twitter
    For Quick Alerts
    ALLOW NOTIFICATIONS  
    For Daily Alerts

    'ಕದ್ದು ಸಿನಿಮಾ ಮಾಡುತ್ತಾರೆ': ಕನ್ನಡಿಗರನ್ನು ಮರೆತ ರಾಜಮೌಳಿ ವಿರುದ್ಧ ರಾಜೇಂದ್ರ ಸಿಂಗ್ ಬಾಬು ವಾಗ್ದಾಳಿ

    |

    ಎಸ್ ಎಸ್ ರಾಜಮೌಳಿ ಅವರು ತಮ್ಮ ಸಿನಿಮಾ ಬಿಡುಗಡೆ ಪ್ರಚಾರದ ವೇಳೆ ಮಾತ್ರ ಕರ್ನಾಟಕದಲ್ಲಿ ತಾನು ಕನ್ನಡಿಗ, ರಾಯಚೂರಿನವನು ಎಂದು ಹೇಳಿಕೊಳ್ಳುತ್ತಾರೆ ಎಂಬ ಆರೋಪವಿದೆ. ರಾಜ್ಯದ ನೆರೆಹಾವಳಿ, ಕೊರೊನಾ ವೈರಸ್ ಸೋಂಕು ಮುಂತಾದ ಸಂದರ್ಭದಲ್ಲಿ ರಾಜ್ಯಕ್ಕೆ ಯಾವ ರೀತಿಯಲ್ಲಿಯೂ ಸಹಾಯ ಮಾಡಲಿಲ್ಲ, ಹಾಗೆಯೇ ಸಾಂತ್ವನ ಕೂಡ ಹೇಳಲಿಲ್ಲ ಎಂದು ಅನೇಕರು ಕಿಡಿಕಾರಿದ್ದಾರೆ.

    Recommended Video

    IFS ಅಧಿಕಾರಿಯ ಪಾತ್ರದಲ್ಲಿ ದರ್ಶನ್ | Darshan | Gandhadagudi 3

    ಈಗ ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೂಡ ಎಸ್ ಎಸ್ ರಾಜಮೌಳಿ ವಿರುದ್ಧ ನೇರಾನೇರ ವಾಗ್ದಾಳಿ ನಡೆಸಿದ್ದಾರೆ. ಅದೂ ರಾಜಮೌಳಿ ಅವರ ಫೇಸ್ ಬುಕ್ ಪುಟದಲ್ಲಿಯೇ. ಕನ್ನಡಿಗ ಎಂದು ಪ್ರಚಾರಕ್ಕಾಗಿ ಹೇಳಿಕೊಳ್ಳುವ ರಾಜಮೌಳಿ ಅವರಿಗೆ ಕನ್ನಡಿಗರ ಬಗ್ಗೆ ಯಾವ ಪ್ರೀತಿಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

    ಜಗನ್‌ಗೆ ರಾಜಮೌಳಿ ಕೃತಜ್ಞತೆ

    ಜಗನ್‌ಗೆ ರಾಜಮೌಳಿ ಕೃತಜ್ಞತೆ

    ಚಿತ್ರಮಂದಿರಗಳ ಕನಿಷ್ಠ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡುವ ಮೂಲಕ ಸಹಾಯ ಮಾಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ರಾಜಮೌಳಿ ಧನ್ಯವಾದ ಸಲ್ಲಿಸಿದ್ದಾರೆ. ಈ ಜಾಗತಿಕ ಸಂಕಷ್ಟವು ಸಿನಿಮಾ ರಂಗ ಮತ್ತು ಚಿತ್ರಮಂದಿರಗಳ ಮಾಲೀಕರಿಗೆ ಹೊಡೆತ ನೀಡಿರುವಾಗ ಚಿತ್ರೋದ್ಯಮಕ್ಕೆ ಭರವಸೆ ನೀಡಿದ್ದೀರಿ ಎಂದು ರಾಜಮೌಳಿ ಬರೆದಿದ್ದರು.

    RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?

    ಕನ್ನಡಿಗರ ಬಗ್ಗೆ ಅನುಕಂಪವಿಲ್ಲ

    ಕನ್ನಡಿಗರ ಬಗ್ಗೆ ಅನುಕಂಪವಿಲ್ಲ

    ಅದಕ್ಕು ಸುದೀರ್ಘ ಕಾಮೆಂಟ್ ಬರೆದಿರುವ ರಾಜೇಂದ್ರ ಸಿಂಗ್ ಬಾಬು, ರಾಜಮೌಳಿ ಒಬ್ಬ ಸ್ವಾರ್ಥಿ ಮತ್ತು ಅವಕಾಶವಾದಿ ಎಂದು ಕಿಡಿಕಾರಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಅವರಿಗೆ ಕರ್ನಾಟಕದ ಜನರ ಬಗ್ಗೆ ಯಾವುದೇ ಅನುಕಂಪ ಇರಲಿಲ್ಲ. ಹಾಗೆಯೇ ಯಾವ ಸಹಾಯವನ್ನೂ ಮಾಡಲಿಲ್ಲ. ಯಾವಾಗ ಅವರ ಸಿನಿಮಾ ಬಿಡುಗಡೆಯಾದಾಗ, ಅವರ ಸಿನಿಮಾಗಳ ವಿರುದ್ಧ ಪ್ರತಿಭಟನೆಗಳು ನಡೆಯುವಾಗ ನಾನು ಕನ್ನಡಿಗ, ರಾಯಚೂರಿನವನು ಎಂದು ಹೇಳಿಕೊಳ್ಳುತ್ತಾರೆ.

    ರಾಜ್ ಕುಮಾರ್ ಸಿನಿಮಾಗಳ ದೃಶ್ಯಗಳು

    ರಾಜ್ ಕುಮಾರ್ ಸಿನಿಮಾಗಳ ದೃಶ್ಯಗಳು

    ಆ ಸಮಯದಲ್ಲಿ ಒಂದಷ್ಟು ಹರುಕು ಮುರುಕು ತೆಲುಗು ಮಿಶ್ರಿತ ಕನ್ನಡ ಪದಗಳನ್ನು ಆಡುತ್ತಾರೆ. ಡಾ. ರಾಜ್ ಕುಮಾರ್ ಅವರ ರಾಜಾ ನನ್ನ ರಾಜಾ ಮತ್ತು ಮಯೂರ ಸಿನಿಮಾಗಳಿಂದ ಹಾಗೂ ಕೆಲವು ಕಾದಂಬರಿಗಳಿಂದ ಕಥೆಗಳನ್ನು ಕದಿಯುತ್ತಾರೆ.

    ಫೋಟೋ ವೈರಲ್: ರಾಜಮೌಳಿ 'ರಾಮಾಯಣ'ದಲ್ಲಿ ಮಹೇಶ್ ಬಾಬು ರಾಮಫೋಟೋ ವೈರಲ್: ರಾಜಮೌಳಿ 'ರಾಮಾಯಣ'ದಲ್ಲಿ ಮಹೇಶ್ ಬಾಬು ರಾಮ

    ಕನ್ನಡ ಕಾದಂಬರಿಗಳಿಂದ ಕದ್ದಿರುವುದು

    ಕನ್ನಡ ಕಾದಂಬರಿಗಳಿಂದ ಕದ್ದಿರುವುದು

    ದರ್ಶನ್ ಅವರ ಮದಕರಿ ನಾಯಕ ಚಿತ್ರಕ್ಕೆ ಕೆಲಸ ಮಾಡುವ ಸಂದರ್ಭದಲ್ಲಿ ಅವರು ನಮ್ಮ ಅನೇಕ ಕನ್ನಡ ಕಾದಂಬರಿಗಳಿಂದ ದೃಶ್ಯಗಳನ್ನು ಕದ್ದಿರುವುದು ಗೊತ್ತಾಯಿತು. ಕರ್ನಾಟಕದ ಜನರು ಸಂಕಷ್ಟದಲ್ಲಿ ಇರುವಾಗ ಅವರು ಎಂದಿಗೂ ಕಾಳಜಿ ತೋರಿಸಿಲ್ಲ. ನಾನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ಉಪನ್ಯಾಸವೊಂದಕ್ಕೆ ಸ್ಪೀಕರ್ ಆಗಿ ಬರುವಂತೆ ನಮ್ಮ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು. ಆದರೆ ಅದಕ್ಕೆ ಅವರು ಸ್ಪಂದಿಸಲಿಲ್ಲ. ನಮ್ಮ ಕರೆಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ.

    ಕಾರ್ಯಕ್ರಮ ಚೆನ್ನಾಗಿ ನಡೆದಿತ್ತು

    ಕಾರ್ಯಕ್ರಮ ಚೆನ್ನಾಗಿ ನಡೆದಿತ್ತು

    ತೆಲುಗು ಚಿತ್ರರಂಗದಲ್ಲಿ ನನಗೆ ಇರುವ ಎಲ್ಲ ಪ್ರಭಾವಗಳನ್ನೂ ಬಳಸಿಕೊಂಡೆ. ಆದರೂ ಅವರು ತಲೆಕೆಡಿಸಿಕೊಳ್ಳಲಿಲ್ಲ. ನಮ್ಮ ಮನವಿಗೆ ಮಣಿರತ್ನಂ, ಸಂಜಯ್ ಲೀಲಾ ಬನ್ಸಾಲಿ, ಓಂ ಪ್ರಕಾಶ್ ಮೆಹ್ರಾ ಅವರಂತಹ ನಿರ್ದೇಶಕರು ಬಂದಿದ್ದರು. ರಾಜಮೌಳಿ ಬಾರದೆ ಇದ್ದದ್ದಕ್ಕೆ ನಾವು ಯೋಚಿಸಲಿಲ್ಲ. ನಮ್ಮ ಕಾರ್ಯಕ್ರಮ ಬಹಳ ಚೆನ್ನಾಗಿ ನಡೆದಿತ್ತು.

    ರಾಜ್ ಕುಮಾರ್, ತರಾಸುಗೆ ಕೃತಜ್ಞರಾಗಿರಬೇಕು

    ರಾಜ್ ಕುಮಾರ್, ತರಾಸುಗೆ ಕೃತಜ್ಞರಾಗಿರಬೇಕು

    ಅವರ ಸಿನಿಮಾ ಬಿಡುಗಡೆಯಾದಾಗ ಈ ಮಹಾನ್ ಕನ್ನಡಿಗನ ನಿಜವಾದ ಬಣ್ಣ ಬಯಲಾಗುತ್ತದೆ. ರಾಜ್ಯಕ್ಕೆ ಅನುಗುಣವಾಗಿ ಬಣ್ಣ ಬದಲಿಸಿಕೊಳ್ಳುವ ಎಂತಹ ಬಣ್ಣ ಬಣ್ಣದ ಮನುಷ್ಯ. ನಮ್ಮ ಕನ್ನಡದ ಪ್ರೇಕ್ಷಕರ ಆಶ್ರಯದಲ್ಲಿ ಅವರು ಬದುಕುತ್ತಿರುವುದಕ್ಕೆ ಹೆಮ್ಮೆ ಪಡುತ್ತೇವೆ. ಅವರು ಡಾ. ರಾಜ್ ಕುಮಾರ್ ಮತ್ತು ತ.ರಾ.ಸು ಅವರಿಗೆ ಕೃತಜ್ಞರಾಗಿರಬೇಕು ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

    English summary
    Kannada director Rajendra Singh Babu slams SS Rajamouli for not caring Karnataka people during crisis.
    Thursday, June 11, 2020, 9:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X