'ಟಗರು' ಎದುರಿಗೆ ನಿಂತ ಮತ್ತೊಂದು ಕನ್ನಡದ ಬಹುನಿರೀಕ್ಷಿತ ಸಿನಿಮಾ!
Recommended Video

'ಟಗರು'ದ ಬಿಡುಗಡೆಯ ದಿನಾಂಕ ಅಂತಿಮ ಆಗಿದೆ. ಸಿನಿಮಾ ಫೆಬ್ರವರಿ 23ಕ್ಕೆ ರಿಲೀಸ್ ಆಗಲಿದೆ. ಶಿವರಾಜ್ ಕುಮಾರ್ ಅಭಿಮಾನಿಗಳು ಸಿನಿಮಾದ ಸಂಭ್ರಮವನ್ನು ಈಗಾಗಲೇ ಶುರು ಮಾಡಿಕೊಂಡಿದ್ದಾರೆ. 'ಟಗರು' ಕ್ರೇಜ್ ಸಿಕ್ಕಾಪಟ್ಟೆ ಇದೆ.
'ಟಗರು' ಸಿನಿಮಾದ ಹವಾ ನೋಡಿ ಅಂದು ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುವ ಧೈರ್ಯವನ್ನು ಯಾರು ಮಾಡಿರಲಿಲ್ಲ. ಅದೇ ಕಾರಣಕ್ಕೆ ಫೆಬ್ರವರಿ ಮೊದಲ ವಾರದಲ್ಲಿ ಒಂದೇ ದಿನ 7 ಸಿನಿಮಾಗಳು ಬಿಡುಗಡೆಯಾಗಿತ್ತು. ಆದರೆ ಈಗ ಶಿವಣ್ಣನ 'ಟಗರು' ಜೊತೆಗೆ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ರಿಲೀಸ್ ಆಗುತ್ತಿದೆ. ಹೌದು, ಭಂಡಾರಿ ಸಹೋದರರ ಸಿನಿಮಾ ಫೆಬ್ರವರಿ 23ಕ್ಕೆ ಬರುವುದು ಪಕ್ಕಾ ಆಗಿದೆ. ಮುಂದೆ ಓದಿ...

'ರಾಜರಥ' ರಿಲೀಸ್
ನಿರೂಪ್ ಭಂಡಾರಿ ನಟನೆಯ 'ರಾಜರಥ' ಸಿನಿಮಾದ ಬಿಡುಗಡೆಯ ದಿನಾಂಕ ಅಂತಿಮ ಆಗಿದೆ. ಸಿನಿಮಾ ಇದೇ ಫೆಬ್ರವರಿ 23ಕ್ಕೆ ರಿಲೀಸ್ ಆಗಲಿದೆ. ಈ ವಿಷಯವನ್ನು ಸ್ವತಃ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮುಂದಕ್ಕೆ ಹೋಗಿತ್ತು
ಪ್ರಾರಂಭದಲ್ಲಿ 'ರಾಜರಥ' ಸಿನಿಮಾವನ್ನು ಜನವರಿ 25ಕ್ಕೆ ರಿಲೀಸ್ ಮಾಡುವ ಪ್ಲಾನ್ ಇತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು.

'ಟಗರು' ಪೋಸ್ಟ್ ಪೋನ್ ಆಗಿತ್ತು
'ಟಗರು' ಸಿನಿಮಾದ ರಿಲೀಸ್ ಡೇಟ್ ಕೂಡ ಎರಡು ಸಾರಿ ಪೋಸ್ಟ್ ಪೋನ್ ಆಗಿತ್ತು. ಮೊದಲು ಸಿನಿಮಾ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ನಂತರ ಈ ವರ್ಷ ಜನವರಿ ತಿಂಗಳಿನಲ್ಲಿ ತೆರೆಗೆ ಬರುವ ಪ್ಲಾನ್ ಇತ್ತು. ಆದರೆ ಅಂತಿಮವಾಗಿ ಈಗ ಈ ಚಿತ್ರ ಫೆಬ್ರವರಿ 23 ಬರುವುದು ಪಕ್ಕಾ ಆಗಿದೆ.

'ರಾಜರಥ'ಕ್ಕೆ ಸಾಥ್ ನೀಡಿದ್ದ ಶಿವಣ್
ವಿಶೇಷ ಅಂದರೆ ಶಿವಣ್ಣನ ಸಿನಿಮಾದ ದಿನವೇ 'ರಾಜರಥ' ರಿಲೀಸ್ ಆಗುತ್ತಿದೆ. ಆದರೆ ಈ ಹಿಂದೆ 'ರಾಜರಥ' ಸಿನಿಮಾದ ಮೊದಲ ಹಾಡನ್ನು ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದರು.

ಸಿನಿಮಾಗಳ ವಿವರ
'ಟಗರು' ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ನಟಿ ಭಾವನಾ, ಮಾನ್ವಿತಾ ಹರೀಶ್, ಧನಂಜಯ್, ವಸಿಷ್ಟ ಸಿನಿಮಾದಲ್ಲಿ ನಟಿಸಿದ್ದಾರೆ. 'ರಾಜರಥ' ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ, ರವಿಶಂಕರ್, ಆರ್ಯ ನಟಿಸಿದ್ದಾರೆ.

ಎರಡು ಸಿನಿಮಾ ಗೆಲ್ಲಲ್ಲಿ
ಒಂದೇ ದಿನ ರಿಲೀಸ್ ಆಗುತ್ತಿರುವ ಈ ಎರಡು ಚಿತ್ರಗಳ ಮಧ್ಯೆ ಒಳ್ಳೆಯ ರೀತಿಯಾದ ಪೈಪೋಟಿ ಇದೆ. 'ಟಗರು' ಮತ್ತು 'ರಾಜರಥ' ಈ ಎರಡು ಚಿತ್ರಗಳ ಪೈಕಿ ಎರಡು ಗೆಲ್ಲಲ್ಲಿ ಎನ್ನುವುದು ನಮ್ಮ ಬಯಕೆ.


Click it and Unblock the Notifications











