twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್-ದರ್ಶನ್ ಗೂ ಮೊದಲೇ ಈ ನಟ 'ಮದಕರಿ ನಾಯಕ' ಆಗಬೇಕಿತ್ತಂತೆ.!

    |

    Recommended Video

    ದರ್ಶನ್-ಸುದೀಪ್ ಮೊದಲು ಮದಕರಿ ನಾಯಕ ಆಗಬೇಕಿದ್ದ ನಟ ಯಾರು ಗೊತ್ತಾ..? | Filmibeat Kannada

    'ಮದಕರಿ ನಾಯಕ'ನ ಕುರಿತು ಸಿನಿಮಾ ಮಾಡುವುದಾಗಿ ಹೇಳಿಕೊಂಡಿರುವ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಇಡೀ ಇಂಡಸ್ಟ್ರಿಯ ಕಣ್ಣು ಬಿದ್ದಿದೆ. ಒಂದೇ ಕಥೆಯ ಬಗ್ಗೆ ಇಬ್ಬರು ನಟರು ಸಿನಿಮಾ ಮಾಡ್ತಾರಾ ಎಂಬ ಗೊಂದಲಕ್ಕೀಡಾಗಿದೆ ಗಾಂಧಿನಗರ.

    ಆದ್ರೆ. ಸುದೀಪ್ ಮತ್ತು ದರ್ಶನ್ ಇಬ್ಬರು ಮದಕರಿ ನಾಯಕನ ಬಗ್ಗೆ ಸಿನಿಮಾ ಮಾಡೋದು ಬಹುತೇಕ ಖಚಿತವಾಗಿದೆ. ದರ್ಶನ್ ಸಿನಿಮಾವನ್ನ ರಾಕ್ ಲೈನ್ ನಿರ್ಮಿಸಿದ್ರೆ, ಸುದೀಪ್ ಚಿತ್ರ ತಮ್ಮದೇ ಬ್ಯಾನರ್ ನಲ್ಲಿ ಸೆಟ್ಟೇರಲಿದೆ.

    'ಮದಕರಿ ನಾಯಕ' ಚಿತ್ರದ ಬಗ್ಗೆ ಸುದೀಪ್ ಹೇಳಿದ್ದನ್ನೇ ದರ್ಶನ್ ಹೇಳಿದ್ರಂತೆ.! 'ಮದಕರಿ ನಾಯಕ' ಚಿತ್ರದ ಬಗ್ಗೆ ಸುದೀಪ್ ಹೇಳಿದ್ದನ್ನೇ ದರ್ಶನ್ ಹೇಳಿದ್ರಂತೆ.!

    ಈಗ ಬಹಿರಂಗವಾಗಿರುವ ತಾಜಾ ಸುದ್ದಿ ಏನಪ್ಪಾ ಅಂದ್ರೆ, ಇವರಿಬ್ಬರಿಗೂ ಮುಂಚೆಯೇ ಕನ್ನಡದ ಸೂಪರ್ ಸ್ಟಾರ್ ನಟರೊಬ್ಬರು ಮದಕರಿ ನಾಯಕನ ಕುರಿತು ಸಿನಿಮಾ ಮಾಡಬೇಕಿತ್ತಂತೆ. ಆದ್ರೆ, ಬಜೆಟ್ ಕಾರಣದಿಂದ ಈ ಸಿನಿಮಾ ಸೆಟ್ಟೇರಲಿಲ್ಲ ಎಂಬ ವಿಷ್ಯವನ್ನ ಖ್ಯಾತ ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ. ಅಷ್ಟಕ್ಕೂ ಯಾರದು ಆ ನಟ.? ಮುಂದೆ ಓದಿ.....

    ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿಬೇಕಿತ್ತು.!

    ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿಬೇಕಿತ್ತು.!

    ಎಲ್ಲ ಅಂದುಕೊಂಡಂತೆ ಆಗಿದ್ದರೇ 'ಮದಕರಿ ನಾಯಕ'ನ ಕುರಿತ ಚಿತ್ರವೊಂದನ್ನ ಆಗಲೇ ಎಸ್ ವಿ ರಾಅಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಬೇಕಿತ್ತು. ಅದಕ್ಕಾಗಿ ಸ್ಕ್ರಿಪ್ಟ್ ಸಿದ್ಧ ಮಾಡಿ, ನಾಯಕನನ್ನ ಕೂಡ ಆಯ್ಕೆ ಮಾಡಿಕೊಂಡಿದ್ದರು. ಆದ್ರೆ, ಅಂದು ನೆರವೇರಲಿಲ್ಲ. ಆ ಕನಸನ್ನ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರೆ. ರಾಕ್ ಲೈನ್ ನಿರ್ಮಾಣ ಹಾಗೂ ದರ್ಶನ್ ಅಭಿನಯಿಸಲಿರುವ ಚಿತ್ರಕ್ಕೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಲಿದ್ದಾರೆ.

    ರಾಕ್ ಲೈನ್ ನಿರ್ಮಾಣದ ಅದ್ದೂರಿ ಐತಿಹಾಸಿಕ ಚಿತ್ರದಲ್ಲಿ ದರ್ಶನ್ ರಾಕ್ ಲೈನ್ ನಿರ್ಮಾಣದ ಅದ್ದೂರಿ ಐತಿಹಾಸಿಕ ಚಿತ್ರದಲ್ಲಿ ದರ್ಶನ್

    ಸುದೀಪ್-ದರ್ಶನ್ ಗೂ ಮುಂಚೆ ವಿಷ್ಣು.!

    ಸುದೀಪ್-ದರ್ಶನ್ ಗೂ ಮುಂಚೆ ವಿಷ್ಣು.!

    ಸುದೀಪ್ ಮತ್ತು ದರ್ಶನ್ ನ್ ಗೂ ಮುಂಚೆ ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಮದಕರಿ ನಾಯಕನಾಗಿ ಅಭಿನಯಿಸಬೇಕಿತ್ತು. ಆದ್ರೆ, ಬಂಡವಾಳದ ಸಮಸ್ಯೆಯಿಂದ ಆ ಪ್ರಾಜೆಕ್ಟ್ ಅರ್ಧಕ್ಕೆ ನಿಂತು ಹೋಗಿತ್ತು. ಈ ವಿಷ್ಯವನ್ನ ಸ್ವತಃ ರಾಜೇಂದ್ರ ಸಿಂಗ್ ಬಾಬು ಅವರೇ ಬಹಿರಂಗಪಡಿಸಿದ್ದಾರೆ.

    100 ಕೋಟಿ ಬಜೆಟ್ ಚಿತ್ರಕ್ಕೆ ಪ್ರಿಯಾ ಸುದೀಪ್ ನಿರ್ಮಾಪಕಿ! 100 ಕೋಟಿ ಬಜೆಟ್ ಚಿತ್ರಕ್ಕೆ ಪ್ರಿಯಾ ಸುದೀಪ್ ನಿರ್ಮಾಪಕಿ!

    ಅಂದಿನ ಕಾಲಕ್ಕೆ ದೊಡ್ಡ ಮೊತ್ತ

    ಅಂದಿನ ಕಾಲಕ್ಕೆ ದೊಡ್ಡ ಮೊತ್ತ

    ಒಂದೂವರೆ ವರ್ಷ ಸ್ಕ್ರಿಪ್ಟ್ ಮಾಡಲಾಗಿತ್ತು. ಸಿನಿಮಾ ಬಗ್ಗೆ ಪತ್ರಿಕೆಯಲ್ಲಿ ಜಾಹೀರಾತು ಕೂಡ ನೀಡಿದ್ವಿ. ಎಲ್ಲ ಪ್ಲಾನ್ ಮಾಡಿ ನೋಡಿದಾಗ ಸುಮಾರು 27 ಕೋಟಿಯ ಬಂಡವಾಳ ಅಗತ್ಯವಿತ್ತು. ಆಗಿನಿ ಸಮಯದಲ್ಲಿ ಇದು ಅತಿ ದೊಡ್ಡ ಮೊತ್ತ. ಗ್ರಾಫಿಕ್ಸ್ ತಂತ್ರಜ್ಞಾನ ಆಗ ಇರಲಿಲ್ಲ. ಭಾರತೀಯ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮೊತ್ತದಲ್ಲಿ ಸಿನಿಮಾ ಬಂದಿರಲಿಲ್ಲ. ಇಷ್ಟು ಹಣವನ್ನ ಹೂಡಲು ನಿರ್ಮಾಪಕರಿಲಿಲ್ಲ. ಹಾಗಾಗಿ, ಅಲ್ಲಿಗೆ ನಿಂತಿತ್ತು. ಎಂದು ಬಾಬು ನೆನಪಿಸಿಕೊಂಡಿದ್ದಾರೆ.

    'ಮದಕರಿ' ಗೊಂದಲಕ್ಕೆ ಬ್ರೇಕ್ ಹಾಕಿದ ಸುದೀಪ್: ರಾಕ್ಲೈನ್-ದರ್ಶನ್ ಚಿತ್ರಕ್ಕೆ ನೋ ಪ್ರಾಬ್ಲಂ.! 'ಮದಕರಿ' ಗೊಂದಲಕ್ಕೆ ಬ್ರೇಕ್ ಹಾಕಿದ ಸುದೀಪ್: ರಾಕ್ಲೈನ್-ದರ್ಶನ್ ಚಿತ್ರಕ್ಕೆ ನೋ ಪ್ರಾಬ್ಲಂ.!

    ಎರಡನೇ ಅವಕಾಶ ಪಡೆದ ಬಾಬು

    ಎರಡನೇ ಅವಕಾಶ ಪಡೆದ ಬಾಬು

    ಈ ಮೊದಲೇ ಒಮ್ಮೆ ಮದಕರಿ ನಾಯಕನ ಕುರಿತು ಸಿನಿಮಾ ಮಾಡಲು ಹೋಗಿ ಶುರುವಾಗುವ ಮೊದಲೇ ಸೋಲು ಕಂಡಿದ್ದ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರಿಗೆ ಈಗ ಎರಡನೇ ಅವಕಾಶ ಸಿಕ್ಕಿದೆ. ಹಲವು ವರ್ಷಗಳ ಕನಸು ಮತ್ತು ಅನುಭವ ಈ ಚಿತ್ರಕ್ಕೆ ಆಸರೆಯಾಗಲಿದೆ.

    'ಮದಕರಿ' ಚಿತ್ರಕ್ಕಾಗಿ ಸುದೀಪ್ ಮತ್ತು ರಾಕ್ ಲೈನ್ ನಡುವೆ ಆಯ್ತು ಒಪ್ಪಂದ.! 'ಮದಕರಿ' ಚಿತ್ರಕ್ಕಾಗಿ ಸುದೀಪ್ ಮತ್ತು ರಾಕ್ ಲೈನ್ ನಡುವೆ ಆಯ್ತು ಒಪ್ಪಂದ.!

    English summary
    The film on 18th Century palegars of Chitradurga, Madakari Nayaka, did not happen if a plan by director Rajendra Singh Babu and the late Vishnuvardhan.
    Friday, October 5, 2018, 15:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X