ಪೊಲೀಸ್ ವಶದಲ್ಲಿ ಹುಚ್ಚ ವೆಂಕಟ್: ಮದುವೆಯಾಗುವಂತೆ ಯುವತಿಯನ್ನು ಪೀಡಿಸಿದ ನಟ

Recommended Video

Huccha Venkat does a huchha venkat today near Rajunkunte | FILMIBEAT KANNADA

ನಟ ಹುಚ್ಚ ವೆಂಕಟ್ ನಿಜವಾಗಿಯೂ ಹುಚ್ಚನ ರೀತಿಯೇ ಆಡುತ್ತಿದ್ದಾನೆ. ಮಡಕೇರಿಯ ಘಟನೆಯ ನಂತರ ಮತ್ತೆ ಬೆಂಗಳೂರಿನಲ್ಲಿ ಇಂದು (ಅಕ್ಟೋಬರ್ 4) ಹುಚ್ಚ ವೆಂಕಟ್ ರಂಪಾಟ ಮಾಡಿದ್ದಾನೆ.

ಬೆಂಗಳೂರು ಮತ್ತು ಹಿಂದುಪುರ ರಾಜಾನುಕುಂಟೆ ಸಮೀಪದ ಹರದೇಶನಹಳ್ಳಿ ಟೋಲ್ ಬಳಿ ಹುಚ್ಚ ವೆಂಕಟ್ ರಾದ್ಧಾಂತ ಮಾಡಿಕೊಂಡಿದ್ದಾನೆ. ''ನನ್ನನ್ನು ಮದುವೆಯಾಗು'' ಎಂದು ಯುವತಿಯನ್ನು ಒತ್ತಾಯ ಮಾಡಿದ್ದಾನೆ. ರಸ್ತೆ ಬದಿ ಕಾರು ನಿಲ್ಲಿಸಿ, ಯುವತಿ ಜೊತೆ ಈ ರೀತಿ ರಂಪಾಟ ಮಾಡಿದ್ದಾನೆ.

ತನ್ನ ಪಾಡಿಗೆ ತಾನು ಬಸ್ ನಿಲ್ದಾಣ ಬಳಿ‌ ನಿಂತಿದ್ದ ಯುವತಿಯನ್ನು ಹುಚ್ಚ ವೆಂಕೆಟ್ ಮಾತನಾಡಿಸಿದ. ನಂತರ ಆಕೆಗೆ ಮದುವೆ ಆಗುವಂತೆ ಒತ್ತಾಯ ಮಾಡಿದ. ಇದರಿಂದ ಭಯಗೊಂಡ ಯುವತಿ, ಏನು ತೊಚದೆ, ಹುಚ್ಚ ವೆಂಕಟ್ ಜೊತೆಗೆ ಹೆದರುತ್ತಲೆ ಮಾತನಾಡಿದ್ದಾಳೆ.

Rajanukunte Police Arrested Huccha Venkat

ಮದುವೆಯಾಗಲು ಯುವತಿ ನಿರಾಕರಿಸಿದ್ದಕ್ಕೆ ಹುಚ್ಚ ವೆಂಕಟ್ ತನ್ನ ಕಾರ್ ಒಡೆದು ಹಾಕಿ, ಕಿಟಕಿ ಗಾಜನ್ನು ಪುಡಿ ಮಾಡಿದ್ದಾನೆ. ಬಳಿಕ ಬಸ್ ಹತ್ತಲು ಮುಂದಾದ ಯುವತಿಯನ್ನ ಅಡ್ಡಗಟ್ಟಿದ ಹುಚ್ಚ ವೆಂಕಟ್, "ನೀನು ನನ್ನ ಮದುವೆಯಾಗಲೇ ಬೇಕು.." ಅಂತ ಯುವತಿ ಜೊತೆ ಕಿತ್ತಾಟ ಮಾಡಿದ್ದಾನೆ. ಹುಚ್ಚ ವೆಂಕಟ್ ಗಲಾಟೆ ಮಾಡುತ್ತಿರುವ ಬಗ್ಗೆ ತಮ್ಮ ಪೋಷಕರಿಗೆ ಯುವತಿ ಮಾಹಿತಿ ನೀಡಿದ್ದಾಳೆ. ಘಟನೆ ಬಳಿಕ ಹುಚ್ಚ‌ ವೆಂಕಟ್ ಅವಸ್ಥೆ ಕಂಡು ಆತನಿಗೆ ಸ್ಥಳಿಯರು ಹಣ ನೀಡಿದ್ದಾರೆ.

ಅಂದಹಾಗೆ, ಪ್ರಕರಣ ದಾಖಲಿಸಿಕೊಂಡ ರಾಜಾನಕುಂಟೆ ಪೊಲೀಸರು ಹುಚ್ಚ ವೆಂಕಟ್ ನನ್ನು ವಶಕ್ಕೆ ಪಡೆದಿದ್ದಾರೆ.

More from Filmibeat

English summary
Rajanukunte police arrested actor Huccha Venkat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X