ರಜನಿ '2.0' ಚಿತ್ರಕ್ಕೆ ಸೆಡ್ಡು ಹೊಡೆಯಲಿದೆ ಕನ್ನಡದ ಈ ಸಿನಿಮಾ!

By Naveen

Recommended Video

'Rajani 2.0' is getting a huge fight from this kannada movie | Filmibeat Kannada

ಸ್ಟೈಲ್ ಕಿಂಗ್ ರಜನಿಕಾಂತ್ ಅಭಿನಯದ '2.0' ಸಿನಿಮಾದ ಹವಾ ಸಿಕ್ಕಾಪಟ್ಟೆ ಜೋರಾಗಿದೆ. ನಿರ್ದೇಶಕ ಶಂಕರ್ ಮತ್ತು ರಜನಿಕಾಂತ್ ಮತ್ತೆ ಈ ಚಿತ್ರದಲ್ಲಿ ಒಂದಾಗಿದ್ದು, ಸಿನಿಮಾ ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಿದೆ.

ರಜನಿ '2.0' ಸಿನಿಮಾ ಬರುತ್ತಿರುವ ಕಾರಣ ಯಾವ ಭಾಷೆಯ ಚಿತ್ರಗಳು ಅದರ ಮುಂದೆ ನಿಲ್ಲುವ ಧೈರ್ಯ ಮಾಡುತ್ತಿಲ್ಲ. ಆದರೆ ಕನ್ನಡದ ಒಂದು ಸಿನಿಮಾ ಈಗ '2.0' ಬಿಡುಗಡೆಯಾಗುತ್ತಿರುವ ದಿನವೇ ಫೀಲ್ಡ್ ಗೆ ಇಳಿಯುತ್ತಿದೆ. ಈ ಮೂಲಕ ಆ ಸಿನಿಮಾ ನೇರವಾಗಿ ರಜನಿ ಚಿತ್ರಕ್ಕೆ ಪೈಪೋಟಿ ನೀಡುವುದಕ್ಕೆ ಸಿದ್ಧವಾಗಿದೆ. ಮುಂದೆ ಓದಿ...

'ರಾಜರಥ' ರಿಲೀಸ್

'ರಾಜರಥ' ರಿಲೀಸ್

ಕನ್ನಡದ 'ರಾಜರಥ' ಸಿನಿಮಾದ ಬಿಡುಗಡೆಯ ದಿನಾಂಕ ಇದೀಗ ಅನೌನ್ಸ್ ಆಗಿದೆ. ಈ ಚಿತ್ರದ ಜನವರಿ 25ಕ್ಕೆ ದೇಶಾದ್ಯಂತ ತೆರೆಗೆ ಬರಲಿದೆ.

'ರಾಜರಥ' V/S '2.0'

'ರಾಜರಥ' V/S '2.0'

ಈ ಹಿಂದೆಯೇ ಹಾಕಿದ ಲೆಕ್ಕಾಚಾರದಂತೆ '2.0' ಸಿನಿಮಾ 2018ರ ಜನವರಿ 25ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ, '2.0' ಮತ್ತು 'ರಾಜರಥ' ಚಿತ್ರದ ನಡುವೆ ಜಿದ್ದಾಜಿದ್ದಿ ನಡೆಯಲಿದೆ.

ಮುಂದಕ್ಕೆ ಹೋದ 'ಪ್ಯಾಡ್ ಮ್ಯಾನ್'

ಮುಂದಕ್ಕೆ ಹೋದ 'ಪ್ಯಾಡ್ ಮ್ಯಾನ್'

ಅಕ್ಷಯ್ ಕುಮಾರ್ ನಟನೆಯ 'ಪ್ಯಾಡ್ ಮ್ಯಾನ್' ಚಿತ್ರ ಕೂಡ ಜನವರಿ 26ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ '2.0' ದಿಂದ ಈ ಚಿತ್ರದ ರಿಲೀಸ್ ಮುಂದಕ್ಕೆ ಹೋಗಿದೆ.

ಅಂದು 'ಬಾಹುಬಲಿ', ಇಂದು '2.0'

ಅಂದು 'ಬಾಹುಬಲಿ', ಇಂದು '2.0'

ಅಂದು ಭಂಡಾರಿ ಸಹೋದರರ ಮೊದಲ ಚಿತ್ರ 'ರಂಗಿತರಂಗ' ಸಿನಿಮಾ ಬಂದಾಗ ಅದೇ ವೇಳೆ 'ಬಾಹುಬಲಿ' ಚಿತ್ರ ಬಿಡುಗಡೆಯಾಗಿತ್ತು. ಈಗ 'ರಾಜರಥ' ಸಮಯಕ್ಕೆ ಸರಿಯಾಗಿ '2.0' ಚಿತ್ರ ರಿಲೀಸ್ ಆಗುತ್ತಿದೆ.

ಗೆಲ್ಲಬೇಕು

ಗೆಲ್ಲಬೇಕು

ಈ ಹಿಂದೆ 'ರಂಗಿತರಂಗ' ಚಿತ್ರ 'ಬಾಹುಬಲಿ' ಸಿನಿಮಾಗೆ ಕಡಿಮೆ ಇಲ್ಲದ ರೀತಿ ಬ್ಲಾಕ್ ಬಸ್ಟರ್ ಸಿನಿಮಾವಾಗಿತ್ತು. ಅದೇ ರೀತಿ ಈಗ '2.0' ವಿರುದ್ದ ನಿಂತಿರುವ 'ರಾಜರಥ' ಕೂಡ ಕನ್ನಡ ಸಿನಿಮಾದ ಪವರ್ ಸಾಬೀತು ಮಾಡಲಿ.

ಎರಡು ಭಾಷೆಗಳಲ್ಲಿ

ಎರಡು ಭಾಷೆಗಳಲ್ಲಿ

ವಿಶೇಷ ಅಂದ್ರೆ 'ರಾಜರಥ' ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇತ್ತ '2.0' ಚಿತ್ರ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬರುತ್ತಿದೆ. ಹೀಗಾಗಿ, ಸೌತ್ ಬಾಕ್ ಆಫೀಸ್ ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ.

'ರಾಜರಥ' ಸಿನಿಮಾದ ಬಗ್ಗೆ

'ರಾಜರಥ' ಸಿನಿಮಾದ ಬಗ್ಗೆ

'ರಾಜರಥ' ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ನಿರೂಪ್ ಭಂಡಾರಿ ಮತ್ತು ಅವಂತಿಕ ಶೆಟ್ಟಿ ನಟಿಸಿದ್ದಾರೆ. ವಿಭಿನ್ನ ಪಾತ್ರದಲ್ಲಿ ನಟ ರವಿಶಂಕರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ತಮಿಳು ನಟ ಆರ್ಯ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Kannada Movie 'Rajaratha' is all set to release on January 25th 2018. 'ರಾಜರಥ' ಸಿನಿಮಾದ ಜನವರಿ 25ಕ್ಕೆ ಬಿಡುಗಡೆಯಾಗಲಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X