ಮುನಿರತ್ನಗೂ ದರ್ಶನ್ ಮೊದಲನೇ ಸಿನಿಮಾಗೂ ಒಂದು ನಂಟಿಗೆ ಏನದು? ವೇದಿಕೆ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದೇಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ರಾಜ್ಯದ ಮೂಲೆ ಮೂಲೆಯಲ್ಲಿ ದರ್ಶನ್‌ಗೆ ದೊಡ್ಡ ಮಟ್ಟಕ್ಕೆ ಕ್ರೇಜ್ ಇದೆ. ದರ್ಶನ್ ಯಾವುದಾದರೂ ಕಾರ್ಯಕ್ರಮಕ್ಕೆ ಬರುತ್ತಾರೆಂದರೆ, ಅಲ್ಲಿ ಸಾಗರದಂತೆ ಅಭಿಮಾನಿಗಳು ಸೇರುತ್ತಾರೆ. ಕಿಕ್ಕಿರಿದು ಸೇರಿದ ಅಭಿಮಾನಿಗಳನ್ನು ನೋಡುವುದಕ್ಕೆ ಅಂದ.
ಇತ್ತೀಚೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮಹಾಶಿವರಾತ್ರಿ ಹಬ್ಬದ ಆಚರಣೆ ನಡೆದಿತ್ತು. ಈ ವೇಳೆ ಚಾಲೆಂಜಿಂಗ್‌ಸ್ಟಾರ್ ದರ್ಶನ್,ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವಥ್ ನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆ ಕ್ಷೇತ್ರದ ಶಾಸಕ ಮುನಿರತ್ನ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ದರ್ಶನ್ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು.

ಎರಡು ದಿನಗಳ ಹಿಂದೆ ನಡೆದ ಈ ಸಮಾರಂಭದಲ್ಲಿ ದರ್ಶನ್ ಫ್ಯಾನ್ಸ್ ವಿರುದ್ಧ ಶಾಸಕ ಮುನಿರತ್ನ ಗರಂ ಆಗಿದ್ದರು. ಮೈಕ್ ಹಿಡಿದು ಮಾತಾಡುವುದಕ್ಕೆ ಬಂದಿದ್ದ ಮುನಿರತ್ನಗೆ ಮಾತಾಡಲು ಬಿಟ್ಟಿರಲಿಲ್ಲ. ಹೀಗಾಗಿ ವೇದಿಕೆ ಮೇಲೆ ಸಿಟ್ಟಿಗೆದ್ದಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಮುನಿರತ್ನ ಯಾಕೆ ದರ್ಶನ್ ಫ್ಯಾನ್ಸ್ ಮೇಲೆ ಸಿಟ್ಟಿಗೆದ್ದಿದ್ದರು? ದರ್ಶನ್ ಹಾಗೂ ಮುನಿರತ್ನ ಇಬ್ಬರು ಇರುವ 23 ವರ್ಷದ ನಂಟೇನು? ತಿಳಿಯುವುದಕ್ಕೆ ಮುಂದೆ ಓದಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಡುವಿನ ಬಾಂಧವ್ಯಕ್ಕೆ 23 ವರ್ಷ. ಮೊದಲ ಸಿನಿಮಾ 'ಮೆಜೆಸ್ಟಿಕ್'ನಿಂದ ಇಲ್ಲಿಯವರೆಗೂ ಆ ಬಾಂಧವ್ಯ ಹಾಗೇ ಮುಂದುವರೆದಿದೆ. ಅಷ್ಟಕ್ಕೂ ದರ್ಶನ್ ಮೊದಲ ಸಿನಿಮಾ 'ಮೆಜೆಸ್ಟಿಕ್' ವೇಳೆ ಅಂತಹದ್ದೇನಾಗಿತ್ತು ಅಂತಿರಾ? ಅವರೇ ವೇದಿಕೆ ಮೇಲೆ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
"ಜೀವನದಲ್ಲಿ ಕೆಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಆ ಕೆಲವು ಘಟನೆಗಳಲ್ಲಿ ನನಗೆ ಮರೆಯಲಾಗದೆ ಇರುವ ಘಟನೆ, ನನ್ನ ಅಂದಿನ ಗುತ್ತಿಗೆದಾರ, ಸಹೋದ್ಯೋಗಿ ಎಂ ಜಿ ರಾಮಮೂರ್ತಿ. ಅವರು ನಾನೊಂದು ಸಿನಿಮಾ ಮಾಡುತ್ತಿದ್ದೇನೆ. ಅದರು ಯಾರು ಅಂದಾಗ, ನಾನೊಂದು ಸಿನಿಮಾ ಮಾಡುತ್ತಿದ್ದೇನೆ. ಅದು ತೂಗುದೀಪ ಶ್ರೀನಿವಾಸ್ ಪುತ್ರ ಅಂದಿದ್ರು. ಆ ಸಿನಿಮಾ ನೀವು ಕ್ಲಾಪ್ ಮಾಡಬೇಕು ಅಂದಿದ್ರು. ಇದು ನಡೆದ ಘಟನೆ ಸುಮಾರು 23 ವರ್ಷ ಆಗುತ್ತಿದೆ. ಆಗ ನಾನೊಬ್ಬ ಗುತ್ತಿಗೆದಾರ. ಅಂದಿನಿಂದ ನನ್ನನ್ನು ಒಬ್ಬ ಶಾಸಕನನ್ನಾಗಿ ಮಾಡುವುದಕ್ಕೆ ಬಂದ ಆತ್ಮೀಯರು ದರ್ಶನ್. " ಎಂದು ಶಾಸಕ ಮುನಿರತ್ನ ಹೇಳಿಕೊಂಡಿದ್ದಾರೆ.

ಇದೇ ವೇಳೆ ವೇದಿಕೆ ಮೇಲೆ ಮಾತಾಡುವುದಕ್ಕೆ ಬರುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಡಿ ಬಾಸ್ ಅಂತ ಕೂಗುವುದಕ್ಕೆ ಆರಂಭಿಸಿದ್ದರು. ಆ ಸಂದರ್ಭದಲ್ಲಿ ಮುನಿರತ್ನಂ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದರು. "ನೀವು ಗಲಾಟೆ ಮಾಡಿದ್ರೆ, ಹಾಗೇ ಕಾರಲ್ಲಿ ಕೂತ್ಕೊಂಡು ಹೊರಟು ಬಿಡ್ತಾರೆ. ನೀವು ಐದು ನಿಮಿಷ ಸುಮ್ಮನೆ ಇದ್ದರೆ, ನಮ್ಮ ನಾಯಕರಾದಂತಹ ಅಶ್ವಥ್ ನಾರಾಯಣ್ ಅವರು ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಬ್ಬರೂ ಮಾತಾಡುತ್ತಾರೆ. ಸರ್ ಇವರು ಹೇಳಿದ ಮಾತು ಕೇಳುವುದಿಲ್ಲ. ಶಿವರಾತ್ರಿ ಹಬ್ಬಕ್ಕೆ ಬಂದಿದ್ದು ತುಂಬಾನೇ ಖುಷಿ ಆಯ್ತು. ನೀವು ಹೊರಡಬಹುದು ಸರ್. ಸುಮ್ಮನೆ ಇದ್ದರೆ ಮಾತಾಡುತ್ತಾರೆ" ಎಂದು ಗರಂ ಆಗಿದ್ದರು.
ಇಷ್ಟೆಲ್ಲ ಹೇಳಿದರೂ, ದರ್ಶನ್ ಅಭಿಮಾನಿಗಳು ಮಾತು ನಿಲ್ಲಿಸದೇ ಇದ್ದಾಗ, ಮತ್ತೊಮ್ಮೆ ಸಿಟ್ಟಿಗೆದ್ದಿದ್ದರು. "ನಾವು ಮೂರು ಲಕ್ಷ 70 ಸಾವಿರ ಕೋಟಿ ಬಜೆಟ್ ಮಾಡಿದರೂ ಯಾರು ಹೀಗೆ ಮಾಡುವುದಿಲ್ಲ. ನೀವು ಇದೇ ರೀತಿ ಮುಂದುವರೆಸಿದರೆ, ನಾನು ಹೇಳುತ್ತಿದ್ದೇನೆ ಅವರು ಹೊರಡುತ್ತಾರೆ. ಕೊನೆಯ ಸಾರಿ ಹೇಳುತ್ತಿದ್ದೇನೆ. ಬೇರೆಯವರಿಗೆ ತೊಂದರೆ ಮಾಡಬಾರದು." ಎಂದು ಶಾಸಕ ಮುನಿರತ್ನ ಹೇಳಿ ಫ್ಯಾನ್ಸ್ ಅನ್ನು ಗದರಿಸಿದ್ದರು. ಅದೇ ವಿಡಿಯೋ ಈಗ ವೈರಲ್ ಆಗುತ್ತಿದೆ.


Click it and Unblock the Notifications











