ಮಗನಿಗಾಗಿ ರಾಜೇಂದ್ರ ಸಿಂಗ್‌ಬಾಬು ಹೊಸ ಚಿತ್ರ: ದರ್ಶನ್ ಸಿನಿಮಾದ ಗತಿ ಏನು?
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ನಟ ದರ್ಶನ್ ಹೆಸರು ಒಟ್ಟಿಗೆ ಕೇಳಿ ಬಂದಿದ್ದು 'ರಾಜವೀರ ಮದಕರಿ ನಾಯಕ' ಚಿತ್ರಕ್ಕಾಗಿ. ಈ ಚಿತ್ರ ವೀರ ಮದಕರಿ ನಾಯಕ ಅವರ ಜೀವನ ಚರಿತ್ರೆ. ಮದಕರಿ ನಾಯಕನಾಗಿ ನಟ ದರ್ಶನ್ ಅಭಿನಯಿಸಬೇಕಿತ್ತು.
ಆದರೆ ಕಾರಣಾಂತರಗಳಿಂದ ಸದ್ಯ ಈ ಚಿತ್ರದ ಸ್ಥಗಿತಗೊಂಡಿದೆ. ಚಿತ್ರದ ಮುಹೂರ್ತ ನೆರವೇರಿದ್ದು, ಚಿತ್ರದ ಶೂಟಿಂಗ್ ಕೂಡ ಆರಂಭ ಆಗಿತ್ತು. ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಚಿತ್ರೀಕರಣ ಆರಂಭವಾಗಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು.
ಆದರೆ ಇದ್ದಕ್ಕಿದ್ದ ಹಾಗೆ ಚಿತ್ರ ನಿಂತು ಹೋಗಿದೆ. ಈಗ ನಟ ದರ್ಶನ್ 'ಕ್ರಾಂತಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇತ್ತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೂಡ ಹೊಸ ಸಿನಿಮಾ ಆರಂಭಿಸಿದ್ದಾರೆ.

ಹಳೆ ಟೈಟಲ್‌ನಲ್ಲಿ ರಾಜೇಂದ್ರ ಸಿಂಗ್ ಬಾಬು ಹೊಸ ಸಿನಿಮಾ!
ದರ್ಶನ್ ನಟನೆಯಲ್ಲಿ 'ರಾಜವೀರ ಮದಕರಿ ನಾಯಕ' ಚಿತ್ರಕ್ಕೆ ನಿರ್ದೇಶನ ಮಾಡಲು ಮುಂದಾಗಿದ್ದ ರಾಜೇಂದ್ರ ಸಿಂಗ್ ಬಾಬು. ಈಗ ತಾತ್ಕಾಲಿಕವಾಗಿ ದರ್ಶನ್ ಚಿತ್ರಕ್ಕೆ ಪೂರ್ಣ ವಿರಾಮ ಇಟ್ಟು ಬಂಧನದ ಮೊರೆ ಹೋಗಿದ್ದಾರೆ. ಬಂಧನ2 ಎನ್ನುವ ಶೀರ್ಷಿಕೆ ಇಟ್ಟು ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸದ್ಯ ಚಿತ್ರ ಸೆಟ್ಟೇರಲು ಸಕಲ ಸಿದ್ಧತೆಗಳು ನಡೆದಿದೆ. ಡಿಸೆಂಬರ್ 10 ರಂದು ಚಿತ್ರದ ಮುಹೂರ್ಥ ಸಮಾರಂಭ ನೆರವೇರಲಿದೆ.

ಮಗನಿಗಾಗಿ 'ಬಂಧನ2' ಆರಂಭಿಸಿದ ರಾಜೇಂದ್ರ ಸಿಂಗ್ ಬಾಬು!
ಚಿತ್ರದ ನಾಯಕನಾಗಿ ಆದಿತ್ಯ ಅಭಿನಯಿಸಲಿದ್ದಾರೆ. ಮಗನಿಗಾಗಿ ರಾಜೇಂದ್ರ ಸಿಂಗ್ ಬಾಬು ಬಂಧನ ಟೈಟಲ್ ಬಳಸಿ ಮತ್ತೆ ಸಿನಿಮಾ ಮಾಡುತ್ತಲಿದ್ದಾರೆ. ಈ ಹಿಂದೆ ಬಂದ ಎರಡು ಚಿತ್ರಗಳಲ್ಲಿ ಬಂಧ, ಸಂಬಂಧ, ಭಾವ ಬಂಧನಗಳ ಬಗ್ಗೆ ಕಥೆ ಹೆಣೆಯಲಾಗಿತ್ತು. ಈ ಚಿತ್ರದಲ್ಲಿ ಆದಿತ್ಯನಿಗಾಗಿ ಅಪ್ಪ ರಾಜೇಂದ್ರ ಸಿಂಗ್ ಬಾಬು ಯಾವ ರೀತಿಯ ಕಥೆ ಮಾಡಿಕೊಂಡಿದ್ದಾರೆ ಎನ್ನುವ ಕುತೂಹಲಗಳು ಹುಟ್ಟಿವೆ.
'ಬಂಧನ2' ಚಿತ್ರದಲ್ಲಿ ನಟಿ ಸುಹಾಸಿನಿ ಅಭಿನಯಿಸುತ್ತಲಿದ್ದಾರೆ. ಈ ಮೂಲಕ ಮತ್ತಷ್ಟು ಕುತೂಹಲಗಳು ಹುಟ್ಟಿ ಕೊಂಡಿವೆ. ಅಷ್ಟೇ ಅಲ್ಲ ಪಾತ್ರವರ್ಗದಲ್ಲಿ ಸುಹಾಸಿನಿ, ಆದಿತ್ಯ, ಸುಧಾರಾಣಿ, ಜೈ ಜಗದೀಶ್, ಸಾಧು ಕೋಕಿಲ ಇದ್ದಾರೆ. ಆದರೆ ಚಿತ್ರದ ನಾಯಕಿ ಯಾರು ಎನ್ನುವ ವಿಚಾರವನ್ನು ಚಿತ್ರತಂಡ ಇನ್ನು ರಿವೀಲ್ ಮಾಡಿಲ್ಲ. ಪಾತ್ರವರ್ಗವನ್ನು ನೋಡಿದರೆ ಚಿತ್ರದಲ್ಲಿ ಕೌಟುಂಬಿಕ ಕಥೆ ಇದೆ ಎನ್ನುವ ಸೂಚನೆ ಸಿಕ್ಕಿದೆ.

ಆ 'ಬಂಧನ' ನೆನಪಿಸಲಿದೆಯಾ 'ಬಂಧನ 2'!
ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಬಮಧನ ಕೂಡ ಒಂದು. ವಿಷ್ಣು ವರ್ಧನ್ ಮತ್ತು ಸುಹಾಸಿನಿ ಜೊತೆಯಾಗಿ ಅಭಿನಯಿಸಿದ 'ಬಂಧನ' ಚಿತ್ರ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಲ್ಲದೆ, ಸಿನಿಮಾ ಪ್ರೇಕ್ಷಕರ ಮನಸಲ್ಲಿ ಅಳಿಯದ ಅಚ್ಚು ಒತ್ತಿದೆ. ಈ ಚಿತ್ರದಲ್ಲಿ ವಿಷ್ಣು ಮತ್ತು ಸುಹಾಸಿನಿ ಅಭಿನಯಕ್ಕೆ ಮನಸೋಲದವರಿಲ್ಲ. 1984ರಲ್ಲಿ ಬಂದ 'ಬಂಧನ' ಚಿತ್ರ ಈಗಲೂ ಸಿನಿ ಪ್ರಿಯರ ನೆಚ್ಚಿನ ಸಿನಿಮಾಗಳ ಸಾಲಿನಲ್ಲಿ ಇದ್ದೇ ಇರುತ್ತದೆ.

'ಬಂಧನ'ದ ಬಂಧ ಬಿಡದ ಕನ್ನಡ ಚಿತ್ರತಂಗ!
ಮೊದಲು ಬಂಧನ ಟೈಟಲ್‌ನಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು 1984ರಲ್ಲಿ ರಾಜೇಂದ್ರ ಸಿಂಗ್ ಬಾಬು ಸಿನಿಮಾ ನಿರ್ದೇಶ ಮಾಡಿದ್ದರು. ನಂತರ 2007 ರಲ್ಲಿ ರಾಜೇಂದ್ರ ಸಿಂಗ್ ಬಾಬು ಸಹೋದರಿ ವಿಜಯಲಕ್ಷ್ಮಿ ಸಿಂಗ್ 'ಈ ಬಂಧನ' ಟೈಟಲ್‌ನಲ್ಲಿ ಸಿನಿಮಾ ಮಾಡಿದ್ರು. ಈ ಚಿತ್ರದಲ್ಲಿ ನಟ ವಿಷ್ಣುವರ್ಧನ್, ಜಯಪ್ರದ, ದರ್ಶನ್ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯಿಸಿದ್ದರು. ಈಗ ಬಂಧನ ಚಿತ್ರದ ಮಾಸ್ಟರ್ ಮೈಂಡ್ ರಾಜೇಂದ್ರ ಸಿಂಗ್‌ಬಾಬು ಮತ್ತೆ ಬಂಧನ ಹೆಸ್ರಲ್ಲಿ ಚಿತ್ರ ಮಾಡಲು ಮುಂದಾಗಿದ್ದಾರೆ.
ಇನ್ನು ರಾಜೇಂದ್ರ ಸಿಂಗ್ ಬಾಬು ದರ್ಶನ್ ಅವರಿಗೆ ಮಾಡಬೇಕಿದ್ದ 'ರಾಜವೀರ ಮದಕರಿ ನಾಯಕ' ಸಿನಿಮಾ ತಾತ್ಕಾಲಿಕವಾಗಿ ನಿಂತಿದೆ. ಈ ಚಿತ್ರದ ಶೂಟಿಂಗ್‌ನಲ್ಲಿ ಸಾವಿಸಾರು ಕಲಾವಿದರು ಭಾಗವಹಿಸ ಬೇಕಿದೆ. ಹಾಗಾಗಿ ಕೊರೊನಾ ಬಂದ ಕಾರಣ ಸದ್ಯಕ್ಕೆ ಆ ಚಿತ್ರದ ಶೂಟಿಂಗ್ ತಡೆಹಿಡಿಯಲಾಗಿದೆ ಎಂದ ಈ ಹಿಂದೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದರು. ಈಗ ಈ ಚಿತ್ರದ ಮುಂದಿನ ಅಪ್ಡೇಟ್‌ಗಾಗಿ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ. ಅತ್ತ ನಟ ದರ್ಶನ್, ಇತ್ತ ರಾಜೇಂದ್ರ ಸಿಂಗ್ ಬಾಬು ಬೇರೆ ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಹಾಗಾಗಿ 'ರಾಜವೀರ ಮದಕರಿ ನಾಯಕ' ಚಿತ್ರದ ಕಥೆ ಏನು ಎನ್ನುವ ಆತಂಕ ಕೂಡ ಮನೆ ಮಾಡಿದೆ.


Click it and Unblock the Notifications











