In pics: ಕ್ರೇಜಿಸ್ಟಾರ್ ಅವರ 'RP' ಚಿತ್ರದ ಡೈಲಾಗ್ ಗಳ ಹವಾ ನೋಡ್ರಪ್ಪಾ
Recommended Video

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಬಕಾಸುರ', 'ಸೀಜರ್' ಸಿನಿಮಾಗಳು ಬಿಡುಗಡೆಯಾಗಿತ್ತು. ಮತ್ತೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕುರುಕ್ಷೇತ್ರ' ಚಿತ್ರದಲ್ಲಿ ಕೃಷ್ಣನ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದರು. ಈ ಚಿತ್ರಗಳನ್ನ ಮುಗಿಸಿರುವ ಕ್ರೇಜಿಸ್ಟಾರ್ ತಮ್ಮದೇ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.
ಹೌದು, ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ-ಸಂಗೀತ-ನಿರ್ದೇಶನ ಹಾಗೂ ರವಿಚಂದ್ರನ್ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ 'ರಾಜೇಂದ್ರ ಪೊನ್ನಪ್ಪ' (RP) ಸಿನಿಮಾ ಶೂಟಿಂಗ್ ಶೇಕಡಾ 60ರಷ್ಟು ಮುಕ್ತಾಯವಾಗಿದೆ. ರಾಧಿಕಾ ಕುಮಾರಸ್ವಾಮಿ ಈ ಚಿತ್ರದಲ್ಲಿ ನಾಯಕಿಯಾಗಿದ್ದು, ದೊಡ್ಡ ಮಟ್ಟದ ನಿರೀಕ್ಷೆಯನ್ನ ಹುಟ್ಟಿಸಿದೆ.
ಇದೀಗ, ರಾಜೇಂದ್ರ ಪೊನ್ನಪ್ಪ ಚಿತ್ರದ ಹೊಸ ಫೋಸ್ಟರ್ ಗಳು ಬಿಡುಗಡೆಯಾಗಿದ್ದು, ಆ ಪೋಸ್ಟರ್ ಗಳ ಮೇಲೆ ಬರೆಯಲಾಗಿರುವ ಒಂದೊಂದು ಡೈಲಾಗ್ ಗಳು ಕೂಡ ಸಖತ್ ಹವಾ ಮಾಡ್ತಿದೆ. ಹಾಗಿದ್ರೆ, ತೆರೆಮೇಲೆ ರವಿಚಂದ್ರನ್ ಅವರ ಡೈಲಾಗ್ ಗಳು ಹೇಗಿರುತ್ತೆ ಎಂಬುದನ್ನ ಮೊದಲೇ ನೀವು ತಿಳಿಯಬಹುದು. ಕ್ರೇಜಿಸ್ಟಾರ್ ಡೈಲಾಗ್ ಗಳನ್ನ ತಿಳಿಯಲು ಮುಂದೆ ಓದಿ....

ಡೈಲಾಗ್ ನಂ 1
''ಕಾಸಿದ್ದೋನೇ ಇಲ್ಲಿ ಯಜಮಾನ, ತಲೆ ಇದ್ದೋನೆ ಇಲ್ಲಿ ಜವಾನ''
ಡೈಲಾಗ್ ನಂ 2
''ತಪ್ ಮಾಡ್ದೋನ್ಗೆ ಇಲ್ಲಿ ಸನ್ಮಾನ, ತೆಪ್ಗಿದ್ದೋನ್ಗೆ ಬರೀ ಅವಮಾನ''

ಡೈಲಾಗ್ ನಂ 3
''ಸಿಂಹ ಯಾವತ್ತಿದ್ರೂ ಬೇಟೆ ಆದ್ಮೇ ಘರ್ಜಿಸಲ್ಲ.!''
ಡೈಲಾಗ್ ನಂ 4
''ನಿನ್ನ ಮೌನನ ಅರ್ಥ ಮಾಡ್ಕೊಳ್ಳದೇ ಇರೋರು, ನಿನ್ನ ಮಾತೆಲ್ ಅರ್ಥ ಮಾಡ್ಕೊತಾರೆ''

ಡೈಲಾಗ್ ನಂ 5
''ಈ RP ಡ್ಯೂಯಲ್ ಪರ್ಸನಾಲಿಟಿ ಅರ್ಥ ಮಾಡ್ಲೊಳ್ಳೋದ್ ಕಷ್ಟ. ಹೀರೋನಾ.. ವಿಲ್ಲನ್ನಾ... ನೀವೇ ಡಿಸೈಡ್ ಮಾಡ್ಕೊಳ್ಳಿ''
ಡೈಲಾಗ್ ನಂ 6
''ನಿನಗೆ ಸರಿ ಅನ್ಸಿದಕ್ಕೆ ನಿಂತ್ಕೊ ಏಕಾಂಗಿ ಆದ್ರೂ ಸರಿ''

ಡೈಲಾಗ್ ನಂ 7
''ನಾನ್ ಯಾವತ್ತು ಸೋತಿಲ್ಲ, ಗೆದ್ದಿದ್ದೀನಿ ಅಥವಾ ಕಲ್ತಿದ್ದೀನಿ''
ಡೈಲಾಗ್ ನಂ 8
''ಪವರ್ ನ ಮಿಸ್ ಯೂಸ್ ಮಾಡೋರ್ ಜೊತೆ ಆಟ ಆಡೋ ಮಜಾನೇ ಬೇರೆ''

ಡೈಲಾಗ್ ನಂ 9
''ನನ್ನ ಕಾಲ ಮೇಲೆ ನಿಂತು ಸಾಯ್ತಿನೇ ಹೊರತು ಮಂಡಿಯೂರಿ ಸಾಯಲ್ಲ''
ಡೈಲಾಗ್ ನಂ 10
''ಏಕಾಂಗಿ ಈ ಸೈನಿಕ ಹೋರಾಟವೇ ಕಾಯಕ''

ಡೈಲಾಗ್ ನಂ 11
''ನನ್ನ ಒಂದು ಗೇಮ್ ತರ ಟ್ರೀಟ್ ಮಾಡು, ಆಡ ಆಡೋ''


Click it and Unblock the Notifications











