ಕಣ್ಣೀರಿಟ್ಟ 'ಕುರುಕ್ಷೇತ್ರ'ದ ನಿರ್ಮಾಪಕ ಮುನಿರತ್ನ

By Pavithra

Recommended Video

ಕಣ್ಣೀರಿಟ್ಟ ಕುರುಕ್ಷೇತ್ರ ಮುನಿರತ್ನ | Filmibeat Kannada

ಕನ್ನಡ ಸಿನಿಮಾ ನಿರ್ಮಾಪಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರ ಮೇಲೆ ಆರೋಪಗಳ ಮೇಲೆ ಆರೋಪ ಕೇಳಿ ಬರುತ್ತಿವೆ. ಕನ್ನಡ ಸಿನಿಮಾರಂಗದಲ್ಲಿ ಶ್ರೀಮಂತ ನಿರ್ಮಾಪಕ ಅಂತಾನೆ ಹೆಸರು ಮಾಡಿಕೊಂಡಿರುವ ಮುನಿರತ್ನ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ.

ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದಂತೆಯೇ ರಾಜಕೀಯ ಕ್ಷೇತ್ರದಲ್ಲಿಯೂ ಮುನಿರತ್ನ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಆರ್ ಆರ್ ನಗರ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನ ಮಾಡಿದ್ದಾರೆ ಎನ್ನುವುದು ಕೆಲವರ ಮಾತಾದರೆ ಇನ್ನು ಕೆಲವರು ಮುನಿರತ್ನ ಎನ್ನುವ ಹೆಸರು ಕೇಳಿದರೆ ಕೋಪಗೊಳ್ಳುತ್ತಾರೆ.

ಇವೆಲ್ಲವುದರ ಮಧ್ಯೆ ಮುನಿರತ್ನ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಇದೇ ಕಾರಣದಿಂದ ಆರ್ ಆರ್ ನಗರದ ಚುನಾವಣೆಯನ್ನೂ ಮುಂದೂಡಲಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಧೈರ್ಯವಂತ, ಎಂಥದ್ದೇ ಸಮಸ್ಯೆ ಬಂದರೂ ಬಗೆಹರಿಯಿಸಿ ನಿಭಾಯಿಸುವಂತಹ ನಿರ್ಮಾಪಕ ಎಂದು ಹೆಸರು ಮಾಡಿದ್ದ ಮುನಿರತ್ನ ಕಣ್ಣೀರಿಟ್ಟಿದ್ದಾರೆ. ಮುನಿರತ್ನ ಕಣ್ಣೀರಿಟ್ಟಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಕಣ್ಣೀರಿಟ್ಟ ಮುನಿರತ್ನ

ಕಣ್ಣೀರಿಟ್ಟ ಮುನಿರತ್ನ

ನಿರ್ಮಾಪಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಕಣ್ಣೀರಿಟ್ಟಿದ್ದಾರೆ. ಮುನಿರತ್ನ ಕಣ್ಣೀರುಡುತ್ತಾರೆ ಎಂದರೆ ನಿಜಕ್ಕೂ ಎಲ್ಲರಿಗೂ ಆಶ್ಚರ್ಯ ಆಗುತ್ತೆ. ಯಾರೂ ಕೂಡ ನಂಬುವುದಿಲ್ಲ. ಆದರೆ ಇದು ಸತ್ಯ. ಇತ್ತೀಚಿಗಷ್ಟೆ ಸುವರ್ಣ ನ್ಯೂಸ್ ನಲ್ಲಿ ನಡೆದ ಸಂದರ್ಶನದಲ್ಲಿ ಮುನಿರತ್ನ ಭಾವುಕರಾಗಿದ್ದಾರೆ.

ರಾಜಕೀಯ ಷಡ್ಯಂತ್ರ ತಂದ ನೋವು

ರಾಜಕೀಯ ಷಡ್ಯಂತ್ರ ತಂದ ನೋವು

ಮುನಿರತ್ನ ನಕಲಿ ವೋಟರ್ ಐಡಿಗಳನ್ನ ಮಾಡಿಸುತ್ತಿದ್ದಾರೆ. ಆರ್ ಆರ್ ನಗರ ಕ್ಷೇತ್ರದ ಜನರಿಗೆ ನೀರಿನ ಕ್ಯಾನ್ ಹಾಗೂ ಕುಕ್ಕರ್ ವಿತರಣೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬೇಸರಗೊಂಡಿದ್ದಾರೆ.

ವೈಯುಕ್ತಿಕ ಲಾಭಕ್ಕೆ ತೇಜೋವಧೆ

ವೈಯುಕ್ತಿಕ ಲಾಭಕ್ಕೆ ತೇಜೋವಧೆ

ಸಂದರ್ಶನದಲ್ಲಿ ಮಾತನಾಡಿದ ನಿರ್ಮಾಪಕ ಮುನಿರತ್ನ ವೈಯುಕ್ತಿಕ ಲಾಭಕ್ಕೆ ನನ್ನ ತೇಜೋವಧೆ ಮಾಡಬೇಡಿ. ರಾಜರಾಜೇಶ್ವರಿ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾನು ನನ್ನ ಕ್ಷೇತ್ರಕ್ಕೆ ಅಭಿವೃದ್ದಿ ಮಾಡಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.

ಫೇಸ್ ಬುಕ್ ನಲ್ಲಿ ಅಭಿಯಾನ

ಫೇಸ್ ಬುಕ್ ನಲ್ಲಿ ಅಭಿಯಾನ

ಮುನಿರತ್ನ ಅವರ ಮೇಲೆ ಇಷ್ಟೆಲ್ಲಾ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಮುನಿರತ್ನ ಅವರ ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಮುನಿರತ್ನ ಅವರ ಕ್ಷೇತ್ರದಲ್ಲಾಗಿರುವ ಉತ್ತಮ ಕೆಲಸಗಳ ವಿಡಿಯೋ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

More from Filmibeat

English summary
Rajarajeshwari Nagar Congress Candidate, Kannada Film Producer Muniratna becomes emotional during an interview with Suvarna News Channel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X