ್‌ ಈ ಸಿನಿಮಾವನ್ನ ನಿರ್ಮಿಸಿದೆ. ಹರೀಶ್‌ಗೆ ಅಕ್ಷತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಸದ್ಯ, ಆಡಿಯೋ ಮತ್ತು ಟೀಸರ್ ಮೂಲಕ ಇಂಡಸ್ಟ್ರಿಯಲ್ಲಿ ಹವಾ ಎಬ್ಬಿಸಿರುವ 'ರಾಜಣ್ಣನ ಮಗ' ಸದ್ಯದಲ್ಲೇ ತೆರೆಕಾಣಲಿದೆ.

More from Filmibeat

English summary
'Just madveli' movie fame kolar seenu directional 'rajannana maga' movie songs has released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X