»   »  'ಹೀರೋ ಎಂಟ್ರಿ ಹೇಗಿರಬೇಕು' ಅಂತ ಪಾಠ ಮಾಡಿದ ನಿರೂಪ್

'ಹೀರೋ ಎಂಟ್ರಿ ಹೇಗಿರಬೇಕು' ಅಂತ ಪಾಠ ಮಾಡಿದ ನಿರೂಪ್

Posted By:
Subscribe to Filmibeat Kannada
ನಿರೂಪ್ ಭಂಡಾರಿ ತಮ್ಮ ರಾಜರಥ ಸಿನಿಮಾದ ಬಗ್ಗೆ ಬಿಚ್ಚಿಟ್ಟ ವಿಷಯಗಳು | Filmibeat Kannada

ಕನ್ನಡ ಇಂಡಸ್ಟ್ರಿಗೆ ಮತ್ತೊಬ್ಬ ಮಾಸ್ ಹೀರೋ ಎಂಟ್ರಿಯಾಗಿದೆ. ಚೊಚ್ಚಲ ಚಿತ್ರದಲ್ಲಿ ಚಾಕೂಲೆಟ್ ಹೀರೋ ಇಮೇಜ್ ಇಟ್ಕೊಂಡು ಬಂದಿದ್ದ ಈ ನಟ ಈಗ ಕ್ಲಾಸ್ ಲುಕ್ ನಲ್ಲಿ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಹೌದು, ನಾವ್ ಹೇಳ್ತಿರೋದು 'ರಾಜರಥ' ಚಿತ್ರದ ನಾಯಕ ನಿರೂಪ್ ಭಂಡಾರಿ ಅವರ ಬಗ್ಗೆ. ನಿರೂಪ್ ಅಭಿನಯದ ಎರಡನೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಈ ಟ್ರೈಲರ್ ಸಖತ್ ಮೋಡಿ ಮಾಡುತ್ತಿದೆ. ಅದರಲ್ಲೂ, ಟ್ರೈಲರ್ ನಲ್ಲಿ ಬರುವ ಡೈಲಾಗ್ ಸೌಂಡ್ ಮಾಡೋಕೆ ಶುರು ಮಾಡಿದೆ.

ವಿಡಿಯೋ : 'ರಾಜರಾಥ' ಚಿತ್ರದ ಟ್ರೇಲರ್ ನಲ್ಲಿ ಕಂಡ ರಾಜರತ್ನ ಪುನೀತ್

Rajaratha movie dialogue

ಹೀರೋ ಎಂಟ್ರಿ ಹೇಗೆ ಇರ್ಬೇಕು ಎನ್ನುವುದನ್ನ ನಿರೂಪ್ ಭಂಡಾರಿ ಹೇಳಿದ್ದಾರೆ ಕೇಳಿ. ''ಟಿಕೆಟ್ ಎಲ್ಲ ಸೋಲ್ಡ್ ಔಟ್ ಆಗಿ ಹೌಸ್ ಫುಲ್ ಬೋರ್ಡ್ ಬಿದ್ದು, ಸೀಟಲಿ ಕೂತಿರೋ ಜನ ಎದ್ನಿಂತ್ಕೊಂಡು ಶಿಳ್ಳೆ ಹೊಡೆದ್ರೆನೇ.... ಹೀರೋ ಎಂಟ್ರಿಗೆ ಬೆಲೆ.....''. ಅಂದ್ಹಾಗೆ, ಈ ಹೀರೋಗೆ ಇಷ್ಟೊಂದು ಬಿಲ್ಡಪ್ ಕೊಟ್ಟು ಎಂಟ್ರಿ ಕೊಡಿಸಿರುವುದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಟ್ರೈಲರ್ ಗೆ ಪುನೀತ್ ವಾಯ್ಸ್ ಕೊಟ್ಟಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿದ್ದು, ಅವಂತಿಕಾ ಶೆಟ್ಟಿ ನಾಯಕಿಯಾಗಿದ್ದಾರೆ. ತಮಿಳು ನಟ ಆರ್ಯ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ತೆರೆಕಾಣುತ್ತಿದೆ.

ರಾಜರಥ ಟ್ರೈಲರ್ ನೋಡಿ

English summary
Nirup Bhandari starrer Kannada movie Rajaratha trailer released. the movie directed by anup bhandari. movie aslo features tamil actor surya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X